ರಾಜ್ಯ ಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೊಕ್ ನೀಡಿದ ಎಎಪಿ
- ರಾಜ್ಯ ಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೊಕ್ ನೀಡಿದ ಎಎಪಿ
- ಚಡ್ಡಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ: ಪಂಜಾಬ್ ಸಿಎಂ ಮಾನ್
- ನನ್ನನ್ನು ಸುಮ್ಮನಾಗಿಸಬಹುದು; ಸೋಲಿಸಲಾಗದು: ರಾಘವ್ ಚಡ್ಡಾ
ಪಂಜಾಬ್: ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿರುವ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ (Bhagwant Mann on Raghav Chadha), ರಾಘವ್ ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದೆವೆ ಎಂದು ಹೇಳಿದ್ದಾರೆ.
ಶುಕ್ರವಾರ (ಏ.3) ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಾನ್, ಚಡ್ಡಾ ರಾಜ್ಯ ಸಭೆಯಲ್ಲಿ ತೀರಾ ಚಿಕ್ಕ-ಚಿಕ್ಕ ವಿಷಯಗಳ ಬಗ್ಗೆ ಧ್ವನಿ ಎತ್ತುತ್ತಿದ್ದದ್ದು ಪಕ್ಷದ ವರ್ಚಸ್ಸಿಗೆ ತೊಂದರೆ ಉಂಟುಮಾಡಿದ ಕಾರಣ ಈ ನಿರ್ಣಯವನ್ನು ತೆಗೆದುಕೊಂಡಿದ್ದೆವೆ ಎಂದು ಮಾನ್ ತಿಳಿಸಿದ್ದಾರೆ.
ನನ್ನನ್ನು ಸುಮ್ಮನಾಗಿಸಬಹುದು; ಸೋಲಿಸಲಾಗದು
ಆಮ್ ಆದ್ಮಿ ಪಕ್ಷದ, ಪಂಜಾಬ್ ರಾಜ್ಯದ ರಾಜ್ಯಸಭಾ ಸಂಸದನಾಗಿರುವ ರಾಘವ್ ಚಡ್ಡಾ, ತಮ್ಮನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ನೀವು ಸುಮ್ಮನಾಗಿಸಬಹುದೇ ಹೊರತು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ರಾಘವ್ ಚಡ್ಡಾ ಎಎಪಿ ಪಕ್ಷದ ನಿರ್ಣಯಕ್ಕೆ ಸೆಡ್ಡು ಹೊಡೆದಿದ್ದಾರೆ. ನನಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಕ್ಕಾಗೆಲ್ಲಾ ಜನಪರ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿದ್ದೆನೆ. ಇದೇ ನನಗೆ ಇಂದು ಮುಳ್ಳಾಗಿದೆ ಎಂದರೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಚಡ್ಡಾ ಹೇಳಿದ್ದಾರೆ.
ಚಡ್ಡಾರ ಜನಪರ ಬೇಡಿಕೆಗಳೇನಿತ್ತು?
ಎಕ್ಸ್ನಲ್ಲಿ ತಾವು ಇಲ್ಲಿಯವರೆಗೂ ಜನರ ಪರವಾಗಿ ಮಾತನಾಡಿದ್ದ ಬಗ್ಗೆ ವಿಡಿಯೋವೊಂದನ್ನು ಚಡ್ಡಾ ಹಂಚಿಕೊಂಡಿದ್ದಾರೆ. ಗಿಗ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅವರೇ ಸ್ವತಂ ಒಂದು ದಿನ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದರು. ಜೊತೆಗೆ ಅಥಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಪಾಲುದಾರರ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಧ್ವನಿ ಎತ್ತಿದ್ದರು.
ಮೊಬೈಲ್ ರೀಚಾರ್ಜ್ ಪ್ಲಾನ್‌ಗಳು 28 ದಿನಗಳ ಬದಲಿಗೆ ಪೂರ್ಣ ತಿಂಗಳವರೆಗೆ (30/31 ದಿನಗಳು) ಇರಬೇಕು ಎಂದು ಒತ್ತಾಯಿಸಿದ್ದರು. ವಿಮಾನ ನಿಲ್ದಾಣದಲ್ಲಿ ಕೈಗೆಟುಕುವ ದರದಲ್ಲಿ ಆಹಾರ ಸಿಗುವಂತೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇತ್ತೀಚೆಗೆ ಪುರುಷರಿಗೂ ಪ್ರಿತೃತ್ವ ರಜೆ ನೀಡಬೇಕೆಂದು ಒತ್ತಾಯಿಸಿದ್ದರು.
ಚಡ್ಡಾ ಜಾಗಕ್ಕೆ ಅಶೋಕ್ ಮಿತ್ತಲ್
ರಾಘವ್ ಚಡ್ಡಾ ಅವರನ್ನು ರಾಜ್ಯ ಸಭಾದ ಉಪನಾಯಕನ ಸ್ಥಾನದಿಂದ ತೆರವುಗೊಳಿಸಿದ ನಂತರ ಎಎಪಿ ಪಕ್ಷ ಅಶೋಕ್ ಮಿತ್ತಲ್ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ನೂತನ ಉಪನಾಯಕನಾಗಿ ನೇಮಕ ಮಾಡಿದೆ,(ಏಜನ್ಸೀಸ್).