ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ  
ದೇಶ

ಆಪರೇಷನ್ ಟೈಗರ್ ಬಹುತೇಕ ಸಕ್ಸಸ್​: ಇಂದು ಉದ್ಧವ್ ಠಾಕ್ರೆ ಬಣದ ಆರು ಸಂಸದರು ಶಿಂಧೆ ಬಣ ಸೇರುವ ಸಾಧ್ಯತೆ | Operation Tiger

ಮುಂಬೈ: ಮಹಾರಾಷ್ಟ್ರದಲ್ಲಿ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಟೈಗೆರ್(Operation Tiger) ಬಹುತೇಕ ಯಶಸ್ವಿಯಾಗಿದ್ದು, ಬುಧವಾ(ಜೂ. 17) ಉದ್ಧವ್ ಠಾಕ್ರೆ ಶಿವಸೇನೆಯ ಆರು ಸಂಸದರು ಶಿಂಧೆ ಬಣ ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಠಾಕ್ರೆ ನೇತೃತ್ವದ ಶಿವಸೇನೆಯ ಆರು ಸಂಸದರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದು, ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದ್ದು, ಅವರೆಲ್ಲರೂ ತಡರಾತ್ರಿಯೇ ದೆಹಲಿಯತ್ತ ತೆರಳಿದ್ದಾರೆ. ಪಕ್ಷ ಸಹ ಇಂದು ಸಂಸದೀಯ ಸಮಿತಿ ಸಭೆ ಕರೆದಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಬಣದ ಆರು ಸಂಸದರು ಇಂದು ಮುಂಜಾನೆ ಶ್ರೀಕಾಂತ್ ಶಿಂಧೆ ಅವರ ದೆಹಲಿ ನಿವಾಸದಲ್ಲಿ ಸಭೆ ಸೇರಲಿದ್ದಾರೆ. ಸಂಸದರಾದ ಸಂಜಯ್ ದಿನಾ ಪಾಟೀಲ್, ಸಂಜಯ್ ದೇಶಮುಖ್, ನಾಗೇಶ್ ಪಾಟೀಲ್ ಅಷ್ಟಿಕರ್, ಓಂರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕಚೌರೆ ಮತ್ತು ಸಂಜಯ್ ಜಾಧವ್ ಹೆಸರು ಸೇರುವ ಸಾಧ್ಯತೆ ಇದೆ. ಹೆಚ್ಚುವರಿಯಾಗಿ ರಾಜಭಾವು ವಾಜೆ ಕೂಡ ಆರು ಸಂಸದರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ.
ಸಭೆಯಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿರುವ ಸಾಧ್ಯತೆಯಿದೆ. ಬಳಿಕ ಈ ಎಲ್ಲಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಸ್ಪೀಕರ್​ಗೆ ಸಂಸತ್​ನಲ್ಲಿ ತಮ್ಮನ್ನು ಪ್ರತ್ಯೇಕ ಬಣವಾಗಿ ಗುರುತಿಸುವಂತೆ ಮನವಿ ಮಾಡಲಿದ್ದು, ಬಳಿಕ ತಾವು ಆರು ಸಂಸದರು ಶಿಂಧೆ ಬಣದ ಶಿವಸೇನಾದಲ್ಲಿ ವಿಲೀನವಾಗಲಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಪ್ರಕ್ರಿಯೆ ನಡೆಯುವ ವೇಳೆಯೇ ಠಾಕ್ರೆ ಬಣದ ನಿಷ್ಠಾವಂತ ಸಂಸರದಾದ ಅರವಿಂದ್ ಸಾವಂತ್ ಮತ್ತು ಅನಿಲ್ ದೇಸಾಯಿ ಬುಧವಾರ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ. ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವತ್ ಈಗಾಗಲೇ ರಾಜಧಾನಿಯಲ್ಲಿದ್ದಾರೆ. ಆರು ಸಂಸದರ ನಡೆ ತೀವ್ರ ಕೂತುಹಲ ಕೆರಳಿಸಿದೆ.
ಇನ್ನೂ ಆಪರೇಷನ್ ಟೈಗರ್​ನಲ್ಲಿ ಸಂಸದರನ್ನು ಖರೀದಿಸಲಾಗುತ್ತಿದೆ ಎಂದು ಆರೋಪಿಸಿರುವ ರಾಜ್ಯಸಭಾ ಸಂಜಯ್ ರಾವತ್, ಮಹಾರಾಷ್ಟ್ರದ ಸಂಸದರನ್ನು ಖರೀದಿಸಲು... ಇಂದು ರಾತ್ರಿ, ತಲಾ 15 ಕೋಟಿ ಮುಂಗಡ ನೀಡಲಾಗುತ್ತಿದೆ, ಈ ಮಾಹಿತಿ ಆಘಾತಕಾರಿ ಮತ್ತು ಅಸಹ್ಯಕರವಾಗಿದೆ! ಎಂದು ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ತಮ್ಮ ಸಂಸದರು ಆಪರೇಷನ್​ಗೆ ಬಲಿಯಾಗಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ (ಏಜೆನ್ಸೀಸ್).