ದೇಶವನ್ನು ಬೆಚ್ಚಿ ಬೀಳಿಸಿದ್ದ ಸಿದ್ದು ಮೂಸೆವಾಲಾ ಹತ್ಯಾ ಪ್ರಕರಣ
- ದೇಶವನ್ನು ಬೆಚ್ಚಿ ಬೀಳಿಸಿದ್ದ ಸಿದ್ದು ಮೂಸೆವಾಲಾ ಹತ್ಯಾ ಪ್ರಕರಣ
- ಪ್ರಮುಖ ಆರೋಪಿಗಳಾದ ಪವನ್ ಬಿಷ್ಣೋಯ್ ಮತ್ತು ಜಗ್ತಾರ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು
- ಲಾರೆನ್ಸ್ ಬಿಷ್ಣೋಯ್ನ ಗ್ಯಾಂಗ್‌ನ ಸದಸ್ಯರಾಗಿರುವ ಪವನ್ ಮತ್ತು ಜಗ್ತಾರ್
ನವದೆಹಲಿ: ಪಂಜಾಬಿ ಗಾಯಕ ಹಾಗೂ ರಾಜಕಾರಣಿ ಸಿದ್ದು ಮೂಸೆವಾಲಾ ಕೊಲೆ ಪ್ರಕರಣ(Sidhu Moosewala Murder Case)ಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಾದ ಪವನ್ ಬಿಷ್ಣೋಯ್ ಮತ್ತು ಜಗ್ತಾರ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನಲೆ
ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸ್ ವಾಲಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂತೆಗೆದುಕೊಂಡ ಮರುದಿನ ಅಂದರೆ ಮೇ 29, 2022 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಯುವಕರ ಫೇವರೆಟ್ ರ‍್ಯಾಪ್ ಹಾಡುಗಾರ ಹಾಗೂ ಉದಯೋನ್ಮುಖ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಸಿದ್ದು ಮೂಸೆವಾಲಾ, ತನ್ನ ಇಬ್ಬರು ಸಹಾಯಕರೊಂದಿಗೆ ತಮ್ಮ ವಾಹನದಲ್ಲಿ ಸಂಚರಿಸುತ್ತಿದ್ದಾಗ, ದಾಳಿ ಮಾಡಿದ ಆಗಂತುಕರು ಬರೊಬ್ಬರಿ 19 ಸುತ್ತು ಗುಂಡುಗಳನ್ನು ಫೈರ್ ಮಾಡಿ ಮೂಸೆವಾಲಾನನ್ನು ಕೊಂದು ಹಾಕಿದರು.
ಬಿಷ್ಣೋಯ್ ಗ್ಯಾಂಗ್ ಕೈವಾಡ
ಈ ಕೊಲೆ ಸುದ್ದಿ ಹೊರ ಬೀಳುತ್ತಿದ್ದಂತೆ ಲಾರೆನ್ಸ್ ಬಿಷ್ಣೋಯ್ ಸಿಂಡಿಕೇಟ್‌ನೊಂದಿಗೆ ಸಂಪರ್ಕ ಹೊಂದಿರುವ ಕೆನಡಾ ಮೂಲದ ಗೋಲ್ಡಿ ಬ್ರಾರ್, ಸಾಮಾಜಿಕ ಮಾಧ್ಯಮದ ಮೂಲಕ ಈ ಕೊಲೆ ಜವಾಬ್ದಾರಿಯನ್ನು ವಹಿಸಿಕೊಂಡರು. 2021 ರಲ್ಲಿ ತಮ್ಮ ಗ್ಯಾಂಗ್‌ನ ವಿಕ್ಕಿ ಮಿದ್ದುಖೇರಾ ಅವರ ಕೊಲೆಯನ್ನು ಸಿದ್ದು ಮಾಡಿಸಿದ್ದು, ಆ ಕೊಲೆಯ ಸೇಡಿನ ರೂಪದಲ್ಲಿ ಈ ಕೊಲೆಯನ್ನು ಮಾಡಲಾಗಿದೆ ಎಂದು ಬ್ರಾರ್ ಹೇಳಿಕೆ ನೀಡಿದರು.
ಆರೋಪಿಗಳ ಪಾತ್ರ ಮತ್ತು ಕಾನೂನು ಪ್ರಯಾಣ
ಜೈಲಿನಲ್ಲಿರುವ ಗ್ಯಾಂಗ್ ನಾಯಕ ಲಾರೆನ್ಸ್ ಬಿಷ್ಣೋಯ್‌ಗೆ ಸಂಬಂಧಿಸಿದ ಪವನ್ ಬಿಷ್ಣೋಯ್ ಮತ್ತು ಜಗ್ತಾರ್ ಸಿಂಗ್ ಅವರನ್ನು ಆರೋಪಪಟ್ಟಿಯಲ್ಲಿ ಶೂಟರ್‌ಗಳು ಮತ್ತು ಯೋಜನೆ ರೂಪಿಸಿದ ಆರೋಪದಲ್ಲಿ ಬಂಧಿಸಲಾಯಿತು.
ಅತ್ಯಾಧುನಿಕ ಎಕೆ ರೈಫಲ್‌ಗಳನ್ನು ಬಳಸಿಕೊಂಡು ಇವರು ಮೂಸೆವಾಲಾರನ್ನು ಕೊಲೆ ಮಾಡಿದ್ದಾಗಿ ಪೊಲೀಸರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮೂವತ್ತಕ್ಕೂ ಅಧಿಕ ಶಂಕಿತರನ್ನು ವಿಚಾರಣೆ ನಡೆಸಿದ ನಂತರ ಈ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಡೆಯುತ್ತಿರುವ ತನಿಖೆ
ಈ ಜಾಮೀನು ನಿರ್ಧಾರವು ತಪ್ಪನ್ನು ಮುಕ್ತಗೊಳಿಸದಿದ್ದರೂ, ದರೋಡೆಕೋರ-ಸಂಬಂಧಿತ ಪ್ರಕರಣಗಳಲ್ಲಿ ತ್ವರಿತ ವಿಚಾರಣೆಗಳಿಲ್ಲದೆ ದೀರ್ಘಕಾಲದ ಜೈಲುವಾಸದ ನ್ಯಾಯಾಂಗ ಪರಿಶೀಲನೆಯನ್ನು ಒತ್ತಿಹೇಳುತ್ತದೆ. ಸಾಕ್ಷಿಗಳ ಪರೀಕ್ಷೆಗಳು ಮತ್ತು ವಿಧಿವಿಜ್ಞಾನ ತನಿಖೆ ಇನ್ನೂ ನಡೆಯುತ್ತಿದ್ದು, ಈ ಪ್ರಕ್ರಿಯೆಯನ್ನು ವೇಗವಾಗಿ ಮುಗಿಸಲು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ಮೂಸೆವಾಲಾ ಅವರ ಕುಟುಂಬವು ತಮ್ಮ ಮಗನ ಸಾವಿಗೆ ನ್ಯಾಯ ದೊರೆಯಬೇಕೆಂದು ಕೋರ್ಟ್ ಮೆಟ್ಟಿಲನ್ನು ಹತ್ತಿದ್ದು. ರಾಜಕೀಯ ಮತ್ತು ಭೂತಗ ಲೋಕದ ಬೆದರಿಕೆಗಳಿಗೆ ಜಗ್ಗದೆ ಸಿದ್ದು ತಂದೆ ಬಾಲ್ಕೌರ್ ಸಿಂಗ್ ಪ್ರಕರಣವನ್ನು ಮುಂದುವರೆಸುತ್ತಿದ್ದಾರೆ.
ರಾಜಕೀಯ ಸಂಬಂಧ, ಭದ್ರತಾ ವೈಫಲ್ಯ ಮತ್ತು ಪಂಜಾಬಿ ಸಂಗೀತದ ಮಾರಕ ಪೈಪೋಟಿಯ ಕುರಿತು ಈ ಪ್ರಕರಣ ಸುತ್ತುತ್ತಿದ್ದು, ಈ ಪ್ರಕರಣ ಯಾವ ರೀತಿ ಕೊನೆಗಾಣಲಿದೆ ಎನ್ನುವುದನ್ನು ಈಡೀ ದೇಶ ಕಾಯುತ್ತಿದೆ,(ಏಜನ್ಸೀಸ್).