ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇಯ ಏಕದಿನ ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(Rohit Sharma) ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20,000 ರನ್‌ಗಳನ್ನು ಪೂರೈಸಿದ ಭಾರತದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಂಡೇಯಲ್ಲಿ 11,000 ರನ್‌ಗಳನ್ನು ಗಳಿಸಿದ್ದಾರೆ. ಇದರ ಜೊತೆಗೆ ಟೆಸ್ಟ್‌ಗಳಲ್ಲಿ 4,301 ಮತ್ತು 151 T20I ಇನ್ನಿಂಗ್ಸ್‌ಗಳಲ್ಲಿ 4,231 ರನ್‌ಗಳನ್ನು ಗಳಿಸಿದ್ದಾರೆ. ಇದರೊಂದಿಗೆ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಸಾಲಿಗೆ ರೋಹಿತ್ ಸೇರಿದ್ದಾರೆ.
ಭಾರತಕ್ಕಾಗಿ ಅತಿ ಹೆಚ್ಚು ಅಂತರಾಷ್ಟ್ರೀಯ ರನ್‌ಗಳು
ಭಾರತೀಯ ಕ್ರಿಕೆಟಿಗರು - ಅಂತರಾಷ್ಟ್ರೀಯ ರನ್‌ಗಳು
1. ಸಚಿನ್ ತೆಂಡೂಲ್ಕರ್- 34,357
3. ರಾಹುಲ್ ದ್ರಾವಿಡ್- 24.064
ರೋಹಿತ್ ಅರ್ಧಶತಕ
ಹರಿಣಗಳು ನೀಡಿದ 271 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ದೊರಕಿದ್ದು, ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಜೋಡಿ 155 ರನ್ಗಳ ಉತ್ತಮ ಜತೆಯಾಟವಾಡಿದೆ. ಹಿಟ್ಮ್ಯಾನ್ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ, ಯಶಸ್ವಿ 75 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಗಳಿಸಿದ್ದಾರೆ.
ಭಾರತ ಪ್ರಸ್ತುತವಾಗಿ 199 ರನ್ಗಳಿಗೆ 1 ವಿಕೆಟ್ ಕಳೆದುಕೊಂಡಿದೆ. ಅಲ್ಲದೆ, ಜೈಸ್ವಾಲ್ 94 ರನ್ ಹಾಗೂ ಕೊಹ್ಲಿ 19 ರನ್ಗಳಿಸಿ ಆಡುತ್ತಿದ್ದಾರೆ,(ಏಜೆನ್ಸೀಸ್).