ದೇಶ

ಮಹಿಳಾ ಪೇದೆ ಜೊತೆ ಅಸಭ್ಯ ವರ್ತನೆ ಆರೋಪ: ರಾಹುಲ್ ಗಾಂಧಿ ನಡತೆಯನ್ನೇ ಪ್ರಶ್ನಿಸಿದ ಬಿಜೆಪಿ ನಾಯಕ! | Rahul Gandhi

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಗುರುವಾರ ಬಿಜೆಪಿ ವಾಗ್ದಾಳಿ ನಡೆಸಿದೆ.

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಗುರುವಾರ ಬಿಜೆಪಿ ವಾಗ್ದಾಳಿ ನಡೆಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಪುರುಷ ಪ್ರಧಾನ ವ್ಯವಸ್ಥೆಯನ್ನು ಮಟ್ಟಹಾಕಿ ಎಂಬ ಘೋಷಣೆಯನ್ನು ಮೊಳಗಿಸುವ ರಾಹುಲ್ ಗಾಂಧಿ, ಸ್ವತಃ ಅವರೇ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಟೀಕಿಸಿದ್ದಾರೆ.

ಏನಿದು ಘಟನೆ..?

ದೆಹಲಿಯ ಅಶೋಕಾ ರಸ್ತೆ ಬಳಿ ನಡೆದ ಧರಣಿ ಸತ್ಯಾಗ್ರಹದ ವೇಳೆ, ಮಹಿಳಾ ಪ್ರತಿಭಟನಾಕಾರರೊಬ್ಬರನ್ನು ಪೊಲೀಸರು ಕರೆದೊಯ್ಯಲು ಪ್ರಯತ್ನಿಸಿದಾಗ ಉಂಟಾದ ಘರ್ಷಣೆಯ ವಿಡಿಯೋವನ್ನು ಆಧರಿಸಿ ಬಿಜೆಪಿ ಈ ಗಂಭೀರ ಆರೋಪ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಡಿಯೋವನ್ನು ಪ್ರದರ್ಶಿಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ರಾಹುಲ್ ಗಾಂಧಿ ಅವರು ಮಹಿಳಾ ಪೊಲೀಸ್ ಅಧಿಕಾರಿಯನ್ನು ತಳ್ಳುತ್ತಿರುವುದು ಆ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಲು ಇಂಡಿಯಾ ಒಕ್ಕೂಟದ ವಿರೋಧ ಪಕ್ಷದ ಸಂಸದರು ಅಕ್ಟೋಬರ್ 7 ರಂದು ಅಶೋಕಾ ರಸ್ತೆಯಲ್ಲಿ ಈ ಧರಣಿ ಪ್ರತಿಭನೆಯನ್ನು ಹಮ್ಮಿಕೊಂಡಿದ್ದರು. ಚುನಾವಣಾ ಆಯುಕ್ತರನ್ನು ಭೇಟಿಯಾಗಲು ಅವಕಾಶ ಕೋರಿ ಮುಖಂಡರು ಸತತ ಎಂಟು ಗಂಟೆಗಳ ಕಾಲ ಧರಣಿ ನಡೆಸಿದ ಮರುದಿನವೇ ಈ ಘಟನೆ ನಡೆದಿತ್ತು.

ವಿರೋಧ ಪಕ್ಷದ ನಾಯಕರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಆದರೆ ಪೊಲೀಸರು ಅವರನ್ನು ಅಶೋಕಾ ರಸ್ತೆಯ ವೃತ್ತದ ಬಳಿ ತಡೆಗಟ್ಟಿದರು. ಬಳಿಕ ಆ ನಾಯಕರೆಲ್ಲರನ್ನೂ ಪೊಲೀಸರು ವಶಕ್ಕೆ ಪಡೆದರು. ಬಿಜೆಪಿ ನಾಯಕ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಆ ವಿಡಿಯೋ ಕೂಡ ಅದೇ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ.

ಇದನ್ನೂ ಓದಿ:ರಾಹುಲ್ ಗಾಂಧಿ ಅರಾಜಕತೆಯ ಪ್ರತೀಕ, ಸಂವಿಧಾನದ ಅರಿವಿಲ್ಲದ ಅಪಕ್ಷ ರಾಜಕಾರಣಿ!...ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ಬಿಜೆಪಿ ಕಿಡಿ | BJP

ಇದೇನಾ ನಿಮ್ಮ ನಡತೆ..?

ಈ ವಿಷಯವಾಗಿ ಮಾತನಾಡಿದ ಬಿಜೆಪಿ ವಕ್ತಾರರು, ರಾಷ್ಟ್ರೀಯ ಪಕ್ಷದ ನಾಯಕನೊಬ್ಬ ಮಹಿಳಾ ಪೊಲೀಸ್ ಅಧಿಕಾರಿಯನ್ನು ತಪ್ಪಾದ ರೀತಿಯಲ್ಲಿ ಹೇಗೆ ಸ್ಪರ್ಶಿಸಲು ಸಾಧ್ಯ..? ಪ್ರತಿಭಟನೆಯಲ್ಲಿರುವ ಮಹಿಳೆಯರಿಗೆ ಯಾವ ರೀತಿಯ ಗೌರವಯುತವಾಗಿ ಬದುಕುವ ಹಕ್ಕಿದೆಯೋ, ಅದೇ ಗೌರವದ ಹಕ್ಕು ಮಹಿಳಾ ಪೊಲೀಸ್ ಅಧಿಕಾರಿಗಳಿಗೂ ಇದೆ ಎಂದಿದ್ದಾರೆ. ರಾಹುಲ್ ಗಾಂಧಿಯವರ ಈ ನಡವಳಿಕೆಯನ್ನು ಅಪಮಾನಕರ ಎಂದು ಕರೆದ ಭಾಟಿಯಾ, ಅವರ ಈ ವರ್ತನೆಯು ಮಹಿಳಾ ಪೇದೆಯ ಘನತೆಗೆ ಧಕ್ಕೆ ತರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇನಾ ರಾಹುಲ್ ಗಾಂಧಿಯವರ ನಿಜವಾದ ನಡತೆ...? ಎಂದು ಪ್ರಶ್ನಿಸಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, ಕಾಂಗ್ರೆಸ್ ಪಕ್ಷದಿಂದ ಇಲ್ಲಿಯವರೆಗೆ ಈ ವಿಡಿಯೋದ ಬಗ್ಗೆ ಯಾವುದೇ ಸ್ಪಷ್ಟನೆ ಬಾರದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ರಾಹುಲ್ ಗಾಂಧಿಯವರೇ ಸ್ವತಃ ತಳ್ಳಾಟ ನಡೆಸಲು ಅಂತಹ ಸಂದರ್ಭ ಏನಿತ್ತು ಮತ್ತು ಆ ಪ್ರತಿಭಟನೆಯಲ್ಲಿ ಜೊತೆಯಲ್ಲಿದ್ದ ಮಹಿಳಾ ಕಾಂಗ್ರೆಸ್ ನಾಯಕಿಯರನ್ನೇ ಆ ಅಧಿಕಾರಿಯೊಂದಿಗೆ ಮಾತನಾಡಲು ಅವರು ಏಕೆ ಕಳುಹಿಸಿಲ್ಲ ಎಂದು ಬಿಜೆಪಿ ವಕ್ತಾರರು ಕಠಿಣ ಪ್ರಶ್ನೆಗಳನ್ನು ಹಾಕಿದ್ದಾರೆ.

ತಮ್ಮ ಸ್ವಂತ ಭದ್ರತಾ ಸಿಬ್ಬಂದಿಯ ರಕ್ಷಣೆಯಲ್ಲಿರುವ ಪ್ರಿಯಾಂಕಾ ಗಾಂಧಿ ಅವರು ಮಹಿಳಾ ಪೊಲೀಸ್ ಅಧಿಕಾರಿಯನ್ನೇ ತಳ್ಳಿದ್ದಾರೆ. ಹಾಗಾದರೆ, ಕೇವಲ ಗಾಂಧಿ ಕುಟುಂಬದ ಮಹಿಳೆಯರಿಗೆ ಮಾತ್ರವೇ ಎಲ್ಲೆಡೆ ಗೌರವಯುತವಾಗಿ ನಡೆಸಿಕೊಳ್ಳಿಸಿಕೊಳ್ಳುವ ಅರ್ಹತೆ ಇರುವುದು..? ಎಂದು ಭಾಟಿಯಾ ಖಾರವಾಗಿ ಪ್ರಶ್ನಿಸಿದರು(ಏಜೆನ್ಸೀಸ್​).