ಸಾಂದರ್ಭಿಕ ಚಿತ್ರ 
ದೇಶ

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದರೆ ಮೀಸಲಾತಿ ದೊರೆಯಲ್ಲ! ಐತಿಹಾಸಿಕ ತೀರ್ಪು ಪ್ರಕಟಿಸಿದ Supreme Court

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಗೆ ಜಾತಿ ಆಧಾರಿತ ಮೀಸಲಾತಿ ಸೌಲಭ್ಯ ಮುಂದುವರಿಯಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ: ಮತಾಂತರ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಗುರುವಾರ (ಅ.15) ಸುಪ್ರೀಂ ಕೋರ್ಟ್​ ಮಹತ್ವದ ಆದೇಶವೊಂದನ್ನು ಪ್ರಕಟಿಸಿದೆ. ಹಿಂದೂ ಧರ್ಮದಿಂ ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿ ಯಾವುದೇ ಕಾರಣಕ್ಕೆ ತಾನು ಈ ಹಿಂದೆ ಪಡೆಯುತ್ತಿದ್ದ ಜಾತಿ ಆಧಾರಿತ ಮೀಸಲಾತಿಯನ್ನು ಪಡೆಯುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ.

ತಮಿಳುನಾಡು ಸರ್ಕಾರ, ಹಿಂದೂ ಧರ್ಮದಿಂದ, ಇಸ್ಲಾಂಗೆ ಮತಾಂತರಗೊಂಡ ವ್ಯಕ್ತಿಗೆ ಹಿಂದುಳಿದ ವರ್ಗದ ಮೀಸಲಾತಿಯನ್ನು ಮುಂದುವರಿಸಿದ್ದು, ಸರ್ಕಾರದ ಈ ನೀತಿಯನ್ನು ಮದ್ರಾಸ್​ ಹೈಕೋರ್ಟ್​ ರದ್ದು ಪಡಿಸಿತ್ತು. ಈಗ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್​, ಮತಾಂತರವಾದ ವ್ಯಕ್ತಿಯೊಂದಿಗೆ 'ಸಾಮಾಜಿಕ ಹಿಂದುಳಿವಿಕೆಯನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ' ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಇದು ಸಂವಿಧಾನಬದ್ಧವಲ್ಲ!

ಈ ಪ್ರಕರಣದ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಪ್ರಶಾಂತ ಕುಮಾರ್​ ಮಿಶ್ರ ಹಾಗೂ ಶ್ರೀ ಚಂದ್ರಶೇಖರ್​ ಅವರ ನ್ಯಾಯಪೀಠವು, ಒಬ್ಬ ವ್ಯಕ್ತ ಮತಾಂತರವಾದ ಮೇಲೆ ಮೊದಲಿದ್ದ ಧರ್ಮದಿಂದ ಪಡೆಯುತ್ತಿದ್ದ ಯಾವುದೇ ಪ್ರಕಾರದ ಲಾಭವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಸಂವಿಧಾನದ 1950 ರ ಆದೇಶದಂತೆ ಹಿಂದೂ, ಬೌದ್ಧ ಹಾಗೂ ಸಿಖ್​ ಸಮೂದಾಯಕ್ಕೆ ಸೇರಿದವರನ್ನು ಹೊರತುಪಡಿಸಿ, ಉಳಿದವರನ್ನು ಪರಿಶಿಷ್ಟ ಜಾತಿಯವರಿಗೆ ದೊರೆಯುವ ಸೌಲಭ್ಯಗಳನ್ನು ನೀಡುವಂತಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಹಿಂದೂ ಧರ್ಮದಿಂದ ಹಿಂದೂಯೇತರ ಧರ್ಮಕ್ಕೆ ಮತಾಂತರವಾದ ವ್ಯಕ್ತಿ, ಮತಾಂತರಗೊಳ್ಳುವ ಮೊದಲು ಹೊಂದಿದ್ದ ಸಾಮಾಜಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ, ಸಂವಿಧಾನದ 16(4)ನೇ ವಿಧಿಯ ಅಡಿಯಲ್ಲಿ ವಿಶೇಷ ಸವಲತ್ತುಗಳನ್ನು ಪಡೆಯಲು ಹಕ್ಕು ಸಾಧಿಸಲು ಸಾಧ್ಯವಿಲ್ಲ, ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನಲೆ!

ಸಮೀರ್ ಅಹಮದ್ ಎಂಬಾತ 2015 ರಲ್ಲಿ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. 2016 ರಲ್ಲಿ ಗೆಜೆಟ್​ ನೋಟಿಫಿಕೇಶನ್​ ಮೂಲಕ ತಾನು ಇಸ್ಲಾಂಗೆ ಮತಾಂತರವಾಗಿದ್ದಾಗಿ ಪ್ರಕಟಣೆ ನೀಡಿದ್ದ. ನಂತರ ಇಸ್ಲಾಂ ಸಮೂದಾಯದಲ್ಲಿಯೇ ಮದುವೆ ಮಾಡಿಕೊಂಡ ಇತ ತಾನು "ಮುಸ್ಲಿಂ ಲೆಬ್ಬೈ" (Muslim Lebbai) ವರ್ಗಕ್ಕೆ ಸೇರಿದ್ದು, ತನಗೆ ರಾಜ್ಯ ಸರ್ಕಾರ ಮೀಸಲಾತಿ ನೀಡಬೇಕೆಂದು ಕೋರಿದ್ದ.

ಇದನ್ನು ವಿರೋಧಿಸಿದ ಹಿಂದುಳಿದ ಆಯೋಗ ಈ ಸಮೀರ್​ನಿಗೆ ಜಾತಿ ಮೀಸಲಾತಿ ನೀಡಬಾರದೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ, ಇಸ್ಲಾಂನಲ್ಲಿರುವ ಬಡವರಿಗೆ ಮೀಸಲಾತಿ ನೀಡುವ ಹಕ್ಕು ತನಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದ ಕಾರಣ, ಪ್ರಕರಣ ಕೋರ್ಟ್​ ಮೆಟ್ಟಿಲೇರಿತು.

ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಮದ್ರಾಸ್​ ಹೈಕೋರ್ಟ್​, ಒಬ್ಬ ಮುಸಲ್ಮಾನನ್ನು ಹಿಂದುಳಿದ ವರ್ಗ (ಮುಸ್ಲಿಂ) ಎಂಬ ಪ್ರತ್ಯೇಕ ಪ್ರವರ್ಗ ಸೃಷ್ಟಿಸುವಂತಿಲ್ಲ. ಒಮ್ಮೆ ಮತಾಂತವಾದವ ತನ್ನ ಹಿಂದಿನ ಧರ್ಮದಲ್ಲಿ ಪಡೆಯುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ಮತ್ತೆ ಹೊಸ ಧರ್ಮದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಆದೇಶಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್​ ಕೂಡ ಮದ್ರಾಸ್​ ಹೈಕೋರ್ಟ್​ ತೀರ್ಪನ್ನೇ ಎತ್ತಿಹಿಡಿದಿದೆ, (ಏಜೆನ್ಸೀಸ್).