ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಚುನಾವಣಾ ಆಯೋಗದ (ECI) ನೆಡೆಸುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (SIR) ವಿರುದ್ಧದ ನಾಳೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಸೋಮವಾರ (ಜ.5) ಘೋಷಿಸಿದರು.
ಈ ಬಗ್ಗೆ ಸಾಗರ್ ದ್ವೀಪದಲ್ಲಿ ನೆಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಪರಿಷ್ಕರಣಾ ಕಾರ್ಯವು ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿದೆ. ಇದು ರಾಜ್ಯಾದ್ಯಂತ ಅನೇಕ ಸಾವುಗಳು ಮತ್ತು ವ್ಯಾಪಕ ಕಿರುಕುಳಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಮತದಾರರ ಸಾರ್ವಭೌಮತ್ವ ಸವಾಲು
SIR ಪ್ರಕ್ರಿಯೆಯ ಅಮಾನವೀಯ ನಡವಳಿಕೆಯನ್ನು ಉಲ್ಲೇಖಿಸಿ, ಜನವರಿ 6 ರಂದು ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ದಿದೀ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕ್ರಿಯೆಯು ಇನ್ನು ಮುಂದೆ ಆಡಳಿತಾತ್ಮಕವಲ್ಲ, ಬದಲಾಗಿ ಭಯದ ಮೂಲ ಎಂದು ಮಮತಾ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ವೃದ್ಧರು ಮತ್ತು ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ನಾಗರಿಕರು ತಮ್ಮ ಗುರುತನ್ನು ಸಾಬೀತುಪಡಿಸಲು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವಂತೆ ಒತ್ತಾಯಿಸಲಾಗುತ್ತದೆ ಎಂದು SIR ವಿರುದ್ಧ ಕಿಡಿಕಾರಿದ್ದಾರೆ.
SIR ಪ್ರಕ್ರಿಯೆಯಲ್ಲಿ ಯಾವುದೇ ಸರಿಯಾದ ಕಾರಣವಿಲ್ಲದೆ ಹೆಸರುಗಳನ್ನು ನಿರಂಕುಶವಾಗಿ ಅಳಿಸಲಾಗುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಅಲ್ಲದೆ, ಇದನ್ನು ಬ್ಯಾನರ್ಜಿ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಮೇಲಿನ ನೇರ ದಾಳಿ ಎಂದು ಕರೆದಿದ್ದಾರೆ.
ಮುಂದುವರೆದು ಮಾತನಾಡಿದ ಮಮತಾ, ಎಸ್‌ಐಆರ್ ಪ್ರಾರಂಭವಾದಾಗಿನಿಂದ, ಭಯದಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹಲವಾರು ಜನರು ಆಸ್ಪತ್ರೆಯಲ್ಲಿದ್ದಾರೆ. ಯಾರಾದರೂ ತಮ್ಮ ವೃದ್ಧ ಪೋಷಕರನ್ನು ತಮ್ಮ ಗುರುತನ್ನು ಸಾಬೀತುಪಡಿಸಲು ಸಾಲಿನಲ್ಲಿ ನಿಲ್ಲಿಸಿದರೆ ಬಿಜೆಪಿ ನಾಯಕರಿಗೆ ಹೇಗೆ ಅನಿಸುತ್ತದೆ? ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
AI ಮತ್ತು WhatsApp ಪಿತೂರಿ
2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ತಾಂತ್ರಿಕ ಪಿತೂರಿ ಎಂದು ಕರೆದಿರುವ ಬಗ್ಗೆ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಭೌತಿಕ ಪರಿಶೀಲನೆಯಿಲ್ಲದೆ ಮದುವೆ ಅಥವಾ ಉಪನಾಮ ಬದಲಾವಣೆಗಳಂತಹ ಮಾನದಂಡಗಳ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ ಎಂದು ಬಂಗಾಳ ಸಿಎಂ ಆರೋಪಿಸಿದ್ದಾರೆ. ಅಲ್ಲದೆ, ಅಧಿಕೃತ ಶಾಸನಬದ್ಧ ಅಧಿಸೂಚನೆಗಳ ಬದಲಿಗೆ ವಾಟ್ಸಾಪ್‌ನಂತಹ ಅನೌಪಚಾರಿಕ ಮಾರ್ಗಗಳ ಮೂಲಕ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಚುನಾವಣಾ ಆಯೋಗವನ್ನು ಟೀಕಿಸಿದರು,(ಏಜೆನ್ಸೀಸ್).