ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಬೆದರಿಕೆ
- ಸಿಂಧೂ ನದಿ ನೀರು ಹಂಚಿಕೆ ವಿವಾದ
- ಭಾರತಕ್ಕೆ ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಬೆದರಿಕೆ
- ನಾವು ಒಂದು ಹನಿ ನೀರನ್ನು ನಿಮಗೆ ನೀಡಲ್ಲ
ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಉದ್ಘಾಟಿಸಿ ಮಾತನಾಡಿದ ಪಾಕ್ ಪ್ರಧಾನಿ ಶಹಬಾಜ್ ಶರೀಫ್ (Shahbaz Sharif on Indus River) ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಪಾಲಿನ ಸಿಂಧೂ ನದಿಯ ಒಂದು ಹನಿ ನೀರನ್ನು ಕೂಡ ನಾವು ಭಾರತದೊಂದಿದೆ ಹಂಚಿಕೊಳ್ಳುದಿಲ್ಲ ಎಂದಿದ್ದಾರೆ.
ಪಾಕಿಸ್ತಾನ ಎಂದಿಗೂ ಯುದ್ಧವನ್ನು ಬಯಸುವುದಿಲ್ಲ, ಆದರೆ ಭಾರತ ನಾವು ಶಾಂತಿಯಿಂದ ಇರಲು ಬಿಡುತ್ತಿಲ್ಲ. ಭಾರತ ಸಿಂದೂ ನದಿ ತಂಟೆಗೆ ಬರಬಾರದು, ಒಂದು ವೇಳೆ ನಿಯಮ ಮೀರಿ ಏನಾದರೂ ಕ್ರಮ ಕೈಗೊಂಡರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ ಎಂದು ಶರೀಫ್ ಎಚ್ಚರಿಕೆ ನೀಡಿದ್ದಾರೆ.
ಅವರಿಗೆ ಶಾಂತಿ ಬೇಕಿಲ್ಲ!
ಸ್ವಾತಂತ್ರ ದಿನಾಚರಣೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರೀಫ್, ಭಾರತ ಎಂದಿಗೂ ಶಾಂತಿಯನ್ನು ಬಯಸುವುದಿಲ್ಲ, ಏನಾದರೂ ಗಲಾಟೆ ಮಾಡುತ್ತಲೇ ಇರುತ್ತದೆ. ಆದರೆ ನಾವು ಕೂಡ ತಕ್ಕ ಪಾಠವನ್ನು ಕಲಿಸಿದ್ದೆವೆ.
ಈಗ ಭಾರತ ನಮ್ಮ ಸಿಂಧೂ ನದಿ ನೀರಿನ ಮೇಲೆ ಕಣ್ಣಿಟ್ಟಿದ್ದು, ಇಲ್ಲಿವರೆಗೆ ನಡೆದುಕೊಂಡು ಬಂದಿರುವ ಒಪ್ಪಂದವನ್ನು ಮುರಿಯಲು ಮುಂದಾಗಿದೆ. ಇದರಿಂದ ಪಾಕಿಸ್ತಾನಕ್ಕೆ ಅನ್ಯಾಯವಾಗಲಿದ್ದು, ನಾವು ಅದನ್ನು ಖಂಡಿತವಾಗಿ ಸಹಿಸುದಿಲ್ಲ, ನೀರನ್ನು ಪಡೆಯಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ನಾವು ಸಿದ್ಧರಿದ್ದೆವೆಂದು ಶರೀಫ್ ಹೇಳಿದ್ದಾರೆ.
ಪಹಲ್ಗಾಮ್ ನಂತರ ಬದಲಾದ ಚಿತ್ರಣ!
2025 ರಲ್ಲಿ ಪಾಕಿಸ್ತಾನ ಬೆಂಬಲಿತ ಕೆಲ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಕ್ಕೆ ತೆರಳಿದ್ದ ನಾಗರಿಕರನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದರು. ಈ ಕೃತ್ಯದಿಂದ ಕೆಂಡಾಮಂಡಲವಾದ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗೆ ಅಸ್ತಿತ್ವದಲ್ಲಿದ್ದ ಸಿಂಧೂ ನದಿ ಒಪ್ಪಂದವನ್ನು ಕೊನೆಗೊಳಿಸಿತು.
ಇದರಿಂದ ಪಾಕಿಸ್ತಾನಕ್ಕೆ ಸೇರಬೇಕಿದ್ದ ನೀರನ್ನು ಭಾರತ ತಡೆಯಲಾರಂಭಿಸಿತು. ಇದನ್ನು ವಿರೋಧಿಸಿ, ಪಾಕಿಸ್ತಾನ ವಿಶ್ವಸಂಸ್ಥೆ ಕದ ತಟ್ಟಿದರೂ ಏನೂ ಪ್ರಯೋಜನವಾಗಿಲ್ಲ. ನಮ್ಮ ನೆಲದಲ್ಲಿ ಭಯೋತ್ಪಾದನಾ ಕೃತ್ಯ ನಡೆಸುವ ದೇಶಕ್ಕೆ ನೀರನ್ನು ಕೊಡಲು ಸಾಧ್ಯವಿಲ್ಲ ಎನ್ನುವುದು ಭಾರತ ಸರ್ಕಾರದ ನಿಲುವಾಗಿದೆ, (ಏಜನ್ಸೀಸ್).