ದೇಶ

ದೀಪ್ಕೆ ತರಹದ ಜನ ಬಂದು ತಲೆ ಕೆಡಿಸ್ತಾರೆ!...ದೇಶಿಯ ಪ್ರತಿಭೆಗಳನ್ನು ವಾಪಸ್ ಕರೆತರುವ ಯೋಜನೆಯ ಬಗ್ಗೆ ಗೋಯಲ್​ ಶಾಕಿಂಗ್​ ಹೇಳಿಕೆ | Piyush Goyal

ಬರ್ಲಿನ್‌: ಜರ್ಮನಿ ಪ್ರವಾಸದಲ್ಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ಬರ್ಲಿನ್‌ನಲ್ಲಿ ಭಾರತೀಯ ತಂತ್ರಜ್ಞಾನ ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ಪ್ರಮುಖ ವಿಷಯಗಳ ಕುರಿತು ಮಾತನಾಡಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಪ್ರತಿಭೆಗಳನ್ನು ದೇಶಕ್ಕೆ ಮರಳಿ ಕರೆತರುವ ಕುರಿತು ಗೋಯಲ್ ನೀಡಿದ ಹೇಳಿಕೆಗಳು ಈಗ ಭಾರೀ ಗಮನ ಸೆಳೆದಿವೆ.

ಬರ್ಲಿನ್‌: ಜರ್ಮನಿ ಪ್ರವಾಸದಲ್ಲಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ಬರ್ಲಿನ್‌ನಲ್ಲಿ ಭಾರತೀಯ ತಂತ್ರಜ್ಞಾನ ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ಪ್ರಮುಖ ವಿಷಯಗಳ ಕುರಿತು ಮಾತನಾಡಿದ್ದಾರೆ. ವಿದೇಶಗಳಲ್ಲಿರುವ ಭಾರತೀಯ ಪ್ರತಿಭೆಗಳನ್ನು ದೇಶಕ್ಕೆ ಮರಳಿ ಕರೆತರುವ ಕುರಿತು ಗೋಯಲ್ ನೀಡಿದ ಹೇಳಿಕೆಗಳು ಈಗ ಭಾರೀ ಗಮನ ಸೆಳೆದಿವೆ.

ವಿದೇಶಗಳಲ್ಲಿ ನೆಲೆಸಿರುವ ಪ್ರಭಾವಿ ಭಾರತೀಯ ಪ್ರತಿಭೆಗಳನ್ನು ದೇಶಕ್ಕೆ ವಾಪಸ್ ಕರೆತರುವ ಕುರಿತು ಮಾತನಾಡಿದ ಸಚಿವರು, ಚೀನಾದ ಸರ್ಕಾರದ ಬೆಂಬಲಿತ ಯೋಜನೆಯನ್ನು ಉದಾಹರಣೆಯಾಗಿ ನೀಡಿದರು. ವಿದೇಶಿ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಆಕರ್ಷಿಸುವ ಚೀನಾದ ಯೋಜನೆಯನ್ನು ಶ್ಲಾಘಿಸಿದರೂ, ಅಲ್ಲಿ ನಿಯಮ ದುರುಪಯೋಗವಾದರೆ ವ್ಯಕ್ತಿಗಳು ಕಾಣೆಯಾಗುವ ಭೀತಿ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ:ನಾವು ದೇವರನ್ನಷ್ಟೇ ನಂಬುತ್ತೇವೆ, ಜ್ಯೋತಿಷ್ಯವನ್ನಲ್ಲ: ಜೆಟ್ಟಿ ಕಾಳಗ ರದ್ದಾಗಿದ್ದರ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಮಹತ್ವದ ಹೇಳಿಕೆ!

ಇದೇ ವೇಳೆ, ದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ ನಾಯಕ ಅಭೀಜಿತ್ ದೀಪ್ಕೆ ಹೆಸರು ಪ್ರಸ್ತಾಪಿಸಿದ ಸಚಿವರು, ನಾವು ಹೀಗೆ ಮಾಡಿದರೆ, ಅಭಿಜೀತ್ ದೀಪ್ಕೆಯಂತಹ ಜನರು ಬಂದು ವಿದ್ಯಾರ್ಥಿಗಳಿಗೆ ಹಣಕಾಸು ಒದಗಿಸುವುದು, ವಿದ್ಯಾರ್ಥಿವೇತನ ನೀಡುವುದು ಸರ್ಕಾರದ ಕೆಲಸ ಎಂದು ಹೇಳುತ್ತಾರೆ, ಹಾಗಾದರೆ ನಾವು ಅದನ್ನು ನಾವೇ ಏಕೆ ಮಾಡಬೇಕು. ನಾನು ಸರಿಯೋ ತಪ್ಪೋ? ದುರದೃಷ್ಟವಶಾತ್, ಅಂತಹ ಅಂಶಗಳು ಬಂದು ನಮ್ಮ ತಲೆಯನ್ನು ಕೆಡವುತ್ತವೆ. ಆದ್ದರಿಂದ ನಾವು ನಮ್ಮ ನೀತಿಗಳನ್ನು ನಮ್ಮ ಪ್ರಜಾಪ್ರಭುತ್ವದ ದೃಷ್ಟಿಕೋನದಿಂದ ನಿರ್ಣಯಿಸಬೇಕು ಎಂದು ಹೇಳಿದರು.

ಅಷ್ಟೆ ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳು ಕೇವಲ ಆರ್ಥಿಕ ಲಾಭ ನೋಡದೆ, ತಮ್ಮ ಮಾತೃಭೂಮಿಗೆ ಮರಳಿ ಕೊಡುಗೆ ನೀಡುವಂತೆ ಭಾವನಾತ್ಮಕ ಮನವಿ ಮಾಡಿದರು.

ಯುರೋಪ್‌ನ ಹವಾಮಾನ ನೀತಿಗೆ ತಿರುಗೇಟು

ಬರ್ಲಿನ್ ಗ್ಲೋಬಲ್ ಡೈಲಾಗ್ 2026 ರಲ್ಲಿ ಭಾಗವಹಿಸಿದ ಗೋಯಲ್, ಯುರೋಪ್ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಹವಾಮಾನ ನೀತಿ ಮತ್ತು ಇಂಗಾಲದ ಹೊರಸೂಸುವಿಕೆ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.

ಜಾಗತಿಕವಾಗಿ ಇಂದು ಸೃಷ್ಟಿಯಾಗಿರುವ ಹವಾಮಾನ ಬಿಕ್ಕಟ್ಟಿಗೆ ಯಾರು ಕಾರಣ? ಓಝೋನ್ ಪದರಕ್ಕೆ ಹಾನಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ ಗೋಯಲ್, ಜಗತ್ತಿನ ಶೇ. 17 ರಷ್ಟು ಜನಸಂಖ್ಯೆ ಹೊಂದಿರುವ ಭಾರತದ ಇಂಗಾಲದ ಹೊರಸೂಸುವಿಕೆ ಪಾಲು ಶೇ. 3 ಕ್ಕಿಂತಲೂ ಕಡಿಮೆ ಎಂದರು. ಆದರೆ, ಕೇವಲ ಶೇ. 3-4 ರಷ್ಟು ಜನಸಂಖ್ಯೆ ಹೊಂದಿರುವ ಯುರೋಪ್ ರಾಷ್ಟ್ರಗಳ ಇಂಗಾಲದ ಹೊರಸೂಸುವಿಕೆಯ ಕೊಡುಗೆ ಅತ್ಯಂತ ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯುರೋಪ್ ಜಾರಿಗೆ ತಂದಿರುವ ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಮ್ (CBAM) ಹಾಗೂ ಉಕ್ಕಿನ ಮೇಲಿನ ಶೇ. 50 ರಷ್ಟು ಆಮದು ಸುಂಕದ ನಿರ್ಧಾರವನ್ನು ಸಚಿವರು ಪ್ರಶ್ನಿಸಿದ್ದು, ಈ ರೀತಿಯ ನಿಯಮಗಳಿಂದ ಯುರೋಪ್‌ನಲ್ಲಿ ಜೀವನ ವೆಚ್ಚ ಹೆಚ್ಚಾಗಲಿದ್ದು, ಕೈಗಾರಿಕೆಗಳ ಸ್ಪರ್ಧಾತ್ಮಕತೆ ಕುಸಿಯಲಿದೆ ಮತ್ತು ಅವರು ತಮ್ಮದೇ ಕಾಲಿಗೆ ಗುಂಡು ಹಾರಿಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.

ಅಕ್ಟೋಬರ್ 22 ರಿಂದ 27 ರವರೆಗೆ ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಪಿಯೂಷ್ ಗೋಯಲ್ ಅವರೊಂದಿಗೆ 100 ಕ್ಕೂ ಹೆಚ್ಚು ಭಾರತೀಯ ಉದ್ಯಮಿಗಳು ಹಾಗೂ ಸ್ಟಾರ್ಟ್‌ಅಪ್‌ಗಳ ನಿಯೋಗ ಭಾಗವಹಿಸಿದೆ(ಏಜೆನ್ಸೀಸ್​).