ಜೋಧಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ
- ಜೋಧಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ
- ಮಾರ್ಪಾಡಾದ ಉಡಾನ್ ಯೋಜನೆಗೆ ಮುಂದಿನ 10 ವರ್ಷಗಳವರೆಗೆ 28,840 ಕೋಟಿ ಬಜೆಟ್
- ರಾಜಸ್ಥಾನದ ಜೋಧಪುರದಲ್ಲಿ 480 ಕೋಟಿ ವೆಚ್ಚದ ಹೈಟೆಕ್ ಏರ್‌ಪೋರ್ಟ್ ಟರ್ಮಿನಲ್ ಲೋಕಾರ್ಪಣೆ
ಜೋಧಪುರ: ಶನಿವಾರ (ಜು.4) ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಜೋಧಪುರ್ ವಿಮಾನ ನಿಲ್ದಾಣದಲ್ಲಿ (PM Modi in Jodhpur Airport) ನಿರ್ಮಿಸಲಾದ ನೂತನ ಟರ್ಮಿನಲ್ನ್ನು ಉದ್ಘಾಟಿಸಿದ್ದಾರೆ. ಈ ಟರ್ಮಿನಲ್ ಅನ್ನು ಸುಮಾರು 480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದೇ ಸಂದರ್ಭದಲ್ಲಿ ಮಾರ್ಪಾಡು ಮಾಡಲಾದ ಉಡಾನ್ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ.
ಉದ್ಘಾಟನೆಗೆ ಆಗಮಿಸಿದ ಪ್ರಧಾನಿಗಳನ್ನು ರಾಜಸ್ಥಾನ್ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ರಾಜ್ಯಪಾಲ ಹರಿಭಾವು ಬಗಾಡೆ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸ್ವಾಗತಿಸಿದರು.
ಟರ್ಮಿನಲ್, ಉಡಾನ್ ಉದ್ಘಾಟನೆ!
ಜೋಧಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಸುಮಾರು 480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಈ ಟರ್ಮಿಲನ್ ಸುಮಾರು 23,000 ಸ್ಕ್ವೇರ್ ಮೀಟರ್ ವಿಸ್ತಾರವಾಗಿದ್ದು, ವಾರ್ಷಿಕ 20 ಲಕ್ಷ ಪ್ರಯಾಣಿಕರು ಈ ಟರ್ಮಿನಲ್ ಮೂಲಕ ಪ್ರವೇಶ ಪಡೆಯಲಿದ್ದಾರೆಂದು ಹೇಳಲಾಗುತ್ತಿದೆ.
ಹಾಗೆಯೇ ಉಡಾನ್ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದ್ದು, ಮುಂದಿನ ಹತ್ತು ವರ್ಷಗಳ ಮಟ್ಟಿಗೆ ಸುಮಾರು 28,840 ಕೋಟಿ ಹಣವನ್ನು ಈ ಯೋಜನೆಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಯೋಜನೆಯಿಂದ ಪ್ರಯಾಣಿಕರಿಗೆ ವಿಮಾನಯಾನವು ಕೈಗೆಟುಕುವ ಬೆಲೆಯಿಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆಯನ್ನು ಭಾರತೀಯರಿಗೆ ನೀಡುವುದು ನಮ್ಮ ಗುರಿಯಾಗಿದೆ ಎಂದು ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ, (ಏಜನ್ಸೀಸ್).