ದೇಶ

ರಾಜ್ಯಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್!...ಯುಪಿ, ಉತ್ತರಾಖಂಡದ 11 ಸ್ಥಾನಗಳಿಗೆ ಅಕ್ಟೋಬರ್ 16ಕ್ಕೆ ಎಲೆಕ್ಷನ್! | Rajya Sabha Elections

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗವು ಮಂಗಳವಾರ (ಸೆಪ್ಟೆಂಬರ್ 22) ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆಯೋಗದ ಪ್ರಕಾರ, ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ 1 ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಮುಂಬರುವ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಮಣಿಕಂಠ ಪಾ ಹಿರೇಮಠ

  • ರಾಜ್ಯಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್!

  • 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ

  • ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ 1 ಸ್ಥಾನಕ್ಕೆ ಚುನಾವಣೆ

ನವದೆಹಲಿ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗವು ಮಂಗಳವಾರ (ಸೆಪ್ಟೆಂಬರ್ 22) ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆಯೋಗದ ಪ್ರಕಾರ, ಉತ್ತರ ಪ್ರದೇಶದ 10 ಹಾಗೂ ಉತ್ತರಾಖಂಡದ 1 ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯು ಮುಂಬರುವ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಸಂಪೂರ್ಣ ವೇಳಾಪಟ್ಟಿ ಹೀಗಿದೆ

  • ಅಧಿಸೂಚನೆ ಹೊರಡಿಸುವ ದಿನಾಂಕ: ಸೆಪ್ಟೆಂಬರ್ 29, 2026 (ಮಂಗಳವಾರ)

  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 6, 2026 (ಮಂಗಳವಾರ)

  • ನಾಮಪತ್ರಗಳ ಪರಿಶೀಲನೆ: ಅಕ್ಟೋಬರ್ 7, 2026 (ಬುಧವಾರ)

  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಅಕ್ಟೋಬರ್ 9, 2026 (ಶುಕ್ರವಾರ)

  • ಮತದಾನದ ದಿನಾಂಕ: ಅಕ್ಟೋಬರ್ 16, 2026 (ಶುಕ್ರವಾರ) ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ

  • ಮತ ಎಣಿಕೆ: ಅಕ್ಟೋಬರ್ 16, 2026, ಸಂಜೆ 5:00 ರಿಂದ ಆರಂಭ

  • ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಕೊನೆಯ ದಿನಾಂಕ: ಅಕ್ಟೋಬರ್ 19, 2026 (ಸೋಮವಾರ)

ಉತ್ತರ ಪ್ರದೇಶದ 10 ರಾಜ್ಯಸಭಾ ಸದಸ್ಯರ ಅವಧಿಯು ನವೆಂಬರ್ 25 ರಂದು ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಈ 10 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಬಿಜೆಪಿ, ತಲಾ ಒಂದು ಸ್ಥಾನವನ್ನು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಹಿಡಿತದಲ್ಲಿವೆ.

ನಿವೃತ್ತರಾಗಲಿರುವ ಉತ್ತರ ಪ್ರದೇಶದ 10 ರಾಜ್ಯಸಭಾ ಸದಸ್ಯರು

ಬಿಜೆಪಿಯ ದಿನೇಶ್ ಶರ್ಮಾ, ಹರ್ದೀಪ್ ಸಿಂಗ್ ಪುರಿ, ಅರುಣ್ ಸಿಂಗ್, ಬನ್ವಾರಿ ಲಾಲ್ ವರ್ಮಾ, ಬ್ರಿಜ್ ಲಾಲ್, ನೀರಜ್ ಶೇಖರ್, ಸೀಮಾ ದ್ವಿವೇದಿ ಮತ್ತು ಗೀತಾ ಶಾಕ್ಯ, ಹಾಗೂ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಮ್‌ಜಿ ಗೌತಮ್.

ಉತ್ತರಾಖಂಡದಿಂದ ಬಿಜೆಪಿಯ ನರೇಶ್ ಬನ್ಸಾಲ್ ಅವರು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ.

ಇದನ್ನೂ ಓದಿ:ರಾಹುಲ್ ಜೊತೆ ವೇದಿಕೆ ಹಂಚಿಕೊಂಡಿದ್ದ ಕಾಮಿಡಿಯನ್ ಪುಲ್ಕಿತ್ ಮಣಿ ಯುಪಿ ಶೋಗಳು ರದ್ದು!...ಇಲ್ಲಿದೆ ನೋಡಿ ಅಸಲಿ ಕಾರಣ! | Pulkit Mani

ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆ!

ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 11 ಸ್ಥಾನಗಳೊಂದಿಗೆ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೂ ಉಪಚುನಾವಣೆ ನಡೆಯಲಿದ್ದು, ಕಳೆದ ಜುಲೈನಲ್ಲಿ ನಟಿ ಕೋಯಲ್ ಮಲ್ಲಿಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಶ್ಚಿಮ ಬಂಗಾಳದ ಈ ಸ್ಥಾನ ತೆರವಾಗಿದೆ. ಅವರ ಅಧಿಕಾರಾವಧಿಯು 2032ರ ಏಪ್ರಿಲ್ 2 ರವರೆಗೆ ಇತ್ತು. ಕೋಯಲ್ ಮಲ್ಲಿಕ್, ಈ ವರ್ಷ ರಾಜೀನಾಮೆ ನೀಡಿದ ಟಿಎಂಸಿಯ ನಾಲ್ಕನೇ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅದಕ್ಕೂ ಮುನ್ನ ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್ ಮತ್ತು ಪ್ರಕಾಶ್ ಚಿಕ್ ಬಾರೈಕ್ ಎಂಬ ಮೂವರು ಸಂಸದರು ಮೇಲ್ಮನೆಯಿಂದ ರಾಜೀನಾಮೆ ನೀಡಿದ್ದರು. ನಂತರ ಈ ಮೂವರೂ ಬಿಜೆಪಿಗೆ ಸೇರ್ಪಡೆಗೊಂಡು ಉಪಚುನಾವಣೆಯಲ್ಲಿ ಗೆದ್ದಿದ್ದರು.

ಕಳೆದ ಏಪ್ರಿಲ್​ನಲ್ಲಿ ನಡೆದ ಬಂಗಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿ ಸೋಲನುಭವಿಸಿದ ನಂತರ, ಪಕ್ಷದಲ್ಲಿ ಹಿಂದೆಂದು ಕಾಣದಷ್ಟು ದೊಡ್ಡ ಬಂಡಾಯ ಎದ್ದಿದ್ದು, 57 ಶಾಸಕರ ಬೆಂಬಲದೊಂದಿಗೆ ರಿತಬ್ರತ ಬ್ಯಾನರ್ಜಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈ ಬಂಡಾಯ ವಿಧಾನಸಭೆಯ ಮೂಲಕ ಪ್ರಾರಂಭವಾಗಿ, ಅಷ್ಟೆ ವೇಗದಲ್ಲಿ ಸಂಸತ್ತಿನ ಎರಡೂ ಮನೆಗಳಿಗೂ ವ್ಯಾಪಿಸಿತು. ಸಾಲು ಸಾಲು ನಾಯಕರು ಟಿಎಂಸಿ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಬೆಂಬಲ ಘೋಷಿಸಿದರು.

ಯಾರಿಗಿದೆ ಲಕ್​...?

ಉತ್ತರ ಪ್ರದೇಶ ವಿಧಾನಸಭೆಯ ಪ್ರಸ್ತುತ ಬಲದ ಆಧಾರದ ಮೇಲೆ, ಆಡಳಿತಾರೂಢ ಬಿಜೆಪಿ ಈ ಹಿಂದಿನಂತೆ ತನ್ನ 8 ಸ್ಥಾನಗಳನ್ನು ಮರಳಿ ಪಡೆಯುವುದು ಪಕ್ಕಾ ಆಗಿದ್ದು, ಸಮಾಜವಾದಿ ಪಕ್ಷ, ಬಿಎಸ್​ಪಿಯ ಒಂದನ್ನು ಕಿತ್ತುಕೊಂಡು ಉಳಿದ 2 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಬಿಎಸ್‌ಪಿಗೆ ಯಾವುದೇ ಸದಸ್ಯರಿಲ್ಲದ ಕಾರಣ ಇದ್ದ ತನ್ನ ಏಕೈಕ ಸದಸ್ಯತ್ವವನ್ನು ಸಹ ಕಳೆದುಕೊಳ್ಳಲಿದೆ. 1989ರ ಬಳಿಕ ಸಂಸತ್ತಿನ ಮತ್ತು ಶಾಸನಸಭೆಯ ಉಭಯ ಸದನಗಳಲ್ಲಿ ಬಿಎಸ್‌ಪಿ ಪ್ರತಿನಿಧ್ಯವಿಲ್ಲದೆ ಖಾಲಿ ಉಳಿಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ರಾಜ್ಯ ವಿಧಾನಸಭೆಯಲ್ಲಿ ಭಾರಿ ಬಹುಮತ ಹೊಂದಿರುವ ಕಾರಣ ಬಿಜೆಪಿ ಉತ್ತರಾಖಂಡದ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸ್ಥಿತಿಯಲ್ಲಿದೆ. ಅದೇ ರೀತಿ, ಪಶ್ಚಿಮ ಬಂಗಾಳ ವಿಧಾನಸಭೆಯ ಬಲದ ಆಧಾರದ ಮೇಲೆ ಬಿಜೆಪಿ ಅಲ್ಲಿಯೂ ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಅನುಕೂಲಕರ ವಾತಾವರಣವಿದೆ(ಏಜೆನ್ಸೀಸ್​).