ಮಗ್ರಹತ್ ಪಶ್ಚಿಮ್ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳಿಗೆ ಮರು ಮತದಾನ 
ದೇಶ

ಬಂಗಾಳದಲ್ಲಿ ಮರು ಮತದಾನ: 2 ಕ್ಷೇತ್ರಗಳ 15 ಮತಗಟ್ಟೆಗಳಿಗೆ ಮೇ. 2 ರಂದು ಎಲೆಕ್ಷನ್​ ಘೋಷಿಸಿದ ಚುನಾವಣಾ ಆಯೋಗ! Repolling in West Bengal

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೈಡ್ರಾಮಾ
  • ಮಗ್ರಹತ್ ಪಶ್ಚಿಮ್ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳಿಗೆ ಮರು ಮತದಾನ
  • ಮೇ. 2 ರಂದು ಎರಡು ವಿಧಾನಸಭಾ ಕ್ಷೇತ್ರಗಳ 15 ಮತಗಟ್ಟೆಗಳಿಗೆ ಎಲೆಕ್ಷನ್​ ಘೋಷಿಸಿದ ಚುನಾವಣಾ ಆಯೋಗ
ಪಶ್ಚಿಮ ಬಂಗಾಳ: ಭಾರತದಲ್ಲಿ ಈಗ ಪಂಚರಾಜ್ಯ ಚುನಾವಣೆ ಬಿಸಿ ಕಾವೇರಿದ್ದು, ಮತದಾನ ಎಲ್ಲಡೆ ಮುಗಿದು ಈಗ ಮೇ. 4 ರಂದು ಹೊರ ಬೀಳಲಿರುವ ಫಲಿತಾಂಶದ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ. ಅದರೆ ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ (Repolling in West Bengal) ಚುನಾವಣಾ ಆಯೋಗ ಸೂಚಿಸಿದೆ.

2 ವಿಧಾನಸಭಾ ಕ್ಷೇತ್ರ 15 ಮತಗಟ್ಟೆಯಲ್ಲಿ ಮರು ಮತದಾನ!

ಲಭ್ಯ ಮಾಹಿತಿ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್​ 29 ರಂದು ಎರಡನೇ ಹಂತದ ಮತದಾನದ ಸಂದರ್ಭದಲ್ಲಿ ಮಗ್ರಹತ್ ಪಶ್ಚಿಮ್ ಮತ್ತು ಡೈಮಂಡ್ ಹಾರ್ಬರ್ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ದೂರುಗಳು ಬಂದ ಹಿನ್ನಲೆಯಲ್ಲಿ ಮೇ. 2 ರಂದು 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ.
ನಾಳೆ ಮತದಾನ!
ಮೇ. 4 ರಂದು ಪಂಚರಾಜ್ಯಗಳ ಫಲಿತಾಂಶವನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಬೇಕಾದ ಹಿನ್ನಲೆಯಲ್ಲಿ ನಾಳೆ (ಮೇ.2) ರಂದು ಮಗ್ರಹತ್ ಪಶ್ಚಿಮ್ ಮತ್ತು ಡೈಮಂಡ್ ಹಾರ್ಬರ್ ಕ್ಷೇತ್ರಗಳಿಗೆ ಮರು ಮತದಾನ ನಡೆಯಲಿದೆ. ಮತದಾನ ಪಕ್ರಕ್ರಿಯೆಯು ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ ಎಂದು ಆಯೋಗ ತಿಳಿಸಿದೆ.
ಮಗ್ರಹತ್ ಪಶ್ಚಿಮ್ ಪಶ್ಚಿಮ ಕ್ಷೇತ್ರದಿಂದ ಬಿಜೆಪಿಯಿಂದ ಗೌರಸುಂದರ್​ ಘೋಷ್​ ಸ್ಪರ್ಧಿಸಿದ್ದರೆ, ಟಿಎಂಸಿಯಿಂದ ಸಮೀಮ್​ ಅಹ್ಮದ್​ ಕಣದಲ್ಲಿದ್ದಾರೆ. ಇನ್ನು ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಬಿಜೆಪಿಯಿಂದ ದೀಪಕ್​ ಕುಮಾರ್​ ಹಲ್ದರ್​ ಸ್ಪರ್ಧಿಸಿದ್ದರೆ ಟಿಎಂಸಿಯಿಂದ ಪನ್ನಾಲಾಲ್​ ಹಲ್ದರ್​ ಕಣಕಿಳಿದ್ದಿದ್ದಾರೆ.

ನಮ್ಮದೇ ಬಹುಮತ ಖಚಿತ: ಮಮತಾ

ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಮತಾ ಬ್ಯಾನರ್ಜಿ, ಈ ಭಾರಿ ಚುನಾವಣೆಯಲ್ಲಿ ನಮಗೆ ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಬಂಗಾಲಿಗಳು ನಮ್ಮ ಕೈ ಹಿಡಿದೇ ಹಿಡಿಯುತ್ತಾರೆ. ಈ ಸಲ ನಾವು ಸುಮಾರು 226 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಮತ್ತೆ ಸರ್ಕಾರವನ್ನು ರಚಿಸಲಿದ್ದೆವೆ ಎಂದು ಹೇಳಿದ್ದಾರೆ.
ಆದರೆ ಈ ಭಾರಿ ಬಿಜೆಪಿ ಬಂಗಾಳವನ್ನು ಗೆಲ್ಲಲ್ಲು ಏನು ಮಾಡಲು ಸಿದ್ದವಿದೆ, ಆದ್ದರಿಂದ ಮತ ಏಣಿಕೆ ದಿನ ನಾನು ಖುದ್ದಾಗಿ ಪ್ರತಿ ಕ್ಷೇತ್ರಗಳಿಗೆ ತೆರಳುವ ಯೋಜನೆ ಹೊಂದಿದ್ದೆನೆ. ನನಗೆ ನನ್ನ ಮತದಾರರ ಮೇಲೆ ನಂಬಿಕೆಯಿದೆ. ಮೇ.4 ರಂದು ಟಿಎಮ್​ಸಿ ಈ ನೆಲದ ಸರ್ಕಾರವನ್ನು ರಚಿಸುವುದು ನಿಶ್ಚಿತ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ, (ಏಜನ್ಸೀಸ್​).