- ಲಾರೆನ್ಸ್ ಆಫ್ ಪಂಜಾಬ್ ವೆಬ್ ಸರಣಿಗೆ ಹೈಕೋರ್ಟ್ ತಡೆ
- ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೀವನಾಧಾರಿತ ಸರಣಿ
- ಜೀ 5 ನಲ್ಲಿ ತೆರೆಕಾಣಬೇಕಿದ್ದ ಸರಣಿ
ಚಂಢೀಗಡ್: ಸದ್ಯ ಭಾರತದಲ್ಲಿರುವ ನಟೋರಿಯಸ್ ಗ್ಯಾಂಗ್ಸ್ಟರ್ ಯಾರೆಂದು ಕೇಳಿದರೆ, ಬಹತೇಕರು ಹೇಳುವ ಹೆಸರೇ, ಲಾರೆನ್ಸ್ ಬಿಷ್ಣೋಯ್ದ್ದಾಗಿದೆ. ಆದರೆ ಇತನ ಕುರಿತು ಲಾರೆನ್ಸ್ ಆಫ್ ಪಂಜಾಬ್ (Lawrence Of Punjab) ಎಂಬ ವೆಬ್ ಸರಣಿ ತೆರೆಕಾಣಲು ಸಿದ್ಧವಾಗಿತ್ತು, ಆದರೆ ಈ ಚಲನಚಿತ್ರದ ಬಿಡುಗಡೆಯನ್ನು ಭಾರತ ಸರ್ಕಾರ ತಡೆ ಹಿಡಿದಿದೆ.
ಏಕೆ ತಡೆ ಹಿಡಿಯಲಾಗಿದೆ?
ಇಂದು (ಏ.24) ಅಮರಿಂಗ್ ಸಿಂಗ್ ರಾಜಾ ವಾರಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಚಂಢೀಗಡ್ ಹೈಕೋರ್ಟ್ ಈ ವೆಬ್ ಸರಣಿಯನ್ನು ಜೀ 5 (ZEE 5) ವೇದಿಕೆಗೆ ಬಿಡುಗಡೆ ಮಾಡದಂತೆ ಆದೇಶಿಸಿದೆ. ಈ ಆದೇಶನದ ಹಿನ್ನಲೆಯಲ್ಲಿ ವೆಬ್ ಸರಣಿಯ ಬಿಡುಗಡೆಗೆ ವಿಘ್ನ ಎದುರಾಗಿದೆ.
ಲಾರೆನ್ಸ್ ಆಫ್ ಪಂಜಾಬ್ ಬಿಡುಗಡೆಯಾಗಬಾರದು!
ಪಂಜಾಬ್ನ ಖ್ಯಾತ ಹಾಡುಗಾರ ದಿ. ಸಿಧು ಮೂಸೆವಾನ ಹತ್ಯೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಕೈವಾಡವಿದೆ ಎಂದು ಹೇಳಲಾಗಿತ್ತು. ಹಾಗೆಯೇ ಈ ಹತ್ಯೆಯ ಜವಾಬ್ದಾರಿಯನ್ನು ಸಹ ಬಿಷ್ಣೋಯ್ ಗ್ಯಾಂಗ್ನ ಸದಸ್ಯರೇ ಒಪ್ಪಿಕೊಂಡಿದ್ದರು. ಆದ್ದರಿಂದ ತಮ್ಮ ಮಗನ ಸಾವಿಗೆ ಕಾರಣನಾದ ಲಾರೆನ್ಸ್ ಬಿಷ್ಣೋಯ್ ಕುರಿತು ಬಿಡುಗಡೆಯಾಗಲಿಒರುವ ವೆನ್ ಸರಣಿ ತೆರೆ ಕಾಣಬಾರದೆಂದು ಬಲ್ಕೂರ್ ಸಿಂಗ್ ತಾಕೀತು ಮಾಡಿದ್ದರು.
ಅವನೊಬ್ಬ ಕೊಲೆಗಡುಕ, ಬ್ಲಾಕ್ಮೇಲರ್,ರೌಡಿ ಹೋಗಿ ಹೋಗಿ ಅವನ ಮೇಲೆ ಸಿನಿಮಾ ಅಥವಾ ವೆಬ್ ಸರಣಿಗಳನ್ನು ಸಿನಿರ್ಮಿಸಲು ಅವನೇನು ಸ್ವಾತಂತ್ರ್ಯ ಹೋರಾಟಗಾನೇ? ಅಥವಾ ಸಮಾಜ ಸುಧಾರಕನೇ? ಎಂದು ಅವರು ಪ್ರಶ್ನಿಸಿದ್ದರು, (ಏಜನ್ಸೀಸ್).