ಮುಂಬೈ: ಮಹಾರಾಷ್ಟ್ರದ ಮುಂಬೈನ ಮುಲುಂಡ್ ಪಶ್ಚಿಮ ಪ್ರದೇಶದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ನ(Metro pillar) ಒಂದು ಭಾಗ ಆಟೋ ಮೇಲೆ ಬಿದ್ದಿದ್ದು, ಪರಿಣಾಮ ಮೂರ್ನಾಲ್ಕು ಜನ ಗಾಯಗೊಂಡಿದ್ದಾರೆ ಎಂದು ಶನಿವಾರ(ಫೆ. 14) ವರದಿಯಾಗಿದೆ.
ಮಧ್ಯಾಹ್ನ 12.20ರ ಸುಮಾರಿಗೆ ಎಲ್‌ಬಿಎಸ್ ರಸ್ತೆಯ ಜಾನ್ಸನ್ & ಜಾನ್ಸನ್ ಕಂಪನಿಯ ಬಳಿ ಘಟನೆ ನಡೆದಿದೆ. ಕೆಲಸ ನಡೆಯುತ್ತಿರುವಾಗ ಪಿಲ್ಲರ್ನ ಒಂದು ಸಿಮೆಂಟ್ ಭಾಗ ರಸ್ತೆ ಬದಿ ಹಾದು ಹೋಗುತ್ತಿದ್ದ ಆಟೋ ಮೇಲೆ ಬಿದ್ದಿದೆ ಎನ್ನಲಾಗಿದೆ.
ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕದಳ, ಪೊಲೀಸ್ ತಂಡ, ಮೆಟ್ರೋ ಸಿಬ್ಬಂದಿ, ವಾರ್ಡ್ ಅಧಿಕಾರಿಗಳು ಹಾಗೂ 108 ಆಂಬ್ಯುಲೆನ್ಸ್ ಸೇವಾ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೂ ಪಿಲ್ಲರ್ನ ಒಂದು ಭಾಗ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಮತ್ತು ಪೊಲೀಸರು ಪ್ರಕರಣ ದಾಖಲಿಸಕೊಂಡು ತನಿಖೆ ಆರಂಭಿಸಿದ್ದಾರೆ (ಏಜೆನ್ಸೀಸ್).