Old video shows Siya leaning on Chetan 
ದೇಶ

ಚೇತನ್ ಹೆಗಲಿಗೆ ಒರಗಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿರುವ ಸಿಯಾ: ಕೇತನ್​ ಕೊಂದ ಆರೋಪಿಗಳ ಹಳೇ ವಿಡಿಯೋ ವೈರಲ್..Siya Goyal

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಮ್ಯಾಚ್‌ನಲ್ಲಿ ಪರಿಚಯವಾಗಿ ಪ್ರೇಮಿಗಳಾಗಿದ್ದ ಸಿಯಾ ಗೋಯಲ್ - ಚೇತನ್ ಚೌಧರಿ.
  • ಇಬ್ಬರು ಒಟ್ಟಾಗಿ ಕುಳಿತು ಮ್ಯಾಚ್​ ವೀಕ್ಷಿಸುವ ವಿಡಿಯೋಗಳು ವೈರಲ್
  • ಇಬ್ಬರ ಪ್ರೀತಿ ಸಂಬಂಧದ ಬಗ್ಗೆ ಬಲವಾದ ಸಾಕ್ಷಿ ಪತ್ತೆ ಹಚ್ಚಿದ ಪೊಲೀಸರು
  • ಜನವರಿಯಿಂದೀಚೆಗೆ 2,004 ಬಾರಿ ಕರೆ, ಬರೋಬ್ಬರಿ 238 ಗಂಟೆಗಳ ಕಾಲ ಮಾತನಾಡಿದ್ದ ಜೋಡಿ.
Old video shows Siya leaning on Chetan: ಕೇತನ್​​ ಅಗರ್ವಾಲ್​ ಕೊಲೆ ಕೇಸ್​ನಲ್ಲಿ ಕಸ್ಟಡಿಯಲ್ಲಿರುವ ಆರೋಪಿ ಸಿಯಾ ಗೋಯಲ್​ ಮತ್ತು ಚೇತನ್​ ಚೌಧರಿ ವಿಚಾರಣೆ ತ್ವರಿತ ಗತಿಯಲ್ಲಿ ಸಾಗುತ್ತಿದೆ. ದಿನಕ್ಕೊಂದು ಸಾಕ್ಷಿ, ತಿರುವು ಸಿಗುತ್ತಿದೆ. ಸದ್ಯ ಇಬ್ಬರ ಪ್ರೀತಿ ಸಂಬಂಧ ಹೇಗಿತ್ತು ಎನ್ನುವುದಕ್ಕೆ ಸಾಕ್ಷಿಯೊಂದು ಸಿಕ್ಕಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಇಬ್ಬರು ಒಟ್ಟಾಗಿರುವ ವಿಡಿಯೋ ವೈರಲ್​ ಆಗಿದೆ.
ಆರೋಪಿಗಳಾದ 20 ವರ್ಷದ ಸಿಯಾ ಗೋಯಲ್ ಮತ್ತು 22 ವರ್ಷದ ಚೇತನ್ ಚೌಧರಿ ಅವರ ಪರಿಚಯವಾಗಿದ್ದು, ಕ್ರಿಕೆಟ್​​​​ ಪಂದ್ಯವಾಳಿಯ ವೇಳೆ. ಅಣ್ಣನ ಜೊತೆಗೆ ಗ್ರೌಂಡ್​ಗೆ ತೆರಳುತ್ತಿದ್ದ ಸಿಯಾಗೆ, ಚೇತನ್​ ಜೊತೆ ಸ್ನೇಹ ಬೆಳೆದು, ಬಳಿಕ ಅದು ಪ್ರೇಮಾಂಕುರಕ್ಕೆ ಕಾರಣವಾಗಿತ್ತು. ಇದಕ್ಕೆ ಪೂರಕವಾಗಿರುವ ವಿಡಿಯೋ ಸದ್ಯ ಪೊಲೀಸರಿಗೆ ಸಿಕ್ಕಿದೆ.
ಒಟ್ಟಾಗಿ ಕೂತ ವಿಡಿಯೋ ವೈರಲ್
ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಇವರಿಬ್ಬರೂ ಭಾರತೀಯ ಕ್ರಿಕೆಟ್ ತಂಡದ ನೀಲಿ ಜರ್ಸಿ ಧರಿಸಿ, ಪುಣೆಯ ಪ್ರತಿಷ್ಠಿತ 'ಮಾರ್ಕೆಟ್ ಯಾರ್ಡ್ ಫ್ರೆಂಡ್ಸ್ ಕ್ರಿಕೆಟ್ ಲೀಗ್' ಪಂದ್ಯಾವಳಿಯ ವೇಳೆ ಪಕ್ಕದಲ್ಲಿ ಕುಳಿತು ಚಪ್ಪಾಳೆ ತಟ್ಟುತ್ತಾ ಪಂದ್ಯವನ್ನು ಆನಂದಿಸುತ್ತಿರುವ ಹಳೆಯ ವಿಡಿಯೋವೊಂದು ಈಗ ಲಭ್ಯವಾಗಿದೆ. ಅಷ್ಟೇ ಅಲ್ಲದೆ ಆತನ ಭುಜಕ್ಕೆ ತಲೆ ಆನಿಸಿ, ಆತ್ಮೀಯವಾಗಿರುವುದು ದೃಶ್ಯದಲ್ಲಿ ಇದೆ.
MFCL ಎಂಬುದು ಪುಣೆಯ ಸ್ಥಳೀಯ ವರ್ತಕರು, ಉದ್ಯಮಿಗಳು ಮತ್ತು ಸಮುದಾಯಗಳ ಫ್ರಾಂಚೈಸಿ ಆಧಾರಿತ ಪ್ರಮುಖ ಕ್ರಿಕೆಟ್ ಟೂರ್ನಮೆಂಟ್ ಆಗಿದೆ. ಸಿಯಾಳ ಹಿರಿಯ ಸಹೋದರ ಸಾಹಿಲ್ ಗೋಯಲ್ ಜೊತೆ ಚೇತನ್ ಚೌಧರಿ ಕ್ರಿಕೆಟ್ ಆಡುತ್ತಿದ್ದ. ಕ್ರಿಕೆಟರ್ ಆಗಿದ್ದ ಚೇತನ್‌ನ ಪಂದ್ಯಗಳನ್ನು ನೋಡಲು ಸಾಹಿಲ್ ಜೊತೆ ಸಿಯಾ ಕೂಡ ಮೈದಾನಕ್ಕೆ ನಿಯಮಿತವಾಗಿ ಬರುತ್ತಿದ್ದಳು. ಈ ವೇಳೆ ಇವರಿಬ್ಬರ ಪರಿಚಯವಾಗಿ, ಆ ಪರಿಚಯವೇ ಮುಂದೆ ಪ್ರೀತಿಗೆ ಕಾರಣವಾಗಿತ್ತು.

ಪಾರ್ಟಿಯಲ್ಲಿ ಸಿಯಾ ಎಂಜಾಯ್

ಸಿಯಾ ಗೋಯಲ್ ಪಾರ್ಟಿಯೊಂದರಲ್ಲಿ ಭಾಗವಹಿಸಿರುವ ಹೊಸ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಅವರು ಒಂದು ಕಾರ್ಯಕ್ರಮದಲ್ಲಿ ಕುಡಿಯುತ್ತಾ ಅಣ್ಣ ಸಾಹಿಲ್ ಗೋಯಲ್ ಜೊತೆ ಇರುವ ವಿಡಿಯೋ ವೈರಲ್ ಆಗಿದೆ.

ಸಿಯಾ ಅಣ್ಣ ಹೇಳಿದ್ದೇನು?

ಸಿಯಾಗೆ ಕೇತನ್​ ಇಷ್ಟ ಇಲ್ಲ ಎಂದಿದ್ದರೆ ನಾವು ಮದುವೆ ಬೇಡ ಎಂದು ಖಂಡಿತ ನಿಲ್ಲಿಸುತ್ತಿದ್ದೆವು. ಎಂದು ಸಿಯಾಳ ಹಿರಿಯ ಸಹೋದರ ಸಾಹಿಲ್ ಗೋಯಲ್ ಪೊಲೀಸರ ಮುಂದೆ ಕಣ್ಣೀರಿಡುತ್ತಾ ಹೇಳಿಕೆ ನೀಡಿದ್ದಾನೆ. ತಂಗಿಯ ಈ ಭೀಕರ ಕೃತ್ಯದಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ ಎಂದು ಆತ ತಿಳಿಸಿದ್ದಾನೆ.
"ನಾವು ಸಾಹಿಲ್‌ನನ್ನು ಬೆಳಗ್ಗೆಯೇ ವಿಚಾರಣೆಗೆ ಕರೆಸಿಕೊಂಡಿದ್ದೆವು. ಆತನಿಗೆ ಚೇತನ್ ಚೌಧರಿ ಮೊದಲೇ ಪರಿಚಯವಿದ್ದ ಕಾರಣ, ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಗಂಭೀರ ವಿಷಯಗಳನ್ನು ಆತನ ಸಮ್ಮುಖದಲ್ಲಿ ಕ್ರಾಸ್-ವೆರಿಫೈಮಾಡಿಕೊಳ್ಳಬೇಕಿತ್ತು. ಹೀಗಾಗಿ ಆತನನ್ನು ಸುಮಾರು 10 ಗಂಟೆಗಳ ಕಾಲ ಸತತವಾಗಿ ವಿಚಾರಣೆ ನಡೆಸಿ, ತಡರಾತ್ರಿ ಮನೆಗೆ ಹೋಗಲು ಅನುಮತಿ ನೀಡಲಾಯಿತು ಎಂದು ಲೋನಾವಾಲಾ ಗ್ರಾಮಾಂತರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು, (ಏಜೆನ್ಸೀಸ್).