ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾದ 'ಇಂಡಿಯಾ' ಮೈತ್ರಿಕೂಟ 
ದೇಶ

ರಾಷ್ಟ್ರಪತಿ ಮುರ್ಮು ಅವರನ್ನು ಭೇಟಿಯಾದ 'ಇಂಡಿಯಾ' ಮೈತ್ರಿಕೂಟ: ಸಭೆಯೊಳಗಿನ ಸ್ಫೋಟಕ ಮಾಹಿತಿ ಬಹಿರಂಗ! | INDIA Bloc Meet President

ನವದೆಹಲಿ: ಚುನಾವಣಾ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇಂಡಿಯಾ ಮೈತ್ರಿಕೂಟವು ರಾಷ್ಟ್ರಪತಿ ದ್ರೌಪದಿ ಮುರ್ಮು (INDIA Bloc Meet President) ಅವರನ್ನು ಭೇಟಿ ಮಾಡಿದೆ.

ನವದೆಹಲಿ: ಚುನಾವಣಾ ವ್ಯವಸ್ಥೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇಂಡಿಯಾ ಮೈತ್ರಿಕೂಟವು ರಾಷ್ಟ್ರಪತಿ ದ್ರೌಪದಿ ಮುರ್ಮು (INDIA Bloc Meet President) ಅವರನ್ನು ಭೇಟಿ ಮಾಡಿದೆ.

ರಾಷ್ಟ್ರಪತಿ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮತ ಕಳ್ಳತನ ನಡೆಯುತ್ತಿದೆ ಎಂಬುದನ್ನು ರಾಷ್ಟ್ರಪತಿಗಳು ನಿರಾಕರಿಸುತ್ತಾರೆ, ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ಇದೆ ಎಂದು ಅವರು ಹೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ನಾವು ಹೇಳಿದ್ದನ್ನು ಅವರು ಒಪ್ಪಿಕೊಂಡಿದ್ದು ನನಗೆ ಆಘಾತ ಮತ್ತು ತೀವ್ರ ಅಚ್ಚರಿಯನ್ನುಂಟುಮಾಡಿತು ಎಂದು ಕಾಂಗ್ರೆಸ್​ ನಾಯಕರು ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ರಾಹುಲ್​, ನಾವು ಸೋಮವಾರ ಸುಪ್ರೀಂಕೋರ್ಟ್‌ಗೆ ತೆರಳಿ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ನಾಗಾಂವ್‌ನಲ್ಲಿ 'ಕೈ' ಹಿಡಿಯದ ಮುಸ್ಲಿಂ ಸಮುದಾಯ: ಅಲ್ಪಸಂಖ್ಯಾತರೂ ಕಾಂಗ್ರೆಸ್​ ಜೊತೆ ಇಲ್ಲ, ಗೌರವ್‌ರನ್ನು ಮೊದಲು ಕೆಳಗೆಳಿಸಿ ಎಂದ ಮಾಜಿ ಮಿತ್ರ! | Nagaon Bypoll

ಸಂಸತ್ತಿನಿಂದ ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಮತ್ತು ಪಕ್ಷದ ನಾಯಕರು ಸಂಸತ್ತಿನಿಂದ ರಾಷ್ಟ್ರಪತಿ ಭವನದವರೆಗೆ ಮೆರವಣಿಗೆ ನಡೆಸಿದರು, ಬಳಿಕ ಕೆಲ ಮುಖಂಡರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿತು. ಅವರ ಮನವಿ ಪತ್ರದಲ್ಲಿ ನಾಲ್ಕು ಮುಖ್ಯ ಬೇಡಿಕೆಗಳನ್ನು ಮುಂದಡಲಾಗಿದೆ. ಅವು ಈ ಕೆಳಗಿನಂತಿವೆ.

  • ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಸಿಇಸಿ ಹಾಗೂ ಇಸಿಗಳಿಗೆ ಜೀವಾವಧಿ ವಿನಾಯಿತಿ ನೀಡುವ 2023ರ ಕಾನೂನಿನ ರದ್ದು.

  • ಎಸ್‌ಐಆರ್ ತಕ್ಷಣದ ಅಮಾನತು ಮತ್ತು ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ ಎಲ್ಲಾ 13.3 ಕೋಟಿ ಮತದಾರರ ಹೆಸರನ್ನು ಮತ್ತೆ ಸೇರಿಸುವುದು.

  • ಮುಂಬರುವ ಎಲ್ಲಾ ಚುನಾವಣೆಗಳಿಗೆ ಬ್ಯಾಲೆಟ್‌ ಪೇಪರ್ ಬಳಕೆ.

  • ಮತ ಕಳ್ಳತನಕ್ಕೆ ನಿರ್ಣಾಯಕ ಸಾಕ್ಷ್ಯವನ್ನು ಪ್ರಸ್ತುತಪಡಿಸಲಾದ ಕಳೆದ ಎರಡು ವರ್ಷಗಳ ಎಲ್ಲಾ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸುವುದು.

ಕೆಲ ನಾಯಕರು ಕರ್ತವ್ಯ ಪಥದಲ್ಲಿ ಧರಣಿ ನಡೆಸುತ್ತಾ, ಜ್ಞಾನೇಶ್, ಇದು ಮುಗಿಯಿತು ಬ್ರೋ! (Gyanesh, it's done bro!) ಎಂಬ ಪ್ಲೆಕಾರ್ಡ್‌ಗಳನ್ನು ಹಿಡಿದು, ಚುನಾವಣಾ ಆಯೋಗ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಡುವಿನ ಮತ ಕಳ್ಳತನದ ಬಗ್ಗೆ ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಸುಮಾರು 150 ಸಂಸದರು ಮತ್ತು ಇತರ ನಾಯಕರ ಸಭೆಯ ನಂತರ ಈ ಮೆರವಣಿಗೆ ನಡೆಯಿತು. ಅಲ್ಲಿ 16 ವಿವಿಧ ಪಕ್ಷಗಳ ನಾಯಕರು ಕೇಂದ್ರ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿ ಪತ್ರಕ್ಕೆ ಸಹಿ ಹಾಕಿದರು. ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಳೆದ ಕೆಲವು ದಿನಗಳಿಂದ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳು ಸರ್ಕಾರದ ಅಡಿಪಾಯವನ್ನೇ ಅಲ್ಲಾಡಿಸಿವೆ ಎಂದು ಹೇಳಿದರು(ಏಜೆನ್ಸೀಸ್​).