ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ 
ದೇಶ

ನಾಗಪುರ ಹೆಸರನ್ನು ದೀಕ್ಷಾಭೂಮಿ ಎಂದು ಮರುನಾಮಕರಣ ಮಾಡಿ: ಸಂಜಯ್ ರಾವತ್ ಒತ್ತಾಯ | Sanjay Raut

ಮಹಾರಾಷ್ಟ್ರದ ಮುಂಬೈನಲ್ಲಿರುವ ದಾದರ್ ಮೆಟ್ರೋ ನಿಲ್ದಾಣದ ಹೆಸರನ್ನು 'ಚೈತ್ಯಭೂಮಿ' ಎಂದು ಬದಲಾಯಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ನಾಗಪುರ ಹೆಸರನ್ನು ಸಹ ದೀಕ್ಷಾಭೂಮಿ ಎಂದು ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ದಾದರ್ ಮೆಟ್ರೋ ನಿಲ್ದಾಣದ ಹೆಸರನ್ನು 'ಚೈತ್ಯಭೂಮಿ' ಎಂದು ಬದಲಾಯಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್, ನಾಗಪುರ ಹೆಸರನ್ನು ಸಹ ದೀಕ್ಷಾಭೂಮಿ ಎಂದು ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1956 ಅಕ್ಟೋಬರ್​ನಲ್ಲಿ ತಮ್ಮ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧಧರ್ಮವನ್ನು ಸ್ವೀಕರಿಸಿದರು. ಇಡೀ ದೇಶವು ಅಂಬೇಡ್ಕರ್ ಅವರ ಮೇಲೆ ಹೆಚ್ಚಿನ ಗೌರವ ಮತ್ತು ನಂಬಿಕೆಯನ್ನು ಹೊಂದಿದೆ. ದಾದರ್ ಕೇವಲ ಒಂದು ನಿಲ್ದಾಣ. ಅಂಬೇಡ್ಕರ್ ಅವರಿಗೆ ನೀಡುವ ಅತ್ಯುನ್ನತ ಗೌರವವೆಂದರೆ ನಾಗಪುರದ ಹೆಸರನ್ನು 'ದೀಕ್ಷಾಭೂಮಿ' ಎಂದು ಬದಲಾಯಿಸುವುದು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ತರಬೇಕು. ನಾವು ಅದನ್ನು ಬೆಂಬಲಿಸುತ್ತೇವೆ. ಡಾ. ಅಂಬೇಡ್ಕರ್ ಅವರ ಜೀವನದಲ್ಲಿ ಸಾಮಾಜಿಕ ಕ್ರಾಂತಿ ನಾಗಪುರದ ದೀಕ್ಷಾಭೂಮಿಯಿಂದ ಪ್ರಾರಂಭವಾಯಿತು. ಈ ವಿಷಯದಲ್ಲಿ ಯಾವುದೇ ವಿವಾದ ಉಂಟಾದರೆ, ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ ಎಂದಿದ್ದಾರೆ.

ಬಿ.ಆರ್. ಅಂಬೇಡ್ಕರ್ ಅವರು 1956ರಲ್ಲಿ ನಿಧನರಾದ ಬಳಿಕ ಮುಂಬೈನ ದಾದರ್ ಪ್ರದೇಶದ ಚೈತ್ಯಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅದರ ಗೌರವಾರ್ಥವಾಗಿ ದಾದರ್ ಮೆಟ್ರೋ ನಿಲ್ದಾಣದ ಹೆಸರನ್ನು 'ಚೈತ್ಯಭೂಮಿ' ಎಂದು ಮರುನಾಮಕರಣ ಮಾಡಲಾಗುವುದು ಎಂದು ಸಿಎಂ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ಘೋಷಿಸಿದ್ದಾರೆ (ಏಜೆನ್ಸೀಸ್).