ದೇಶ

ದೆಹಲಿಯಲ್ಲಿಂದು ಸೋನಿಯಾ ಗಾಂಧಿ ಆತ್ಮಕಥೆ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಭಾಗಿ | Sonia Gandhi

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 16) ದೆಹಲಿಯಲ್ಲಿ ಔಪಚಾರಿಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ತಮಿಳುನಾಡು ಸಿಎಂ ವಿಜಯ್ ಭಾಗವಹಿಸಲಿದ್ದಾರೆ.

ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕ ಇಂದು(ನ. 16) ದೆಹಲಿಯಲ್ಲಿ ಔಪಚಾರಿಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದಲ್ಲಿ ತಮಿಳುನಾಡು ಸಿಎಂ ವಿಜಯ್ ಭಾಗವಹಿಸಲಿದ್ದಾರೆ.

ರಾಜಧಾನಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವು ಖಾಸಗಿಯಾಗಿ ನಡೆಯಲಿದೆ. ಸಿಎಂ ವಿಜಯ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದಾರೆ. ಜೊತೆಗೆ ಗಾಂಧಿ ಕುಟುಂಬದ ಆಪ್ತರನ್ನು ಸಹ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

ಹಾರ್ಪರ್‌ಕಾಲಿನ್ಸ್ ಇಂಡಿಯಾ ಪ್ರಕಟಿಸಿದ ಈ ಆತ್ಮಚರಿತ್ರೆಯು, ಇಟಲಿಯಲ್ಲಿ ಸೋನಿಯಾ ಗಾಂಧಿಯವರ ಜನನ, ಯುಕೆಯಲ್ಲಿನ ಜೀವನ ಮತ್ತು ಅವರ ಪತಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಭೇಟಿ, ಭಾರತಕ್ಕೆ ಆಗಮನ ಮತ್ತು ಅಂತಿಮವಾಗಿ ಅಧಿಕಾರಕ್ಕೆ ಏರುವಿಕೆಯ ಬಗ್ಗೆ ಬರೆದಿದ್ದಾರೆ.

1936ರಲ್ಲಿ ಪ್ರಕಟವಾದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ "ಆನ್ ಆಟೋಬಯಾಗ್ರಫಿ" ಬಳಿಕ ನೆಹರು-ಗಾಂಧಿ ಕುಟುಂಬದಿಂದ ಆತ್ಮಚರಿತ್ರೆ ಬರೆದ ಎರಡನೇ ನಾಯಕಿ ಸೋನಿಯಾ ಗಾಂಧಿ. 544 ಪುಟಗಳ ಈ ಆತ್ಮಚರಿತ್ರೆಯಲ್ಲಿ ಪತಿ ರಾಜೀವ್ ಗಾಂಧಿಯವರೊಂದಿಗಿನ ತಮ್ಮ ವಿವಾಹದ ಬಗ್ಗೆ ಹೇಳಿದ್ದು, ತಮ್ಮ ಅಧಿಕಾರದ ಕೆಲವು ಘಟನೆಗಳನ್ನು ವಿವರಿಸಿದ್ದಾರೆ.

ಇನ್ನೂ ಕರ್ನಾಟಕದೊಂದಿಗಿನ ಮೇಕೆದಾಟು ಸಮಸ್ಯೆಯ ಹಿನ್ನೆಲೆಯಲ್ಲಿ ಸಿಎಂ ವಿಜಯ್ ಇಂದು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಭೇಟಿ ಮಾಡುವ ನಿರೀಕ್ಷೆಯಿದೆ. ಕಳೆದ ಜೂನ್‌ನಲ್ಲಿ, ದೆಹಲಿಗೆ ಭೇಟಿ ನೀಡಿ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ವಿಜಯ್, ಬಳಿಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು (ಏಜೆನ್ಸೀಸ್).