ಸಿಧು ಮೂಸ್ ವಾಲಾ ಕುಟುಂಬದ ನೋವು ಇನ್ನೂ ಕಡಿಮೆಯಾಗಿಲ್ಲ. ನನ್ನ ಮಗನ ಕೊಲೆಗಾರರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ, ಅಲ್ಲಿಂದಲೇ ಅವರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇಂತಹ ಸಮಯದಲ್ಲಿ ಈ ಸರಣಿ ಬಿಡುಗಡೆ ಮಾಡುವುದು ನಮಗೆ ಮಾಡುತ್ತಿರುವ ಅವಮಾನ ಎಂದು ಬಲ್ಕೌರ್ ಸಿಂಗ್ ನೋವು ತೋಡಿಕೊಂಡಿದ್ದಾರೆ. ಒಂದು ವೇಳೆ ಸರ್ಕಾರ ಅಥವಾ ಒಟಿಟಿ ಸಂಸ್ಥೆ ಈ ಸರಣಿಯನ್ನು ತಡೆಹಿಡಿಯದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಮತ್ತು ಪಿಐಎಲ್ (PIL) ದಾಖಲಿಸುವುದಾಗಿ ತಂಡ ಎಚ್ಚರಿಕೆ ನೀಡಿದ್ದಾರೆ, (ಏಜನ್ಸೀಸ್).