Mohali office murder case
- ಪಂಜಾಬ್‌ನ ಮೊಹಾಲಿಯಲ್ಲಿ ಕಚೇರಿ ಅವಧಿಯಲ್ಲೇ ನಡೆದ ಭೀಕರ ಹತ್ಯೆ
- ಮಾಜಿ ಪ್ರೇಯಸಿ ಡಿಂಪಲ್ ಮೇಲೆ ಹಠಾತ್ ದಾಳಿ ನಡೆಸಿದ ಯುವಕ.
- ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದುಕ್ರೂರವಾಗಿ ಕೊಂದ ಪಾಪಿ.
ಮೊಹಾಲಿ: ಪ್ರೇಮ ವಿಚಾರಕ್ಕೆ ಶುರುವಾದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾದ ಪ್ರಕರಣ ಪಂಜಾಬ್‌ನ ಮೊಹಾಲಿಯಲ್ಲಿ ಬೆಳಕಿಗೆ ಬಂದಿದೆ. ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಎಂಬಾತನಿಂದ ಡಿಂಪಲ್ ಎಂಬ ಹೆಸರಿನ ಯುವತಿ ಹತ್ಯೆಗೀಡಾಗಿದ್ದಾಳೆ.
ಮೊಹಾಲಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಗುರುವಾರ ಸಂಜೆ 7:40 ರ ಸುಮಾರಿಗೆಕಚೇರಿಗೆ ಬಂದ ಹಂತಕ ತನ್ನ ಮಾಜಿ ಪ್ರೇಮಿ ಡಿಂಪಲ್ನೊಂದಿಗೆ ಮಾತು ಆರಂಭಿಸಿ, ಹಿಂದಿನಿಂದ ಇರಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ. ಆಕೆ ತನ್ನ ಪ್ರಾಣ ಉಳಿಸಿಕೊಳ್ಳಲು ಓಡುವಾಗ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾನೆ.
ಕಚೇರಿಯಲ್ಲೇ ಹೈ ಡ್ರಾಮಾ
ಕಚೇರಿಯಲ್ಲಿದ್ದ ಐದು ಉದ್ಯೋಗಿಗಳು ಆತನನ್ನು ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಇತ್ತ ಯುವತಿ ನೆಲದ ಮೇಲೆ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಗ 20 ಬಾರಿ ಇರಿದಿದ್ದಾನೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಬದುಕುಳಿಯಲಿಲ್ಲ ಎನ್ನಲಾಗಿದೆ.
30ಕ್ಕೂ ಹೆಚ್ಚು ಬಾರಿ ಗಂಟಲಿಗೆ ಇರಿದುಕೊಂಡ
ಪ್ರೇಮಿ ಮೃತಪಟ್ಟಳೆಂದು ತಿಳಿದ ಆತ ತನ್ನ ಗಂಟಲನ್ನು ಇರಿದಿಕೊಂಡಿದ್ದಾನೆ. ಕನಿಷ್ಠ 30 ಕ್ಕೂ ಹೆಚ್ಚು ಬಾರಿ ಗಂಟಲಿಗೆ ಚೂರಿಯಿಂದ ಇರಿದುಕೊಂಡಿರುವುದು ಸಿಸಿಟಿವಿ ಕ್ಯಾಮೇರಾದಲ್ಲಿದೆ. ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗಿದೆ.
ಪ್ರೇಮದ ವಿಚಾರಕ್ಕೆ ಕೊಲೆ
ಇಬ್ಬರ ನಡುವೆ ಈ ಹಿಂದೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದ್ದು, ಇತ್ತೀಚೆಗೆ ಇಬ್ಬರ ಮಧ್ಯೆ ಬಿರುಕು ಮೂಡಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೇ ಹಳೇ ಹಗೆತನ ಹಾಗೂ ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಈ ಘೋರ ಹತ್ಯೆ ನಡೆದಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ, (ಏಜೆನ್ಸೀಸ್).