ನವದೆಹಲಿ: ಸಮಾಜವಾದಿ ಪಕ್ಷ ಶನಿವಾರ(ನ. 28) ತನ್ನ ಎಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ 'ವಿಪ್' (whip) ಜಾರಿಗೊಳಿಸಿದೆ. ಮತ್ತು ಸಂಸತ್ತಿನ ಮುಂಬರುವ ವಿಶೇಷ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಮತ್ತು ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ಕ್ಷೇತ್ರ ಮರುವಿಂಗಡಣೆ ಮಸೂದೆಗಳ ವಿರುದ್ಧ ಮತ ಚಲಾಯಿಸಬೇಕು ನಿರ್ದೇಶನ ನೀಡಿದೆ.
ಸಂಸದ ಹಾಗೂ ಪಕ್ಷದ ಮುಖ್ಯ ವಿಪ್ ಧರ್ಮೇಂದ್ರ ಯಾದವ್ ಅವರು, ಈ ವಿಪ್ ಹೊರಡಿಸಿದ್ದು, ನ. 30ರಿಂದ ಡಿ. 3ರವರೆಗಿನ ಕಲಾಪಗಳಲ್ಲಿ ಎಲ್ಲಾ ಎಸ್ಪಿ ಸದಸ್ಯರು ಹಾಜರಿರಬೇಕು ಹಾಗೂ ಮಸೂದೆಗಳು ಮತದಾನಕ್ಕೆ ಬಂದಾಗ ಅವುಗಳನ್ನು ವಿರೋಧಿಸಬೇಕು ಎಂದು ಸೂಚಿಸಿದ್ದಾರೆ.
ಈ ಅಧಿವೇಶನದಲ್ಲಿ ಸರ್ಕಾರವು 'ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026', 'ಕ್ಷೇತ್ರ ವಿಂಗಡಣೆ (ಎರಡನೇ) ಮಸೂದೆ, 2026' ಮತ್ತು 'ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಎರಡನೇ ಮಸೂದೆ, 2026' ಅನ್ನು ಮಂಡಿಸಲಿದೆ. ಸಮಾಜವಾದಿ ಪಕ್ಷದ ಎಲ್ಲಾ ಸದಸ್ಯರು ಅಧಿವೇಶನದ ಸಂಪೂರ್ಣ ಅವಧಿಯಲ್ಲಿ ಸದನದಲ್ಲಿ ಹಾಜರಿರಬೇಕು ಮತ್ತು ಮಸೂದೆಗಳನ್ನು ಮತದಾನಕ್ಕೆ ಇರಿಸಿದಾಗ ಅವುಗಳ ವಿರುದ್ಧ ಮತ ಚಲಾಯಿಸಬೇಕು ಎಂದು ವಿಪ್ನಲ್ಲಿ ಹೇಳಲಾಗಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ-ಶರದ್ಚಂದ್ರ ಪವಾರ್ (NCP-SP) ಸೇರಿದಂತೆ ವಿರೋಧ ಪಕ್ಷಗಳು ತಮ್ಮ ಲೋಕಸಭಾ ಸಂಸದರು ಕಲಾಪದ ಸಮಯದಲ್ಲಿ ಹಾಜರಿರುವಂತೆ ನಿರ್ದೇಶಿಸುವ ಮೂರು ಸಾಲಿನ ವಿಪ್ಗಳನ್ನು ಹೊರಡಿಸಿವೆ.
ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 850 ಕ್ಕೆ ಹೆಚ್ಚಿಸುವ ಉದ್ದೇಶವನ್ನು ಈ ಪ್ರಸ್ತಾವನೆಗಳು ಹೊಂದಿದ್ದು, ಇದರಲ್ಲಿ ರಾಜ್ಯಗಳಿಂದ 815 ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಸೇರಿದ್ದಾರೆ. ಮಸೂದೆಯನ್ನು ಕಾಂಗ್ರೆಸ್ ಮತ್ತು ಎಸ್ಪಿ ಸೇರಿ ಇಂಡಿಯಾ ಕೂಟದ ವಿಪಕ್ಷಗಳು ವಿರೋಧಿಸಿವೆ. ಆದರೆ ಕೆಲ ವಿರೋಧ ಪಕ್ಷಗಳಾದ ಡಿಎಂಕೆ, ವೈಎಸ್ಆರ್ಸಿಪಿ ಮತ್ತು ಎನ್ಸಿಪಿ-ಎಸ್ಪಿ ಪರಿಷ್ಕೃತ ಮಸೂದೆ ತಮ್ಮ ಬೆಂಬಲವನ್ನು ಸೂಚಿಸಿರುವುದರಿಂದ, ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆಯಿದೆ (ಏಜೆನ್ಸೀಸ್).