ಅದು ದೀಪ ಹಚ್ಚುವ ಕಂಬವಲ್ಲ, ಅಳತೆ ಮಾಡುವ ಕಂಬ: ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಿಸಲು ವಿರೋಧಿಸಿದ ಡಿಎಂಕೆ | DMK

ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಆದರೆ ನ. 24ರಂದು ತಾತ್ಕಾಲಿಕವಾಗಿ ಒಂದು ಬಾರಿ ಕಾರ್ತಿಕ ದೀಪ ಬೆಳಗಲು ಅವಕಾಶ ನೀಡಿ ಶುಕ್ರವಾರ(ನ. 20) ಮಧ್ಯಂತರ ಆದೇಶ ನೀಡಿದೆ.
ಅದು ದೀಪ ಹಚ್ಚುವ ಕಂಬವಲ್ಲ, ಅಳತೆ ಮಾಡುವ ಕಂಬ: ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಿಸಲು ವಿರೋಧಿಸಿದ ಡಿಎಂಕೆ | DMK
Published on: 

ಚೆನ್ನೈ: ತಮಿಳುನಾಡಿನ ತಿರುಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ಆದರೆ ನ. 24ರಂದು ತಾತ್ಕಾಲಿಕವಾಗಿ ಒಂದು ಬಾರಿ ಕಾರ್ತಿಕ ದೀಪ ಬೆಳಗಲು ಅವಕಾಶ ನೀಡಿ ಶುಕ್ರವಾರ(ನ. 20) ಮಧ್ಯಂತರ ಆದೇಶ ನೀಡಿದೆ.

ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ, ತಮಿಳುನಾಡಿನಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಹಿಂದೂ ಮುನ್ನಾನಿ ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದೆ. ಮತ್ತು ಬೆಟ್ಟದ ಮೇಲಿರುವ ಕಲ್ಲಿನ ಕಂಬವು ಸಾಂಪ್ರದಾಯಿಕ ದೀಪವನ್ನು ಬೆಳಗಿಸಲು ಉದ್ದೇಶಿಸಿದ್ದಲ್ಲ ಎಂದು ತನ್ನ ನಿಲುವನ್ನು ಪುನರುಚ್ಚರಿಸಿದೆ.

ಈ ಕುರಿತು ಮಾತನಾಡಿರುವ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್, ಅದು ದೀಪ ಹಚ್ಚುವ ಕಂಬವಲ್ಲ, ಅಳತೆ ಮಾಡುವ ಕಂಬ. ಇವರು ಗೊಂದಲ ಸೃಷ್ಟಿಸಲು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ. ದೀಪವನ್ನು ಬೆಳಗಿಸುವ 150 ವರ್ಷಗಳಷ್ಟು ಹಳೆಯ ಸಂಪ್ರದಾಯವನ್ನು, ಅದು ನಡೆದುಕೊಂಡು ಬರುತ್ತಿರುವ ಸ್ಥಳದಲ್ಲೇ ಮುಂದುವರಿಸಲು ತಮ್ಮ ಪಕ್ಷ ಬಯಸುತ್ತದೆ ಎಂದು ತಿಳಿಸಿದ್ದಾರೆ.

Also Read
ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ! ಆದರೂ ದರ್ಗಾ ಸಮೀಪ ಕಾರ್ತಿಕ ದೀಪ ಬೆಳಗಲು ಸುಪ್ರೀಂ ಅನುಮತಿ; ಷರತ್ತುಗಳು ಹೀಗಿವೆ | Karthigai Deepam
ಅದು ದೀಪ ಹಚ್ಚುವ ಕಂಬವಲ್ಲ, ಅಳತೆ ಮಾಡುವ ಕಂಬ: ತಿರುಪ್ಪರಂಕುಂದ್ರಂನಲ್ಲಿ ದೀಪ ಬೆಳಗಿಸಲು ವಿರೋಧಿಸಿದ ಡಿಎಂಕೆ | DMK

ಕಳೆದ 150 ವರ್ಷಗಳಿಂದ ಈಗ ಎಲ್ಲಿ ದೀಪವನ್ನು ಹಚ್ಚಲಾಗುತ್ತಿದೆಯೋ, ಅಲ್ಲೇ ದೀಪ ಹಚ್ಚುವ ಪದ್ಧತಿ ನಡೆದುಕೊಂಡು ಬಂದಿದೆ. ಇದೇ ಸಂಪ್ರದಾಯವನ್ನು ನಾವು ಮುಂದುವರಿಸಲು ಬಯಸುತ್ತೇವೆ. ನ್ಯಾಯಾಲಯದ ಮೊರೆ ಹೋದವರು ತಮಿಳುನಾಡಿನ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ರಾಜ್ಯದಲ್ಲಿ ಶಾಂತಿ ನೆಲೆಸುವುದಿಷ್ಟವಿಲ್ಲ ಎಂದು ಕಿಡಿಕಾರಿದ್ದಾರೆ.

ನ್ಯಾಯಾಲಯದ ಮೊರೆ ಹೋದವರು ತಮಿಳರ ವಿರೋಧಿಗಳು. ಅವರಿಗೆ ತಮಿಳುನಾಡಿನಲ್ಲಿ ಶಾಂತಿ ಬೇಕಿಲ್ಲ. ನ್ಯಾಯಾಲಯಕ್ಕೆ ಹೋದವರ ಮನಸ್ಥಿತಿಯನ್ನು ಜನರು ಅರ್ಥಮಾಡಿಕೊಳ್ಳಲಿ ಎಂದಿದ್ದಾರೆ (ಏಜೆನ್ಸೀಸ್).