ರಾಹುಲ್ ಗಾಂಧಿ ಅರಾಜಕತೆಯ ಪ್ರತೀಕ, ಸಂವಿಧಾನದ ಅರಿವಿಲ್ಲದ ಅಪಕ್ಷ ರಾಜಕಾರಣಿ!...ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ಬಿಜೆಪಿ ಕಿಡಿ | BJP

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಮಿತಿಗಳನ್ನು ಮೀರಿ ಸಾವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದು, ಅವರು ಅರಾಜಕತೆಯ ಪ್ರತೀಕ ಎಂದು ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅರಾಜಕತೆಯ ಪ್ರತೀಕ, ಸಂವಿಧಾನದ ಅರಿವಿಲ್ಲದ ಅಪಕ್ಷ ರಾಜಕಾರಣಿ!...ಸುಪ್ರೀಂ ಕೋರ್ಟ್ ನೋಟಿಸ್ ಬೆನ್ನಲ್ಲೇ ಬಿಜೆಪಿ ಕಿಡಿ | BJP
Published on: 

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಮಿತಿಗಳನ್ನು ಮೀರಿ ಸಾವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದು, ಅವರು ಅರಾಜಕತೆಯ ಪ್ರತೀಕ ಎಂದು ಬಿಜೆಪಿ (BJP) ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ವರೆಗೆ ನಡೆಸಿದ ಮೆರವಣಿಗೆ ಮತ್ತು ಆವರಣದಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಪ್ರತಿಕ್ರಿಯಿಸಿದ್ದು, ಯಾರೂ ಕೂಡ ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಅಥವಾ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ನೋಟಿಸ್ ಜಾರಿಗೊಳಿಸಿದ್ದು, ಇದು ರಾಜಕೀಯ ನಾಯಕರ ನಡವಳಿಕೆಯನ್ನು ಒಪ್ಪಿಕೊಂಡಂತೆ ಅಲ್ಲ ಎಂದೂ ಸ್ಪಷ್ಟಪಡಿಸಿದೆ. ಈ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ವಕ್ತಾರ ಭಾಟಿಯಾ ರಾಹುಲ್ ವಿರುದ್ಧ ಮುಗಿಬಿದ್ದಿದ್ದಾರೆ.

ರಾಹುಲ್ ಅಪಕ್ವ, ಸಂವಿಧಾನದ ಜ್ಞಾನ ಇಲ್ಲದ ವ್ಯಕ್ತಿ!

ಇಂದು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೌರವ್ ಭಾಟಿಯಾ, ಇಂದಿನ ಪತ್ರಿಕಾಗೋಷ್ಠಿಯು ಭಾರತದ ಪ್ರಜಾಪ್ರಭುತ್ವದಲ್ಲಿ ಅರಾಜಕತೆಯ ಪ್ರತೀಕವಾಗಿರುವ ರಾಹುಲ್ ಗಾಂಧಿ ಅವರ ಕುರಿತಾಗಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನಲ್ಲಿಯೂ ವಿಚಾರಣೆ ನಡೆದಿರುವುದನ್ನು ಉಲ್ಲೇಖಿಸಿದ ಅವರು, ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯನ್ನು ದೇಶದ ಜನರು ಹೇಗೆ ನೋಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು. ಇಂತಹ ಅರಾಜಕತಾವಾದಿ, ಅಪಕ್ವ, ಜವಾಬ್ದಾರಿಯಿಲ್ಲದ ಮತ್ತು ಸಂವಿಧಾನದ ಅರಿವಿಲ್ಲದ ವ್ಯಕ್ತಿಯು ವಿರೋಧ ಪಕ್ಷದ ನಾಯಕನಾಗಿರುವುದು ದೇಶದ ದೌರ್ಭಾಗ್ಯ ಎನ್ನುವುದು ಜನರ ಅಭಿಪ್ರಾಯ ಎಂದು ಭಾಟಿಯಾ ಟೀಕಿಸಿದರು.

ಇದನ್ನೂ ಓದಿ:ಮಮತಾ ಬ್ಯಾನರ್ಜಿ ಮೇಲಿನ ಹಲ್ಲೆ ಆರೋಪ ಸಂಪೂರ್ಣ ಸುಳ್ಳು: ಘಟನೆಯ ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ಕಮಿಷನರ್! | Mamata Banerjee

ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು..?

ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದ ಪ್ರಕರಣಗಳ ಬಗ್ಗೆ ಮಾತಾನಾಡಿದ ಭಾಟಿಯಾ, ಹಿರಿಯ ವಕೀಲನಾಗಿ ತಾವೂ ಕೂಡ ಸುಪ್ರೀಂ ಕೋರ್ಟ್ ಮುಂದೆ ಹಾಜರಾಗಿದ್ದಾಗಿ ತಿಳಿಸಿ, ಅಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಂವಿಧಾನವನ್ನು ಓದಿ ಎಂದು ತಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳುವುದಾಗಿ ತಿಳಿಸಿದ ಭಾಟಿಯಾ, ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕು ಹೌದು, ಆದರೆ ಆ ಹಕ್ಕನ್ನು ಬಳಸಿ ಯಾರಾದರೂ ತನ್ನ ಮಿತಿಗಳನ್ನು ಮೀರಿ, ಸಂವಿಧಾನದ ಗಡಿಗಳನ್ನು ದಾಟಿ, ಸಾರ್ವಜನಿಕ ಸ್ಥಳದಲ್ಲಿ, ರಸ್ತೆಯಲ್ಲಿ ಅಥವಾ ಸುಪ್ರೀಂ ಕೋರ್ಟ್ ಆವರಣದಲ್ಲಿ ಗೂಂಡಾಗಿರಿ ಮಾಡಲು ಅಥವಾ ಘೋಷಣೆಗಳನ್ನು ಕೂಗಲು ಅವಕಾಶ ನೀಡುತ್ತದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದವರು ಸುಪ್ರೀಂ ಕೋರ್ಟ್‌ಗೆ ಪ್ರತಿಭಟನೆಯನ್ನು ಕೊಂಡೊಯ್ಯುವ ನಿರ್ಧಾರವನ್ನು ಪ್ರಶ್ನಿಸಿದ ಅವರು, ನ್ಯಾಯಾಲಯಗಳು ನ್ಯಾಯ ಒದಗಿಸುವ ಸ್ಥಳಗಳೇ ಹೊರತು ರಾಜಕೀಯ ಪ್ರದರ್ಶನಗಳ ತಾಣಗಳಾಗಬಾರದು ಎಂದರು. ಅಲ್ಲದೆ, ಭಾರತದ ನ್ಯಾಯಾಂಗ ವ್ಯವಸ್ಥೆಯು ಸಾರ್ವಜನಿಕರ ನಂಬಿಕೆಯನ್ನು ಗಳಿಸಿದೆ ಎಂದು ಪ್ರತಿಪಾದಿಸುತ್ತಾ, ನ್ಯಾಯಾಂಗವನ್ನು ಗುರಿಯಾಗಿಸಲು ಜನಸಮೂಹಗಳು ಸೇರುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದ ಭಾಟಿಯಾ, ಪಕ್ಷದ ಕೇರಳ ಘಟಕದ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬಂದ ಪೋಸ್ಟ್ ಅನ್ನು ಉಲ್ಲೇಖಿಸಿದರು. ಶಾಸಕಾಂಗ, ಕಾರ್ಯಾಗ ಮತ್ತು ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರಗಳ ಪ್ರತ್ಯೇಕತೆಯ ಸಂವಿಧಾನಿಕ ತತ್ವವನ್ನು ಅವರು ನೆನಪಿಸಿಕೊಂಡರು. ಜೊತೆಗೆ, ಮಹಿಳೆಯರ ಘನತೆಯ ಬಗ್ಗೆ ಕಾಂಗ್ರೆಸ್‌ನ ನಿಲುವಿನ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ ಭಾಟಿಯಾ, ರಾಹುಲ್ ಗಾಂಧಿ ಅವರ ನಡವಳಿಕೆಯು ಮಹಿಳಾ ಹಕ್ಕುಗಳ ಕುರಿತ ಅವರ ಸಾರ್ವಜನಿಕ ಹೇಳಿಕೆಗಳಿಗೆ ಅನುಗುಣವಾಗಿಲ್ಲ ಎಂದು ಆರೋಪಿಸಿದರು. ಪುರುಷಪ್ರಧಾನ ವ್ಯವಸ್ಥೆಯನ್ನು ತೊಡೆದುಹಾಕಿ ಎಂಬ ಘೋಷಣೆಯನ್ನು ಉಲ್ಲೇಖಿಸುತ್ತಾ, ಮಹಿಳೆಯರ ಗೌರವ ಮತ್ತು ಘನತೆಗೆ ಪಕ್ಷದ ಬದ್ಧತೆಯನ್ನು ಸ್ಥಿರವಾಗಿ ಅನ್ವಯಿಸಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net