ಬೆಳಿಗ್ಗೆ ಟಾಕೊ ಬೆಲ್​ ಕ್ಯಾಶಿಯರ್​, ರಾತ್ರಿ ಹಿಂದೂಗಳ ಹತ್ಯೆಗೆ ಪ್ಲಾನರ್​! ದೇವಾಲಯ ದಾಳಿಕೋರ Alexandros Paporakis ಹಿನ್ನೆಲೆ ಏನು ಗೊತ್ತಾ?

ಅಮೆರಿಕದ ಚಿಕಾಗೋ ಹಿಂದೂ ದೇವಾಲಯದ ಮೇಲೆ ದಾಳಿಗೆ ಯತ್ನಿಸಿದ 19 ವರ್ಷದ ಟಾಕೊ ಬೆಲ್ ಕ್ಯಾಶಿಯರ್ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಹಿನ್ನೆಲೆ, ಗನ್ ಜಾಮ್ ಆಗಿ ದುರಂತ ತಪ್ಪಿದ ಪೂರ್ಣ ವಿವರ ಇಲ್ಲಿದೆ.
Alexandros Paporakis, accused in the plot to attack a Hindu temple in Chicago
ಚಿಕಾಗೋ ಹಿಂದೂ ದೇವಾಲಯ ದಾಳಿ ಸಂಚಿನ ಆರೋಪಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್
Published on: 

ಚಿಕಾಗೋ: ಅಮೆರಿಕದ ಚಿಕಾಗೋದಲ್ಲಿರುವ ದೇವಸ್ಥಾನದ ಮೇಲೆ ದಾಳಿ ಮಾಡಿ ಅಲ್ಲಿ ಸೇರಿದ್ದ ಹಿಂದೂಗಳನ್ನು ಸಾಮೂಹಿಕ ಹತ್ಯೆ ಮಾಡುವ ಯೋಜನೆ ರೂಪಿಸಿದ್ದ ಆರೋಪದಲ್ಲಿ ಪ್ಯಾಲಟೈನ್ ನಿವಾಸಿ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಈ ಘಟನೆ ವಿಶ್ವದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಎಂದರೆ ತಪ್ಪಾಗದು. ಈ ಘಟನೆಯಿಂದ ಅಮೆರಿಕದಲ್ಲಿರುವ ಹಿಂದೂ ಸಮೂದಾಯ ಹಾಗೂ ಅಲ್ಲಿನ ದೇವಸ್ಥಾನ ಸಿಬ್ಬಂದಿಗಳು ಭಯ-ಭೀತರನ್ನಾಗಿಸಿದೆ.

ಯಾರು ಈ ಅಲೆಕ್ಸಾಂಡ್ರೋಸ್ ಪಪೊರಾಕಿಸ್?

ಪೊಲೀಸರಿಂದ ದೊರೆತಿರುವ ಮಾಹಿತಿ ಪ್ರಕಾರ, ಈ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಒಬ್ಬ 19 ವರ್ಷದ ಯುವಕನಾಗಿದ್ದು, ಅಮೆರಿಕದ ಗ್ರೇಟರ್​ ಚಿಕಾಗೋ ವ್ಯಾಪ್ತಿಯಲ್ಲಿರುವ ಇಲಿನಾಯ್ಸ್‌ನ, ಹಿಂದೂ ದೇವಾಲಯದ ಮೇಲೆ ದಾಳಿ ಸಂಚಿನ ಆರೋಪದಲ್ಲಿ ಇವನನ್ನು ವಶಕ್ಕೆ ಪಡೆಯಲಾಗಿದೆ.

ಇವನು ಟಾಕೊ ಬೆಲ್​ ಎಂಬ ಮಳಿಗೆಯಲ್ಲಿ ಕಳೆದ 7 ತಿಂಗಳಿನಿಂದ ಕ್ಯಾಶಿಯರ್​ನಾಗಿ ಕೆಲಸ ಮಾಡುತ್ತಿದ್ದಾಗಿ ತಿಳಿದುಬಂದಿದೆ. ಇವನಿಗೆ ಕಪ್ಪು ವರ್ಣದವರು ಅದರಲ್ಲೂ ಭಾರತೀಯರ ಮೇಲೆ ಅತಿಯಾದ ದ್ವೇಷ ಭಾವ ಬೆಳೆಸಿಕೊಂಡಿದ್ದನೆಂದು ಹೇಳಲಾಗುತ್ತಿದೆ.

ಇವನು ಈ ದಾಳಿಗೆ ಮುಂದಾಗುವ ಮೊದಲು, ತನ್ನ ಸಹದ್ಯೋಗಿ ಜತೆ, ನಾನು ಹಿಂದೂಗಳನ್ನು ಕೊಲ್ಲಲು ಹೊರಡಲಿದ್ದೇನೆಂದು ಹೇಳಿದ್ದು, ಆದರೆ ಇವನು ತಮಾಷೆ ಮಾಡುತ್ತಿದ್ದನೆಂದು ನಾನು ಭಾವಿಸಿದ್ದಾಗಿ, ಸಹದ್ಯೋಗಿ ನೌಕರ ಹೇಳಿಕೆ ನೀಡಿದ್ದಾನೆ.

ಹಿಂದೂ ಸಮಾಜ ಏನು ಹೇಳುತ್ತಿದೆ?

ಈ ಘಟನೆಯಿಂದ ಅಮೆರಿಕದಲ್ಲಿರುವ ಹಿಂದೂ ಸಮೂದಾಯ ಅಕ್ಷರಶಃ ಬೆಚ್ಚಿಬಿದ್ದಿದೆ. ಅಮೆರಿಕದಲ್ಲಿರುವ ಹಿಂದೂ ಸಮೂದಾಯದವರು ಜಾಗರೂಕರಾಗಬೇಕು ಅಂತಯೇ, ಯಾವುದೇ ರೀತಿಯ ಅನುಮಾನ ಬಂದರೆ, ಸ್ಥಳೀಯ ಆಡಳಿತಕ್ಕೆ ಮಾಹಿತಿ ಸಲ್ಲಿಸಬೇಕು. ಯಾವುದೇ ಸಮೂದಾಯವಾಗಲೀ, ಯಾವುದೇ ದೇಶದಲ್ಲಿ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಬಾರದೆಂದು ಹಿಂದೂ ಅಮೆರಿಕನ್​ ಫೌಂಡೇಶನ್​ ತನ್ನ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಘಟನೆ ಹಿನ್ನಲೆ!

ನವರಾತ್ರಿ ಆರಂಭವಾಗಿರುವ ಹಿನ್ನಲೆ, ಅಮೆರಿಕದಲ್ಲಿರುವ ಹಿಂದೂಗಳು ಸ್ಥಳೀಯ ದೇವಸ್ಥಾನಗಳಲ್ಲಿ ಒಂದಾಗುವುದು ಹಾಗೂ ಅಲ್ಲಿ ಸೇರಿ ತಮ್ಮ ಧಾರ್ಮಿಕ ಆಚರಣೆ ಆಚರಿಸಲು ಮುಂದಾಗಿದ್ದರು. ಈ ಸಮಯವನ್ನು ಗುರುತು ಮಾಡಿಕೊಂಡ ಅಲೆಕ್ಸಾಂಡ್ರೋಸ್ ಪಪೊರಾಕಿಸ್, ಸಾಮೂಹಿಕವಾಗಿ ಹಿಂದೂಗಳನ್ನು ಗುಂಡಿಕ್ಕಿ ಕೊಲ್ಲುವ ಸಂಚನ್ನು ರೂಪಿಸಿದ್ದಾನೆ.

Also Read
ಹಿಂದೂ ದೇವಾಲಯದಲ್ಲಿ ಭಾರತೀಯರ ಸಾಮೂಹಿಕ ಹತ್ಯೆಗೆ ಸಂಚು; ಅಮೆರಿಕದಲ್ಲಿ 19 ವರ್ಷದ ಯುವಕನ ಬಂಧನ..US Teen
Alexandros Paporakis, accused in the plot to attack a Hindu temple in Chicago

ಆದರೆ. ಅಕ್ಟೋಬರ್​ 10 ರಂದು ಈ ಮಾಹಿತಿ ಎಫ್​ಬಿಐ ಪೊಲೀಸರಿಗೆ ದೊರೆತಿದ್ದು, ಅಕ್ಟೋಬರ್​ 11 ರಂದು ಆಗಂತುಕನನ್ನು ವಶಕ್ಕೆ ಪಡೆದಿದ್ದಾರೆ. ಮಾಹಿತಿ ಪ್ರಕಾರ, ಅಕ್ಟೋಬರ್​ 11 ರಂದು ಇವನು ದೇವಸ್ಥಾನದ ಎದುರಿಗೆ ನಿಂತು ತನ್ನ ಗನ್​ನಿಂದ ಗುಂಡನ್ನು ಹಾರಿಸಲು ಯತ್ನಿಸಿದ್ದಾನೆ. ಆದರೆ ಇವನ ಗನ್​ ಜಾಮ್​ ಆದ ಕಾರಣ ಭಾರೀ ದುರಂತ ತಪ್ಪಿದ್ದು, ನಂತರ ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ. ಇವನ ಮನೆಯಲ್ಲಿ ಶೋಧಕಾರ್ಯ ಕೈಗೊಂಡಾಗ, ನೂರಾರು ಸುತ್ತು ಬುಲೆಟ್​ಗಳು, ಮ್ಯಾಗಜೀನ್​ಗಳು ಪತ್ತೆಯಾಗಿದ್ದು, ಅವನ್ನು ಪೊಲೀಸರು ಜಫ್ತಿ ಮಾಡಿದ್ದಾರೆ.

ಇವನ ಮೇಲೆ ಭಯೋತ್ಪಾದನಾ ಬೆದರಿಕೆ ಹಾಗೂ ಪರವಾನಗಿ ರಹಿತ ಶಸ್ತ್ರಾಸ್ತ್ರ ಹೊಂದಿರುವ, ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಅಕ್ಟೋಬರ್​ 30 ರಂದು ಮುಂದಿನ ವಿಚಾರಣೆ ನಡೆಯಲಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net