Narendra Modi | ಹೊಸ ವರ್ಷಕ್ಕೆ ಪ್ರಧಾನಿ ಮೋದಿ ಶುಭಾಶಯ 
ದೇಶ

ಶಾಂತಿ, ನೆಮ್ಮದಿ ನೆಲೆಸಲಿ... ಹೊಸ ವರ್ಷಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ​ | Narendra Modi

ದೆಹಲಿ: ದೇಶದ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಸಮಾಜದ ಶಾಂತಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾ, 2026 ಪ್ರತಿಯೊಬ್ಬರ ಜೀವನಕ್ಕೂ ಯಶಸ್ಸನ್ನು ತರಲಿ ಎಂದು ಹಾರೈಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ಅದ್ಭುತವಾದ 2026 ರ ಶುಭಾಶಯಗಳು!, ಮುಂಬರುವ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸಗಳು ಯಾವುದೇ ಅಡಚಣೆ ಇಲ್ಲದೆ ನೆರವೇರಲಿ, ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ. ಶಾಂತಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದು, ಈ ಸಂದರ್ಭವನ್ನು ಹೊಸ ಶಕ್ತಿ ಮತ್ತು ಹೊಸ ಆರಂಭದ ಸಮಯ ಎಂದು ಬಣ್ಣಿಸಿದರು. 2026 ರ ವರ್ಷವು ನಮ್ಮ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ಹೊಸ ಶಕ್ತಿಯನ್ನು ತುಂಬಲಿ ಎಂದು ಹಾರೈಸಿದರು.
2026 ರ ಆಗಮನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಶುಭ ಹಾರೈಸಿದ್ದು, ಈ ವರ್ಷ ಪ್ರಗತಿ, ಸಾಮರಸ್ಯ ಮತ್ತು ಅಚಲ ರಾಷ್ಟ್ರೀಯ ಹೆಮ್ಮೆಯ ವರ್ಷವಾಗಿರಲಿ ಎಂದು ಆಶಿಸುತ್ತಾ, ಭಾರತದ ಸಾಮೂಹಿಕ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುತ್ತದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ದೇಶದ ಬದ್ಧತೆಯನ್ನು ನವೀಕರಿಸುತ್ತದೆ ಎಂದರು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದು, 2026 ಎಲ್ಲರಿಗೂ ಶಾಂತಿ, ಪ್ರಗತಿ ಮತ್ತು ಯೋಗಕ್ಷೇಮವನ್ನು ತರಲಿ, ಪ್ರತಿಯೊಬ್ಬರ ಜೀವನಕ್ಕೂ ಸಮೃದ್ಧಿ ಮತ್ತು ಸಂತೋಷವನ್ನು ತರಲಿ, ಪ್ರತಿಯೊಂದು ಮನೆ ಮತ್ತು ಅಂಗಳವು ಸಂಪತ್ತು, ಧಾನ್ಯಗಳು, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ ಎಂದು ಹಾರೈಸಿದ್ದಾರೆ(ಏಜೆನ್ಸೀಸ್​).