NEET ಅಕ್ರಮದ ವಿರುದ್ಧ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್
- NEET ಅಕ್ರಮದ ವಿರುದ್ಧ 18 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್
- ಅವರ ಜೀವ ಉಳಿಸಲು, ಬಲವಂತವಾಗಿ ಆಹಾರ ನೀಡಲು ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆ.
- ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹೋರಾಡುತ್ತಿರುವ ಸೋನಮ್ ವಾಂಗ್ಚುಕ್
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಕಂಡುಬರುತ್ತಿರುವ ಅಕ್ರಮವನ್ನು ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ, ಇಂಜಿನಿಯರ್ ಹಾಗೂ ಪರಿಸರವಾದಿ ಸೋನಮ್ ವಾಂಗ್ಚುಕ್ (Sonam Wangchuk Hunger Strike) ಕಳೆದ 18 ದಿನಗಳಿಂದ ದೆಹಲಿಯ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಈ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಿಂದ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ದಿನ ಕಳೆದಂತೆ ಹದಗೆಡುತ್ತಿರುವ ಹಿನ್ನಲೆ ವಾಂಗ್ಚುಕ್ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರವನ್ನು ತಿನ್ನಿಸಬೇಕೆಂದು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ವಾಂಗ್ಚುಕ್ ಅವರ ಹೋರಾಟ 18 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಅವರು ಇಲ್ಲಿವರೆಗೆ ಸುಮಾರು 8 ಕಿ.ಲೋ ತೂಕವನ್ನು ಕಳೆದುಕೊಂಡಿದ್ದು, ಈ ಸತ್ಯಾಗ್ರಹ ಹೀಗೆ ಮುಂದುವರಿದರೆ ಇನ್ನೆರಡು ದಿನಗಳಲ್ಲಿ ಅವರು ಸಾಯಬಹುದು. ಹೀಗಾಗಿ ದೆಹಲಿ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕೂಡಲೇ ವಾಂಗ್ಚುಕ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.
ವಾಂಗ್ಚುಕ್ ಸತ್ತರೆ ದೇಶಕ್ಕೆ ಕಳಂಕ!
ಸೋಮನ್ ವಾಂಗ್ಚುಕ್ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಈ ಹೋರಾಟದಲ್ಲಿ ನಿರತರಾಗಿದ್ದಾರೆ. ಆದರೆ ಅವರ ಈ ಹೋರಾಟವನ್ನ, ಅಹವಾಲನ್ನು ಸರ್ಕಾರ ಗುರುತಿಸಲು ವಿಫಲವಾಗಿದೆ. ಕೇಂದ್ರ ಸರ್ಕಾರ ಸೋಮನ್ ವಾಂಗ್ಚುಕ್ ಒಬ್ಬ ಭಯೋತ್ಪಾದಕ, ದೇಶದ್ರೋಹಿ ಎಂಬ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ.
ಒಂದು ವೇಳೆ ಸೋನಮ್ ವಾಂಗ್ಚುಕ್ ಈ ಉಪವಾಸ ಮಾಡುತ್ತಲೇ ಸಾವನ್ನಪ್ಪಿದರೆ ಅದು ಕೇವಲ ದೇಶಕ್ಕೆ ಮಾತ್ರವಲ್ಲ ಈಡೀ ಪ್ರಪಂಚಕ್ಕೆ ಕಳಂಕವಾಗುತ್ತದೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ವಾಂಗ್ಚುಕ್ ಇಲ್ಲಿವರೆಗೆ ಕೇವಲ ನೀರನ್ನು ಸೇವಿಸುತ್ತಿದ್ದಾರೆ. ಆದರೆ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ. ಹೀಗಾಗಿ ಅವರು ಸರ್ಕಾರದ ವಿರುದ್ಧ ಹೋರಾಡುತ್ತಿದರೂ ಸಹ ಸರ್ಕಾರ ಇಲ್ಲಿ ಮದ್ಯ ಪ್ರವೇಶಿಸಿ ವಾಂಗ್ಚುಕ್ ಅವರು ಆಹಾರ ಸೇವಿಸುವಂತೆ ಮಾಡಬೇಕೆಂದು ಪಿಐಎಲ್ ನಲ್ಲಿ ಹೇಳಲಾಗಿದೆ, (ಏಜನ್ಸೀಸ್).