ಬಿಜೆಪಿ ಪಂಜಾಬಿಗಳಿಗೆ ಮಾಡಿದ ಮೋಸ ಎಂದ ಅರವಿಂದ ಕೇಜ್ರಿವಾಲ್​!​ 
ದೇಶ

ಪೊರಕೆ ಬಿಸಾಡಿ ಕಮಲ ಹಿಡಿದ ರಾಘವ್​ ಚಡ್ಡಾ: ಬಿಜೆಪಿ ಪಂಜಾಬಿಗಳಿಗೆ ಮಾಡಿದ ದ್ರೋಹವೆಂದ ಕೇಜ್ರಿವಾಲ್​! Arvind Kejriwal on Raghav Chadha

ಪ್ರಮುಖ ಮುಖ್ಯಾಂಶಗಳು

  • ಆಮ್​ ಆದ್ಮಿ ಪಕ್ಷದಿಂದ ಬಿಜೆಪಿ ಸೇರಿದ ರಾಘವ್​ ಚಡ್ಡಾ
  • ರಾಘವ್​ ಜೊತೆ ಇತರ ಆರು ಜನ ಸಂಸದರು ಕಮಲ ಪಾಳಯಕ್ಕೆ ಎಂಟ್ರಿ
  • ಇದು ಬಿಜೆಪಿ ಪಂಜಾಬಿಗಳಿಗೆ ಮಾಡಿದ ಮೋಸ ಎಂದ ಅರವಿಂದ ಕೇಜ್ರಿವಾಲ್​!​
ನವದೆಹಲಿ: ಕೆಲ ದಿನಗಳ ಹಿಂದೆ ಆಮ್​ ಆದ್ಮಿ ಪಕ್ಷ (AAP) ದ ರಾಜ್ಯ ಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್​ ಚಡ್ಡಾ ಇದೀಗ ಭಾರತೀಯ ಜನತಾ ಪಕ್ಷ (BJP) ವನ್ನು ಸೇರಿದ್ದಾರೆ. ಇವರ ಜೊತೆಗೆ ಆಮ್​ ಆದ್ಮಿ ಪಕ್ಷದ 2/3 ಸಂಸದರು ಬಿಜೆಪಿಯನ್ನು ಸೇರಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.

ಪಂಜಾಬಿಗಳಿಗೆ ಬಿಜೆಪಿ ಮಾಡಿದ ಮೋಸ

ತಮ್ಮ ನೆಚ್ಚಿನ ಸಂಸದ ರಾಘವ್​ ಚಡ್ಡಾ, ಬಿಜೆಪಿ ಸೇರಿದ ಕುರಿತು ಎಕ್ಸ್​ ಖಾತೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿರುವ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್ (Arvind Kejriwal on Raghav Chadha)​, ಇದು ಬಿಜೆಪಿ ಪಂಜಾಬಿನ ಜನರಿಗೆ ಮಾಡಿರುವ ಮೋಸವಾಗಿದೆ ಎಂದು ಬರೆದುಕೊಂಡಿದ್ದಾರೆ.
ಚಡ್ಡಾ ಜೊತೆ ಇತರ ಆರು ಜನ ಬಿಜೆಪಿಗೆ
ರಾಘವ್​ ಚಡ್ಡಾ, ಇದಾಗಲೇ ಎಎಪಿಯನ್ನು ತೊರೆದು ಬಿಜೆಪಿ ಸೇರಿದ್ದರೆ, ಇವರಿಗೆ ಬೆಂಬಲ ಎಂಬಂತೆ ಸ್ವಾತಿ ಮಹಿವಾಲ್​ (ದೆಹಲಿ), ಹರ್ಭಜನ್​ ಸಿಂಗ್ (ಪಂಜಾಬ್​)​, ಸಂದೀಪ್​ ಪಾಠಕ್ (ಪಂಜಾಬ್​)​, ಅಶೋಕ್​ ಮಿತ್ತಲ್ (ಪಂಜಾಬ್​)​, ರಜೀಂದರ್​ ಗುಪ್ತಾ (ಪಂಜಾಬ್​) ಮತ್ತು ವಿಕ್ರಮ್​ ಸಹಾನಿ (ಪಂಜಾಬ್​) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದು ಆಪರೇಷನ್ ಕಮಲದ ಕರಾಳ ಮುಖ

ರಾಘವ್​ ಚಡ್ಡಾ ಮತ್ತು ಇತರ ಎಂಪಿಗಳು ಬಿಜೆಪಿ ಸೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್​ದ ಮುಖ್ಯಮಂತ್ರಿ ಭಗವಂತ್​ ಸಿಂಗ್​ ಮಾನ್​, ಇದು ಆಪರೇಷನ್ ಕಮಲದ ಕರಾಳ ಮುಖ, ಇದು ವಿರೋಧ ಪಕ್ಷವನ್ನು ಮುಗಿಸುವ ಸಂಚೆಂದು ಕಿಡಿಕಾರಿದ್ದಾರೆ.

ಪಕ್ಷದಿಂದ ಹೊರ ಬೀಳಲು ಕಾರಣವೇನು?

ಕೆಲ ದಿನಗಳ ಹಿಂದೆ ರಾಘವ್​ ಚಡ್ಡಾ ಅವರನ್ನ ಎಎಪಿ ಪಕ್ಷ ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿತ್ತು. ರಾಘವ್​ ತೀರಾ ಕ್ಷುಲ್ಲಕ ವಿಷಯಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ ಹಾಗೂ ಅದರ ಕುರಿತು ಸಮಯ ವ್ಯರ್ಥ ಮಾಡುತ್ತಾರೆ ಎನ್ನುವುದು ಪಕ್ಷ ನೀಡಿದ ಸ್ಪಷ್ಟನೆಯಾಗಿತ್ತು.
ಆದರೆ ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದ ರಾಘವ್​ ಚಡ್ಡಾ ತಾವು ಪಕ್ಷಕ್ಕಾಗಿ ಏನೇನು ಮಾಡಿದ್ದೆವೆ ಎನ್ನುವುದನ್ನು ವಿಡಿಯೋಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಆ ಸಮಯದಲ್ಲಿಯೇ ಚಡ್ಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈಗ ಅದನ್ನು ಖುದ್ದು ರಾಘವ್​ ಅವರೇ ಸಾಭಿತು ಪಡಿಸಿದ್ದಾರೆ,(ಏಜನ್ಸೀಸ್​).