ದೇಶ

ಪೋಕ್ಸೋ ಪ್ರಕರಣ; ಮಲಯಾಳಂ ನಟ ಶ್ರೀಜಿತ್ ರವಿಗೆ 50 ಸಾವಿರ ರೂ. ದಂಡ, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ | Sreejith Ravi

ಮಲಯಾಳಂ ಹಿರಿಯ ನಟ ಟಿಜಿ ರವಿ ಅವರ ಪುತ್ರ ಶ್ರೀಜಿತ್ ರವಿ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಫಾಸ್ಟ್ ಟ್ರಾಕ್ ಕೋರ್ಟ್​​ವೊಂದು ಸೋಮವಾರ(ನ. 23) ಅವರಿಗೆ 50 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ವರದಿಯಾಗಿದೆ.

ತಿರುವನಂತಪುರಂ: ಮಲಯಾಳಂ ಹಿರಿಯ ನಟ ಟಿಜಿ ರವಿ ಅವರ ಪುತ್ರ ಶ್ರೀಜಿತ್ ರವಿ ಅವರ ವಿರುದ್ಧ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಫಾಸ್ಟ್ ಟ್ರಾಕ್ ಕೋರ್ಟ್​​ವೊಂದು ಸೋಮವಾರ(ನ. 23) ಅವರಿಗೆ 50 ಸಾವಿರ ರೂ. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ವರದಿಯಾಗಿದೆ.

ಹಲವು ಮಲಯಾಳಂ ಚಲನಚಿತ್ರಗಳಲ್ಲಿ, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಹಾಗೂ ನಿರ್ದಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀಜಿತ್ ರವಿಗೆ ಶಿಕ್ಷೆ ವಿಧಿಸುವ ಜೊತೆಗೆ ಕೋರ್ಟ್, ಜಾಮೀನು ನೀಡಿದ್ದು, ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನೂ ಕಲ್ಪಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಈ ಪ್ರಕರಣವು 2022ರ ಜುಲೈ 4ರಂದು ನಡೆದ ಘಟನೆಗೆ ಸಂಬಂಧಿಸಿದೆ. ಅಂದು ತ್ರಿಶೂರ್‌ನ ಅಯ್ಯಂತೋಲೆ ಮೈದಾನದ ಬಳಿ, ಶ್ರೀಜಿತ್ ರವಿ ಶಾಲಾ ಮಕ್ಕಳ ಮುಂದೆ ತಮ್ಮ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರು ಸ್ವೀಕರಿಸಿದ ನಂತರ, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು.

ಆ ಸಮಯದಲ್ಲಿ ಈ ಪ್ರಕರಣ ಗಮನ ಸೆಳೆದಿತ್ತು. ಇಬ್ಬರು ಮಕ್ಕಳ ದೂರುಗಳ ನಂತರ ಆತನನ್ನು ವಶಕ್ಕೆ ಪಡೆಯಲಾಯಿತು. ಮತ್ತು ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪ್ರಕರಣ ತನಿಖೆ ನಡೆಸಿ ಚಾರ್ಜ್​ಶೀಟ್ ಸಲ್ಲಿಸಿದ್ದರು. ಘಟನೆ ನಡೆದು ಸುಮಾರು ನಾಲ್ಕು ವರ್ಷಗಳ ನಂತರ ಸೋಮವಾರ ಕೋರ್ಟ್ ತೀರ್ಪು ನೀಡಿದೆ.

ಶ್ರೀಜಿತ್ ರವಿ 2005ರಲ್ಲಿ ಚಿತ್ರರಂಗ ಪ್ರವೇಶಿಸಿದ್ದು, ಪುಣ್ಯಲನ್ ಅಗರಬತ್ತೀಸ್, ಗೋಧಾ, ರಾಮಂತೆ ಇದೇಂತೋಟ್ಟಂ ಮತ್ತು ಜೋ ಮತ್ತು ಜೋ ಸೇರಿದಂತೆ 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹೆಚ್ಚಾಗಿ ಪೋಷಕ, ಹಾಸ್ಯ ಮತ್ತು ನಕಾರಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ (ಏಜೆನ್ಸೀಸ್).