ನಿಮಗೆ ತಾಕತ್ತಿದ್ರೆ ಬನ್ನಿ ಬಹಿರಂಗ ಚರ್ಚೆಗೆ! ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್​ ಗಾಂಧಿ ಓಪನ್​ ಚಾಲೆಂಜ್ | Rahul Gandhi 
ದೇಶ

ನಿಮಗೆ ತಾಕತ್ತಿದ್ರೆ ಬನ್ನಿ ಬಹಿರಂಗ ಚರ್ಚೆಗೆ! ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್​ ಗಾಂಧಿ ಓಪನ್​ ಚಾಲೆಂಜ್ | Rahul Gandhi

ನವದೆಹಲಿ: ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ, ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ ರಾಹುಲ್ ಗಾಂಧಿ, ಇದೀಗ ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಸವಾಲೊಂದನ್ನು ಹಾಕಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ಮತದಾರರ ಪಟ್ಟಿ ದುರ್ಬಳಕೆ ಮಾಡಿಕೊಂಡು 'ಮತಗಳ ಕಳವು' ನಡೆಸಲಾಗಿತು. ಈ ಮತಗಳ ಕಳುವು ಸಾಮಾನ್ಯ ಕಳುವಲ್ಲ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಧ್ವನಿಯನ್ನು ಕದಿಯುವ ಹುನ್ನಾರ. ಇದನ್ನು ದೇಶದ್ರೋಹ ಎಂದು ಕರೆಯುತ್ತಾರೆ. ಜ್ಞಾನೇಶ್ ಕುಮಾರ್ ಇಲ್ಲ ಎಂದಿದ್ದರೆ, ನರೇಂದ್ರ ಮೋದಿ ಪ್ರಧಾನಿ ಆಗುತ್ತಿರಲಿಲ್ಲ ಮತ್ತು ಅಮಿತ್ ಶಾ ಕೇಂದ್ರ ಗೃಹ ಸಚಿವರಾಗುತ್ತಿರಲಿಲ್ಲ ಎಂದು ಹೇಳಿದ್ದರು.

ಅ.31ರಂದು ಗುಜರಾತ್​ನಲ್ಲಿ ನಡೆದ ರಾಷ್ಟ್ರೀಯ ಏಕ್ತಾ ದಿವಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪ್ರತಿಪಕ್ಷಗಳು ಕೈಬಿಟ್ಟು ಪ್ರತಿಬಂಧಕ ಶಕ್ತಿಯಾಗುತ್ತಿವೆ. ದೇಶವನ್ನು ವಿಭಜಿಸಲು ಕೆಲವು ಶಕ್ತಿಗಳು ಪಿತೂರಿ ನಡೆಸುತ್ತಿವೆ. ವಿದೇಶದಲ್ಲಿರುವ ಭಾರತ ವಿರೋಧಿ ಸಂಬಂಧವನ್ನು ಮುಂದುವರೆಸಿ, ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹರಡಲು ಮತ್ತು ಭಾರತದ ಇಮೇಜ್ ಅನ್ನು ಹಾಳುಗೆಡವಲು ಮುಂದಾಗಿದ್ದಾರೆ" ಎಂದರು.

ಮೋದಿ ಹೇಳಿಕೆಗೆ ರಾಹುಲ್​ ಕೌಂಟರ್

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಮಿಸ್ಟರ್​ ಮೋದಿ ದೇಶದ ಜನತೆಗೆ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಿ. ಇಂದು ನೀವು ಪ್ರಧಾನಿ ಆಗಲು ವಿದೇಶಿ ಬೆಂಬಲವನ್ನು ಪಡೆದಿದ್ದೀರಾ. ಪ್ರಧಾನಿಯಾಗಿ ಉಳಿಯಲು ಸಹ ಅದೇ ಫಾರಿನ್​ ಸಪೋರ್ಟ್​ ಪಡೆದಿದ್ದೀರಾ. ಭಾರತದ ಹಣಕಾಸು ವ್ಯವಸ್ಥೆಯನ್ನು ವಿದೇಶಿಗರು ಸಂಪೂರ್ಣವಾಗಿ ನಿಯಂತ್ರಿಸುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ. ಮತ್ತು ವಿದೇಶಿ ಸಾಮಾಜಿಕ ಮಾಧ್ಯಮ ಪ್ಲಾಟ್​ಫಾರ್ಮ್​ಗಳು ಪ್ರಧಾನಿ ಬೆನ್ನಿಗೆ ನಿಂತಿವೆ ಎಂದರು.

"ನಿಮ್ಮ ಆರ್ಥಿಕ ವ್ಯವಸ್ಥೆಯು ವಿದೇಶಿಯರಿಂದ ಸಂಪೂರ್ಣವಾಗಿ ಕಂಟ್ರೋಲ್​ ಆಗುತ್ತಿದೆ. ವಿದೇಶಿ ಸಾಮಾಜಿಕ ಮಾಧ್ಯಮಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ. ಈ ಕುರಿತು ಬಹಿರಂಗ ಚರ್ಚೆಗೆ ನಾನು ರೆಡಿ. ಯಾವುದೇ ವೇದಿಕೆ, ಯಾವುದೇ ಸಮಯದಲ್ಲಿ. ನಿಮಗೆ ಧೈರ್ಯವಿದ್ದರೆ ಬನ್ನಿ" ಎಂದು ರಾಹುಲ್​ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ,(ಏಜೆನ್ಸೀಸ್).