ಗುವಾಹಟಿ ಹೊರವಲಯದಲ್ಲಿ ಹಳಿ ತಪ್ಪಿ ನೆಲಕ್ಕುರುಳಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು. 
ದೇಶ

"ಸರ್, ರೆಡ್ ಲೈಟ್ ಇದೆ.. ಆದ್ರೆ ಏನೂ ವರ್ಕ್ ಆಗ್ತಿಲ್ಲ!": ಕೋಲ್ಕತ್ತ-ಸೈರಾಂಗ್ ಎಕ್ಸ್‌ಪ್ರೆಸ್‌ ದುರಂತ; ಹಳಿ ತಪ್ಪುವ ಮುನ್ನ ಲೋಕೋ ಪೈಲಟ್ ಹೇಳಿದ್ದೇನು? Kolkata Sairang Express

ಗುವಾಹಟಿ: ಮಿಜೋರಾಂನಿಂದ ಕೋಲ್ಕತ್ತಾದತ್ತ ಪ್ರಯಾಣ ಬೆಳೆಸಿದ್ದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್ ರೈಲಿನ ಸುಮಾರು ಏಳು ಬೋಗಿಗಳು, ಅಸ್ಸಾಂನ ಗುವಾಹಟಿ ಹೊರವಲಯದಲ್ಲಿ ಹಳಿತಪ್ಪಿದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ವರದಿಯಾಗಿದೆ. ಅಪಘಾತಕ್ಕೂ ಮೊದಲು ಲೋಕೋ ಮೊಟೀವ್​ನಲ್ಲಿ ಕ್ಯಾಬಿನ್​ನಲ್ಲಿ ಲೋಕೋ ಪೈಲಟ್​ ಮಾತನಾಡಿರುವ ವಿಡಿಯೋ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.

ರೆಡ್​ ಲೈಟ್​ ಇದೆ...ಆದ್ರೆ ಏನೂ ವರ್ಕ್​ ಆಗ್ತಾ ಇಲ್ಲ!

ಈ ಘಟನೆಯೂ ನವೆಂಬರ್​ 11 ರಂದು ಬೆಳಿಗ್ಗೆ 7 ಗಂಟೆ ಸಮಯಕ್ಕೆ ನಡೆದಿದೆ ಎನ್ನಲಾಗಿದೆ. ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋನಲ್ಲಿ, ರೈಲಿನ ಡ್ರೈವರ್​, ಅಂದರೆ ಲೋಕೋ ಪೈಲಟ್​​, "ಸರ್​​, ಮುಂದೆ ರೆಡ್​ ಲೈಟ್​ ಆನ್​​ ಇದೆ.. ಎಮರ್ಜೆನ್ಸಿ ಇದೆ. ಆದರೆ ಏನೂ ಕೆಲಸ ಮಾಡುತ್ತಿಲ್ಲ, ಏನೂ ಸರಿಯಾಗಿ ವರ್ತಿಸುತ್ತಿಲ್ಲ" ಎಂದು ಲೋಕೋ ಪೈಲಟ್​ ರೈಲ್ವೆ ನಿಯಂತ್ರಣ ಮಂಡಲಿಗೆ ತಿಳಿಸಿದ್ದಾರೆ.

ಈ ಸಂಭಾಷಣೆ ನಡೆದ ಕೆಲವೇ ನಿಮಿಷದಲ್ಲಿ ರೈಲು ಬ್ಯಾರಿಕೇಡ್​ಗೆ ಢಿಕ್ಕಿ ಹೊಡೆದಿದ್ದು, ಹಳಿ ತಪ್ಪಿದ ರೈಲು ನೆಲಕ್ಕುರಳಿದೆ. ಕೆಲ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದರೂ, ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.

ಅಷ್ಟಕ್ಕೂ ಆಗಿದ್ದೇನು? ಮುಂದುವರಿದ ತನಿಖೆ!

ವೈರಲ್​ ವಿಡಿಯೋ ಪ್ರಕಾರ, ನಿಲ್ದಾಣದಲ್ಲಿ ರೆಡ್​ ಲೈಟ್​ ಆನ್​ ಇದ್ದ ಕಾರಣ ಲೋಕೋ ಪೈಲಟ್​, ರೈಲನ್ನು ನಿಲ್ಲಿಸಲು ಎಮರ್ಜೆನ್ಸಿ ಸಿಸ್ಟಮ್​ ಆನ್​ ಮಾಡಿದ್ದಾನೆ. ಆದರೆ ಈ ಎಮರ್ಜೆನ್ಸಿ ಸಿಸ್ಟಮ್ ಸರಿಯಾಗಿ ಕೆಲಸ ಮಾಡದ ಕಾರಣ, ಬ್ರೇಕಿಂಗ್​ ಫೇಲ್​ ಆಗಿದೆ. ಹೀಗಾಗಿ ರೈಲು ಹಳಿ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಆದರೆ, ಈ ಘಟನೆ ನಿಖರವಾಗಿ ಹೀಗೇ ನಡೆದಿದೆ ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ರೈಲ್ವೆ ಇಲಾಖೆ ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು, ನಂತರದ ದಿನಗಳಲ್ಲಿ ಸ್ಪಷ್ಟ ಕಾರಣ ತಿಳಿದು ಬರಲಿದೆ. ವಿಡಿಯೋನಲ್ಲಿ ಲೋಕೋ ಪೈಲಟ್​ ಹೇಳಿದಂತೆ, ಎಮರ್ಜೆನ್ಸಿ ಸಿಸ್ಟಮ್​ ಕೆಲಸ ಮಾಡಿಲ್ಲ ಎಂದರೆ, ಏಕೆ ಮಾಡಿಲ್ಲ? ಅವರಲ್ಲಿ ಏನು ಸಮಸ್ಯೆ ಯಾಗಿತ್ತು? ಅದನ್ನು ಹೇಗೆ ಅಭಿವೃದ್ಧಿ ಪಡಿಸಬಹುದು? ಎಂಬೆಲ್ಲಾ ಪ್ರಶ್ನೆಗಳಿಗೆ ತನಿಖೆ ನಂತರವೇ ಉತ್ತರ ದೊರಕಬೇಕಿದೆ, (ಏಜೆನ್ಸೀಸ್​). ​