ಇನ್ನೂ ಒಬ್ಬರು ಸಿಗೋವರೆಗೂ ಕಾಯಬೇಕು! ಮುಖೇಶ್​ ಅಂಬಾನಿ ಬಗ್ಗೆ ಎಲಾನ್​ ಮಸ್ಕ್ ತುಟಿಬಿಚ್ಚಿದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್​ 
ದೇಶ

ಇನ್ನೂ ಒಬ್ರು ಸಿಗೋವರೆಗೂ ಕಾಯಬೇಕು! ಮುಖೇಶ್​ ಅಂಬಾನಿ ಬಗ್ಗೆ ಮಸ್ಕ್ ತುಟಿಬಿಚ್ಚಿದ ಬೆನ್ನಲ್ಲೇ ರಾಹುಲ್ ಗಾಂಧಿ ಟ್ವೀಟ್​ | Rahul Gandhi

ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು? ಎಂದಿದ್ದಾರೆ.

ನವದೆಹಲಿ: ಇನ್ನೂ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಧಿಕೃತವಾಗಿ ಎಂಟ್ರಿಕೊಡಲು ಸಜ್ಜಾಗಿರುವ ಎಲಾನ್​ ಮಸ್ಕ್​ ಒಡೆತನದ ಸ್ಟಾರ್​ಲಿಂಕ್​ ಇಂಟರ್​ನೆಟ್​ಗೆ ಇದೀಗ ಭಾರತ ಸರ್ಕಾರ ಲೈಸನ್ಸ್​ ಕೊಡದೆ ವಿಳಂಬ ಮಾಡುತ್ತಿರುವ ಬಗ್ಗೆ ಸಿಟ್ಟಿಗೆದ್ದ ಟೆಸ್ಲಾ ಮಾಲೀಕ, ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕುರಿತಾಗಿ ಕೊಟ್ಟ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಪ್ರಸ್ತುತ, ಭಾರತೀಯ ಟೆಲಿಕಾಂ​ ಕಂಪನಿಗಳಿಗೆ ಸೆಡ್ಡು ಹೊಡೆಯಲು ಎದುರುನೋಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್ ನೇತೃತ್ವದ​ ಸ್ಟಾರ್‌ಲಿಂಕ್ ಇಂಟರ್​ನೆಟ್​, ತನ್ನ ಬಹುತೇಕ ಕೆಲಸಗಳನ್ನು ಈಗಾಗಲೇ ಕೊನೆಯ ಹಂತಕ್ಕೆ ತಂದಿಟ್ಟು, ಕೇವಲ ಕೇಂದ್ರ ಸರ್ಕಾರದಿಂದ ಸಿಗಬೇಕಿರುವ ಗ್ರೀನ್​ ಸಿಗ್ನಲ್​ಗಾಗಿ ಕಾದು ಕುಳಿತಿದೆ. ಆದರೆ, ಲೈಸನ್ಸ್​ ಕೊಡಲು ದಿನೇ ದಿನೇ ಮುಂದೂಡತ್ತಿರುವ ಭಾರತ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಮಸ್ಕ್​, ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು? ಎಂದಿದ್ದಾರೆ.

ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಒಡೆಯನಾ? ಎಂದು ನೇರವಾಗಿ ಚಾಟಿ ಬೀಸಿದ್ದಾರೆ. ಮಸ್ಕ್​ ಹೀಗೆ ಕೇಳುತ್ತಿದ್ದಂತೆ ರಾಹುಲ್​ ಗಾಂಧಿ ಆಕ್ಟೀವ್ ಆಗಿ ಪ್ರತಿಕ್ರಿಯಿಸಿದ್ದಾರೆ.

"ಭಾರತಕ್ಕೆ ಸ್ವಾಗತ ಎಲೋನ್​. ಇನ್ನೂ ಒಬ್ಬರು ಸಿಗುವವರೆಗೂ ನೀವು ಕಾಯಬೇಕು" ಎಂದು ಟ್ವೀಟ್​ ಮಾಡಿದ್ದಾರೆ. ಅಸಲಿಗೆ, ಇಲ್ಲಿ ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಬದಲಿಗೆ, ಪರೋಕ್ಷವಾಗಿ ಮತ್ತೊಬ್ಬ ಉದ್ಯಮಿಯ ಹೆಸರನ್ನು ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕೆಲವು ವರದಿಗಳ ಪ್ರಕಾರ, ಮತ್ತೊಬ್ಬ ಶ್ರೀಮಂತ ಉದ್ಯಮಿ ಗೌತಮ್ ಅದಾನಿಯನ್ನು ಟಾರ್ಗೆಟ್​ ಮಾಡಿರುವಂತಿದೆ. ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಅದಾನಿಗೆ ನಿಕಟ ಸಂಬಂಧವಿದೆ ಮತ್ತು ಎಂದು ಕಾಂಗ್ರೆಸ್​ ಆಗಾಗ್ಗೆ ಆರೋಪಿಸುವುದನ್ನು ನಾವಿಲ್ಲಿ ಗಮನಿಸಬಹುದು,(ಏಜೆನ್ಸೀಸ್).