ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣ 
ದೇಶ

ಪಹಲ್ಗಾಮ್ ದಾಳಿ ಪ್ರಕರಣ: ಲಷ್ಕರ್ ಉಗ್ರ ಹಫೀಜ್ ಸಯೀದ್ ಈ ದಾಳಿಯ ಸೂತ್ರದಾರ; ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ ಎನ್​ಐಎ! NIA Submits Chargesheet Against Hafiz Saeed

ಪ್ರಮುಖ ಮುಖ್ಯಾಂಶಗಳು

  • ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣ
  • ಪ್ರಕರಣದ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್ ವಿರುದ್ಧ ಎನ್​ಐಎ ಚಾರ್ಜ್​ಶೀಟ್​ ಸಲ್ಲಿಕೆ
  • ಪಹಲ್ಗಾಮ್ ದಾಳಿಗೆ ಪ್ರತೀಕಾರ ಎಂಬಂತೆ ಆಪರೇಷನ್​ ಸಿಂಧೂರ್​ ಕಾರ್ಯಾಚರಣೆ ನಡೆಸಿದ್ದ ಭಾರತ
ನವದೆಹಲಿ: 2025 ರಲ್ಲಿ ಜಮ್ಮು- ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀತ ತನಿಖಾ ಆಯೋಗ (NIA) ಸೋಮವಾರ (ಜು.6) ಸಲ್ಲಿಸಿರುವ ಪೂರಕ ಆರೋಪಪಟ್ಟಿ (Supplementary Chargesheet) ಯಲ್ಲಿ ಲಷ್ಕರ್​-ಎ-ತೊಯ್ಬಾ ಭಯೋತ್ಪಾದನಾ ಸಂಘಟನೆ ನಾಯಕ ಹಫೀಜ್ ಸಯೀದ್​ (NIA Submits Chargesheet Against Hafiz Saeed) ನನ್ನು ಸೇರಿಸಿದೆ ಎಂದು ವರದಿಯಾಗಿದೆ.
ಈ ಚಾರ್ಜ್​ಶೀಟ್​ಟನ್ನು ಎನ್​ಐಎ ಜಮ್ಮು-ಕಾಶ್ಮೀರದ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆ ಲಷ್ಕರ್​-ಎ-ತೊಯ್ಬಾದ ಹಫೀಜ್ ಸಯೀದ್​ನನ್ನು ಆರೋಪಿ ಎಂದು ದಾಖಲಿಸಿದೆ.

ಹಫೀಜ್​ ಸಯೀದ್​ ಈ ದಾಳಿಯ ಸೂತ್ರದಾರ!

ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದಕ ಘಟನೆ ಜೊತೆ ಹಫೀಜ್​ ಸಯೀದ್​ ನೇರ ಸಂಬಂಧ ಹೊಂದಿದ್ದಾನೆಂದು ನಮೂದಿಸಲಾಗಿದೆ. ಸುಮಾರು 1,597 ಪುಟಗಳ ಚಾರ್ಜ್​ಶೀಟ್​ನಲ್ಲಿ ಹಫೀಜ್​ ಸಯೀದ್​ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ 1967 ರ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಭಾರತದ ವಿರುದ್ಧ ಸಂಚನ್ನು ರೂಪಿಸುವ, ಯೋಜನೆ ಹೆಣೆಯುವ ಹಾಗೂ ಭಾರತದ ಗಡಿ ಹೊರಗಿನಿಂದ ದಾಳಿ ನಡೆಸಿದ ಆರೋಪದ ಹಿನ್ನಲೆಯಲ್ಲಿ ಈ ಮೇಲಿನ ಕಾಯ್ದೆ ಪ್ರಕಾರ ಚಾರ್ಜ್​ಶೀಟ್​ಅನ್ನು ಸಿದ್ಧ ಪಡಿಸಲಾಗಿದೆ.

ಪಹಲ್ಗಾಮ್​​ ದಾಳಿ; ಆಪರೇಷನ್​ ಸಿಂಧೂರ್​!

2025 ರ ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿ ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಭೀಕರ ಇಸ್ಲಾಮಿಕ್ ಭಯೋತ್ಪಾದಕ ದಾಳಿ ನಡೆಯಿತು.
ಆಧುನಿಕ ಎಂ4 ಕಾರ್ಬೈನ್ಸ್ ಮತ್ತು ಎಕೆ-47 ರೈಫಲ್‌ಗಳನ್ನು ಹೊಂದಿದ್ದ ಮೂರರಿಂದ ಐದು ಜನ ಶಸ್ತ್ರಸಜ್ಜಿತ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಭಯೋತ್ಪಾದಕ ದಾಳಿಯಲ್ಲಿ ಸುಮಾರು 26 ಜನ ನಿರಾಯುಧ ನಾಗರಿಕರು ಸಾವನ್ನಪ್ಪಿದರು.
ಮೃತರಾದವರಲ್ಲಿ ಹೆಚ್ಚಿನವರು ಹಿಂದೂ ಪ್ರವಾಸಿಗರಾಗಿದ್ದು, ಇದರಲ್ಲಿ ಹಲವು ನವವಿವಾಹಿತ ದಂಪತಿಗಳೂ ಸೇರಿದ್ದರು. ಉಗ್ರರು ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಗುರುತಿಸಿ, ಅವರ ಹೆಸರು ಮತ್ತು ಧರ್ಮವನ್ನು ಗುಂಡಿಕ್ಕಿ ಕೊಂದಿದ್ದರು.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಯ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು. ಈ ಕೃತ್ಯವು ಭಾರತಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸುದ್ದಿಯಾಯಿತು.
ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಹಾಗೂ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಲ್ಲದೆ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿತು. ಅಷ್ಟೇ ಅಲ್ಲದೆ, ಭಾರತೀಯ ಸೇನೆಯು ಮೇ 20255 ರಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ್’ (Operation Sindoor) ಹೆಸರಿನಲ್ಲಿ ವೈಮಾನಿಕ ಕಾರ್ಯಚರಣೆ ನಡೆಸಿ ಸುಮಾರು 250-300 ಉಗ್ರರನ್ನು ಸದೆಬಡೆಯಿತು, (ಏಜನ್ಸೀಸ್​).