ಸಾಂದರ್ಭಿಕ ಚಿತ್ರ 
ದೇಶ

PSLV-C62 ರಾಕೆಟ್ ಉಡಾವಣೆ ವಿಫಲ: ಮೂರನೇ ಹಂತದಲ್ಲಿ ಅಡಚಣೆ ಎಂದು ಇಸ್ರೋ ಮಾಹಿತಿ

PSLV-C62: ಇಂದು(ಜ. 12) ಬೆಳಗ್ಗೆ 10.18ಕ್ಕೆ ಉಡಾವಣೆಯಾಗಿದ್ದ ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-62 ಉಡಾವಣೆಯೂ ಮೂರನೇ ಹಂತದ ಉಡಾವಣೆ ವೇಳೆ ಅಡಚಣೆ ಉಂಟಾಗಿ ವಿಫಲವಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
PSLV-C62 ರಾಕೆಟ್ ಅನ್ನು ಇಂದು ಬೆಳಗ್ಗೆ 10.18ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಯಿತು. 64ನೇ ಪಿಎಸ್‌ಎಲ್‌ವಿಯ ಮಿಷನ್, ಪಿಎಸ್‌ಎಲ್‌ವಿ-ಸಿ62, ಇಒಎಸ್-ಎನ್1 ಅನ್ನು ಹೊತ್ತೊಯ್ಯುದಿತ್ತು.
ಈ ಕುರಿತು ಮಾತನಾಡಿರುವ ವಿ.ನಾರಾಯಣನ್​, ಇಂದು ನಾವು PSLV C62 / EOS - N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ವಾಹನವು ನಾಲ್ಕು ಹಂತದ ವಾಹನವಾಗಿದ್ದು, ಎರಡು ಘನ ಹಂತಗಳು ಮತ್ತು ಎರಡು ದ್ರವ ಹಂತಗಳನ್ನು ಹೊಂದಿದೆ. ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು. ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದಲ್ಲಿ ಹೆಚ್ಚಿನ ಅಡಚಣೆ ಕಂಡು ಬಂದಿದೆ. ತರುವಾಯ ಹಾರಾಟದ ಮಾರ್ಗದಲ್ಲಿ ವಿಚಲನತೆ ಕಂಡಿದೆ. ಡೇಟಾವನ್ನು ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
PSLV-C62 ಒಟ್ಟು 15 ಉಪಗ್ರಹಗಳನ್ನು ಹೊತ್ತೊಯ್ದಿತ್ತು, ಅವುಗಳಲ್ಲಿ EOS-N1 ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿದ ಅನ್ವೇಷ ಎಂಬ ಕಣ್ಗಾವಲು ಉಪಗ್ರಹವೂ ಸೇರಿತ್ತು. EOS-N1 ಮತ್ತು 14 ಸಹ-ಪ್ರಯಾಣಿಕ ಉಪಗ್ರಹಗಳನ್ನು ಸೂರ್ಯ ಸಿಂಕ್ರೊನಸ್ ಕಕ್ಷೆಗೆ ಸೇರಿಸಲು ಯೋಜಿಸಲಾಗಿತ್ತು, ಆದರೆ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್‌ಸ್ಟ್ರೇಟರ್ (KID) ಉಪಗ್ರಹವನ್ನು ಮರು-ಪ್ರವೇಶ ಪಥಕ್ಕಾಗಿ ಉದ್ದೇಶಿಸಲಾಗಿತ್ತು.
ಇದೇ PSLV-C61 ಮಿಷನ್ ಉಡಾವಣೆಯೂ 2025 ಮೇ 18ರಂದು ಉಡಾವಣೆ ಮಾಡಲಾಗಿತ್ತು. ಅಂದು ಸಹ ಮಿಷನ್ ವಿಫಲವಾಗಿತ್ತು (ಏಜೆನ್ಸೀಸ್).