ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹೈಟೆಕ್ ಸೆಕ್ಸ್ ರಾಕೆಟ್ ಪತ್ತೆ! 
ದೇಶ

ಪ್ರವಾಸೋದ್ಯಮದ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಅಪ್ರಾಪ್ತೆಯರು ಸೇರಿ 10 ಯುವತಿಯರ ರಕ್ಷಣೆ, 52 ಜನರ ಮೇಲೆ ಎಫ್​ಐಆರ್​ ದಾಖಲು! Sex Racket Busted in Uttarakhand

ಪ್ರಮುಖ ಮುಖ್ಯಾಂಶಗಳು

  • ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ನಲ್ಲಿ ಹೈಟೆಕ್ ಸೆಕ್ಸ್ ರಾಕೆಟ್ ಪತ್ತೆ!
  • ಅಪ್ರಾಪ್ತೆಯರು ಸೇರಿ 10 ಯುವತಿಯರ ರಕ್ಷಣೆ
  • ಮೀರತ್ ಉದ್ಯಮಿ ಸೇರಿ 52 ಜನರ ಮೇಲೆ FIR ದಾಖಲು
ರಾಮನಗರ: ಪ್ರವಾಸೋದ್ಯಮದ ಹೆಸರಿನಲ್ಲಿ ಹೈಟೆಕ್​ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಸುಮಾರು 52 ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರಾಖಂಡದ ರಾಮನಗರದಲ್ಲಿ (Sex Racket Busted in Uttarakhand) ವರದಿಯಾಗಿದೆ.
ಈ ರಾಮನಗರವು ವಿಶ್ವಪ್ರಸಿದ್ಧ ಜಿಮ್​ ಕಾರ್ಬೆಟ್​ ರಾಷ್ಟ್ರೀಯ ಉದ್ಯಾನಕ್ಕೆ ಹೆಸರುವಾಸಿಯಾಗಿದ್ದು, ಈಗ ಈ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.

ಹೋಂ ಸ್ಟೇ ಹೆಸರಲ್ಲಿ ಸೆಕ್ಸ್​ ರಾಕೆಟ್!

ಮಾಹಿತಿ ಪ್ರಕಾರ, ವಿಶೇಷ ಕಾರ್ಯಾಚರಣೆ ಗುಂಪು ಹಾಗೂ ರಾಮನಗರ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಸುಮಾರು 10 ಜನ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಇದರಲ್ಲಿ ಅಪ್ರಾಪ್ತ ಬಾಲಕಿಯರು ಇದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ಒಟ್ಟು 52 ಜನರ ಮೇಲೆ ಎಫ್​ಐಆರ್​​ ದಾಖಲಾಗಿದೆ ಎಂದು ಹೇಳಲಾಗುತ್ತಿದೆ.
ಪೊಲೀಸರ ಪ್ರಕಾರ, ಈ ರೆಸಾರ್ಟ್​ಗಳಲ್ಲಿ ಲಿಕ್ಕರ್​ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಅದಕ್ಕಾಗಿ ದೇಶದ ಬೇರೆ ರಾಜ್ಯ ಹಾಗೂ ವಿದೇಶದಿಂದ ಮಹಿಳೆಯರನ್ನು ಕಳ್ಳಸಾಗಾಣೆ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ಈ ಪಾರ್ಟಿಯನ್ನು ಮೀರಟ್​ನ ಉದ್ಯಮಿ ಉಮೇಂದ್ರ ಕುಮಾರ್​ ಎಂಬಾತ ಆಯೋಜನೆ ಮಾಡಿದ್ದ ಎಂದು ತಿಳಿದು ಬಂದಿದ್ದು, ಪ್ರತಿ ಮಹಿಳೆಯರಿಗೆ ಹತ್ತು ಸಾವಿರ ರೂಪಾಯಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಪಾರ್ಟಿಗೆ ಜುಲೈ 4 ಮತ್ತು 5 ರಂದು ಬುಕ್ಕಿಂಗ್​ ಪ್ರಾರಂಭಿಸಲಾಗಿದ್ದು ಎರಡು ದಿನಗಲ್ಲಿ ಸುಮಾರು 2.25 ಲಕ್ಷ ಕಲೆಕ್ಷನ್​ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಂದ ಬಂಧನ; ಮುಂದುವರಿದ ತನಿಖೆ!

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 52 ಜನರ ಮೇಲೆ ಎಫ್​ಐಆರ್​ ದಾಖಲಾಗಿದೆ. ಬಂಧಿತರ ಮೇಲೆ ಅಕ್ರಮ ಮಾನವ ಕಳ್ಳಸಾಗಾಣಿಕೆ, ಪೊಕ್ಸೊ ಹಾಗೂ ಅಬಕಾರಿ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರದಂತೆ, ಕಾರ್ಬೆಟ್​​, ನೈನಿತಾಲ್​ ಹಾಗೂ ಭೀಮ್​ತಲ್​ಗಳಲ್ಲಿ ಸಹ ಇದೇ ರೀತಿಯ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಗುಮಾನಿ ಕೇಳಿಬರುತ್ತಿದ್ದು, ನಿಖರ ಮಾಹಿತಿ ಹಾಗೂ ಸಾಕ್ಷ್ಯ ದೊರೆತ ದಿನವೇ ಅಲ್ಲಿ ಸಹ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ, (ಏಜನ್ಸೀಸ್​).