ಮೂತ್ರ ವಿಸರ್ಜಿಸಿ ಕೈ ತೊಳೆಯದೆ ಪಾಪ್ಕಾರ್ನ್ ಮಾಡಿದ ವರ್ತಕ: ವೈರಲ್ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದಿಷ್ಟು... Popcorn
- ಮೂತ್ರ ವಿಸರ್ಜಿಸಿ ಕೈ ತೊಳೆಯದೇನೆ ಪಾಪ್ಕಾರ್ನ್ ಮಾಡಿದ ಬೀದಿಬದಿ ವ್ಯಾಪರಿ
- ಮಾಲ್ಗಳಲ್ಲಿ ಪಾಪ್ಕಾರ್ನ್ ಖರೀದಿ ದುಬಾರಿ. ಆದರೆ, ಸಾಮಾನ್ಯ ವ್ಯಾಪಾರಿಗಳು ಹೀಗೆ ಮಾಡಿದ್ರೆ ಹೇಗೆ?
- ಬೀದಿ ಬದಿ ಆಹಾರ ಮಾರಾಟ ಮಾಡುವುದನ್ನೇ ನಿಷೇಧಿಸಬೇಕು ಎಂದ ನೆಟ್ಟಿಗರು
Popcorn : ಬೀದಿ ಬದಿ ಆಹಾರ ಮಾರಾಟ ಮಾಡುವ ಬಹುತೇಕ ವ್ಯಾಪಾರಿಗಳಲ್ಲಿ ಯಾವುದೇ ನೈರ್ಮಲ್ಯ ಇರೋದಿಲ್ಲ. ಹೀಗಾಗಿ, ಅಂತಹ ಸ್ಥಳದಲ್ಲಿ ಸೇವನೆ ಮಾಡ್ಬೇಡಿ ಅನ್ನೋದು ವೈದ್ಯರ ಬಿನ್ನಹ. ಆದರೂ, ಗೋಲ್ಗಪ್ಪ, ಬೇಲ್ಪುರಿಯೆನ್ನುವ ಚಾಟ್ಗಳು, ಮೊಮೋಸ್ ಹಾಗೂ ಪಾಪ್ಕಾರ್ನ್ಗಳನ್ನು ಕಂಡರೆ ಹೊಟ್ಟೆ ಬೇಡ ಎಂದರೂ ನಾಲಿಗೆ ಬಿಡೋದೆ ಇಲ್ಲ.
ಬೀದಿ ಬದಿ ವ್ಯಾಪಾರಿಗಳು ಎಷ್ಟರ ಮಟ್ಟಿಗೆ ನೈರ್ಮಲ್ಯ ಕಾಪಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಸಬ್ಯಸಾಚಿ ಎಂಬ ಹೆಸರಿನವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಎರಡು ಲಕ್ಷ ಜನರು ವೀಕ್ಷಿಸಿದ್ದಾರೆ. ಹಲವಾರು ಮಂಡಿ ಕಾಮೆಂಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಮೊದಲಿಗೆ ರಸ್ತೆ ಬದಿಯಲ್ಲಿ ಪಾಪ್ಕಾರ್ನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ, ಮೂತ್ರ ವಿಸರ್ಜನೆಗೆಂದು ಹೋಗುತ್ತಾನೆ. ಆ ಕೆಲಸ ಆದ ನಂತರ ನೇರವಾಗಿ, ಬಂದು ತನ್ನ ಪಾಪ್ಕಾರ್ನ್ ಬಂಡಿಯ ಬಳಿ ನಿಲ್ಲುತ್ತಾನೆ. ಅತ್ತಿಂದಿತ್ತ ನೋಡುವ ಅವನು ಕೂಡಲೇ ತನ್ನ ಕೈಯನ್ನು ಪಾಪ್ಕಾರ್ನ್ ಒಳಗೆ ಹಾಕಿ ಕೆಲಸ ಮಾಡಲು ಶುರು ಮಾಡುತ್ತಾನೆ. ಈ ಪ್ರಕ್ರಿಯೆಯೂ ವಿಡಿಯೋದಲ್ಲಿ ಇದೆ. ದುಬಾರಿ ಅಂಗಡಿ, ಮಾಲ್ನಲ್ಲಿ ಖರೀದಿಸೋ ಮುನ್ನ ಇಂತಹ ಸಾಮಾನ್ಯರ ಅಂಗಡಿಯಲ್ಲಿ ಆಹಾರ ಪದಾರ್ಥ ಕೊಂಡುಕೊಳ್ಳಬೇಕು ಎಂದು ಹಲವರು ಹೇಳುತ್ತಾರೆ. ಆದರೆ, ಈ ತರಹದ ಪ್ರವೃತ್ತಿಯಿದ್ದರೇ ನಮ್ಮ ಆರೋಗ್ಯದ ಗತಿ ಏನಾಗಬೇಕು ಎನ್ನುತ್ತಾರೆ ಸಬ್ಯಸಾಚಿ.
ನೈರ್ಮಲ್ಯವೇ ಇಲ್ಲ ಆರೋಗ್ಯ ಏನಾಗ್ಬೇಕು?
ಈ ವಿಡಿಯೋಗೆ ಸಾಕಷ್ಟು ಜನರು ಬೆಂಬಲಿಸಿದ್ದಾರೆ. ರಸ್ತೆಯಲ್ಲಿ ಸಿಗುವ ಆಹಾರಕ್ಕೆ ನೈರ್ಮಲ್ಯ ಮುಖ್ಯ. ಅವರು ಆ ಕ್ರಮವನ್ನು ಪಾಲನೆ ಮಾಡದೇ ಹೋದಲ್ಲಿ ಅದು ಬಹಿಷ್ಕಾರವಾಗಲಿ ಎಂದು ಒಬ್ಬ ಇನ್ಸ್ಟಾಗ್ರಾಮ್ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಬೀದಿ ಬದಿ ಆಹಾರ ಮಾರಾಟ ಬಹಿಷ್ಕರಿಸಿ
ಮತ್ತೊಬ್ಬ ಮಹಿಳೆ ಹೀಗೆಂದು ಬರೆದುಕೊಂಡಿದ್ದಾರೆ, ನಿನ್ನೆ ನಾನು ಪರಾಠ ಖರೀದಿ ಮಾಡಲು ಹೋಟೆಲ್ಗೆ ತೆರಳಿದ್ದೆ. ಒಬ್ಬ ಮಹಿಳೆ ಪರಾಠ ಬೇಯಿಸಲು ಬಳಸುತ್ತಿದ್ದ ಬಟ್ಟೆಯನ್ನು ಅದಕ್ಕಷ್ಟೇ ಬಳಕೆ ಮಾಡಿಕೊಳ್ಳಲಿಲ್ಲ. ಒಂದೇ ಟವಲ್ ಅನ್ನು ತವಾ ಹೊರೆಸಲು, ಟೇಬಲ್ ಹೊರೆಸಲು, ಗೋಡೆ ಮೇಲೆ ಕಟ್ಟಿದ್ದ ಜೇಡ ತೆಗೆಯಲು ಬಳಕೆ ಮಾಡಿದ್ದಳು. ನನಗೆ ಅದನ್ನು ಕಂಡು ವಾಕರಿಕೆ ಬಂದಂತಾಯ್ತು. ಆಕೆ ಬಳಿ ಹೋಗಿ ದೀದಿ ನಾನು ಮತ್ತೆ ಮರಳುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತೆ ಎಂದು ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).