ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ
- ಶಬರಿಮಲೆಯಲ್ಲಿ ನೈವೇದ್ಯಕ್ಕೆ ಬಳಸುವ ತುಪ್ಪದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ
- ವಿಜಿಲೆನ್ಸ್ ಇಲಾಖೆಯ ತನಿಖೆಯಲ್ಲಿ ಸುಮಾರು 36.24 ಲಕ್ಷ ರೂಪಾಯಿ ಅಕ್ರಮ ಪತ್ತೆ
- ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸುವಂತೆ ಆದೇಶಿದ್ದ ಕೇರಳ ಹೈಕೋರ್ಟ್
ಕೇರಳ: ಶಬರಿಮಲೆ (Sabarimala) ದೇವಸ್ಥಾನದಲ್ಲಿ ಆದಿಯ ಶಿಷ್ಟ ತುಪ್ಪ ಮಾರಾಟದಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳ ತನಿಖೆಗಾಗಿ ಕೇರಳ ಹೈಕೋರ್ಟ್ ನೀಡಿದ ನಿರ್ದೇಶನಗಳ ಮೇರೆಗೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಗುರುವಾರ(ಜ.15) ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ.
ಇತ್ತೀಚಿನ ಚಿನ್ನದ ದರೋಡೆ ಪ್ರಕರಣದ ನಂತರ ನೈವೇದ್ಯಕ್ಕೆ ಬಳಸುವ ತುಪ್ಪದಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಇದು ದೇಶದ ಪ್ರಮುಖ ದೇವಾಲಯದಲ್ಲಿ ಒಂದಾದ ಶಬರಿಮಲಾ ಅಯ್ಯಪ್ಪನ ಸನ್ನಿಧಿಯಲ್ಲಿ ನಿರಂತರ ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ನಡೆಯುತ್ತಿರುವ ಲೋಪಗಳು ಭಕ್ತರಲ್ಲಿ ಕಳವಳಕ್ಕೆ ಕಾರಣವಾಗಿದೆ.
ಮಂಗಳವಾರ (ಜ.13) ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯ ಆಧಾರದ ಮೇಲೆ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಅವರ ನ್ಯಾಯಪೀಠದ ತೀವ್ರ ಟೀಕೆಗೆ ಗುರಿಯಾದ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಈದೀಗ ಎಸ್ಐಟಿಯನ್ನು ರಚಿಸಲು ಮುಂದಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್ ಈ ವಿಶೇಷ ತಂಡದ ನೇತೃತ್ವ ವಹಿಸಲಿದ್ದಾರೆ.
ದೇವಾಲಯದ ವಿವಿಧ ಕೌಂಟರ್‌ಗಳ ಮೂಲಕ ಮಾರಾಟವಾಗುವ ಆದಿಯ ಶಿಷ್ಟ ತುಪ್ಪದ ಮಾರಾಟದಿಂದ ಬಂದ ಆದಾಯದ ಕ್ರಿಮಿನಲ್ ದುರುಪಯೋಗವನ್ನು ವರದಿಯು ಬಹಿರಂಗಪಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಕೆಲವು ಸ್ವಾರ್ಥ ಅಧಿಕಾರಿಗಳು ದೇವಾಲಯದ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಗಮನಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ ಕೆಲವು ಉದ್ಯೋಗಿಗಳು ತಮಗೆ ವಹಿಸಿಕೊಟ್ಟ ಸೇವೆಯನ್ನು ಆತ್ಮಸಾಕ್ಷಿಯಾಗಿ ಸಲ್ಲಿಸುವ ಬದಲು ಮೊತ್ತವನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆಂದು ನಮಗೆ ತೋರುತ್ತದೆ ಎಂದು ಪೀಠವು ಹೇಳಿದೆ.
ಬಹಿರಂಗಪಡಿಸಿದ ನಡವಳಿಕೆಯು ಸಂಸ್ಥೆ ಮತ್ತು ಭಕ್ತರಿಗೆ ಕರ್ತವ್ಯಕ್ಕಿಂತ ವೈಯಕ್ತಿಕ ಲಾಭವು ಆದ್ಯತೆ ಪಡೆದಿರುವ ಗೊಂದಲದ ಮಾದರಿಯನ್ನು ಸೂಚಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. ವ್ಯವಸ್ಥಿತ ಸುಧಾರಣೆಯ ಅಗತ್ಯವನ್ನು ಒತ್ತಿಹೇಳುತ್ತಾ, ದೃಢವಾದ ತಾಂತ್ರಿಕ ಸುರಕ್ಷತೆಗಳಿಂದ ಬೆಂಬಲಿತವಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯು ವಿವೇಚನಾತ್ಮಕ ವಿಷಯವಲ್ಲ, ಬದಲಾಗಿ ಮಂಡಳಿ ಬದ್ಧವಾಗಿರುವ ಶಾಸನಬದ್ಧ ಬಾಧ್ಯತೆಯಾಗಿದೆ ಎಂದು ಹೇಳಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಅನುಸರಿಸಿ, ವಿಜಿಲೆನ್ಸ್ ಇಲಾಖೆ ಪ್ರಾಥಮಿಕ ಪರಿಶೀಲನೆ ನಡೆಸಿ ಸುಮಾರು 36.24 ಲಕ್ಷ ರೂ.ಗಳ ಅಕ್ರಮವನ್ನು ಪತ್ತೆಹಚ್ಚಿತು. ಇದರಲ್ಲಿ, ಸುಮಾರು 13 ಲಕ್ಷ ರೂ.ಗಳು 13,679 ಆದಿಯ ಶಿಷ್ಟ ತುಪ್ಪದ ಪ್ಯಾಕೆಟ್‌ಗಳ ಮಾರಾಟಕ್ಕೆ ಸಂಬಂಧಿಸಿವೆ ಎಂದು ಕಂಡುಬಂದಿದೆ.ಅದರ ಆದಾಯವನ್ನು ದೇವಸ್ವಂ ಮಂಡಳಿಯ ಖಾತೆಗೆ ಜಮಾ ಮಾಡಲಾಗಿಲ್ಲ ಎಂದು ಹೇಳಲಾಗಿದೆ.
ತುಪ್ಪ ಮಾರಾಟದ ಮೇಲ್ವಿಚಾರಣೆಯ ಜವಾಬ್ದಾರಿಯುತ ಅಧಿಕಾರಿ ಸುನಿಲ್ ಕುಮಾರ್ ಪೊಟ್ಟಿ ಅವರನ್ನು ಪ್ರಾಥಮಿಕ ತನಿಖೆಯಲ್ಲಿ ಮಾರಾಟದ ಆದಾಯವು ಮಂಡಳಿಯ ಖಾತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಲೋಪವಾಗಿದೆ ಎಂದು ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ದೇವಸ್ವಂ ಮಂಡಳಿ ಹೈಕೋರ್ಟ್‌ಗೆ ತಿಳಿಸಿತ್ತು,(ಏಜನ್ಸೀಸ್).