ಐಸಿಸಿ ಟೂರ್ನಮೆಂಟ್ 
ದೇಶ

ಟಿ20 ವಿಶ್ವಕಪ್​ನ್ನು ಯಾರೂ ನೋಡಲ್ಲ..; ಐಸಿಸಿಗೆ ಖಡಕ್ ಎಚ್ಚರಿಕೆ ದಿಗ್ಗಜ ಸ್ಪಿನ್ನರ್ | Ravichandran Ashwin

ನವದೆಹಲಿ: ಪ್ರತಿವರ್ಷ ನಿರಂತರವಾಗಿ ಐಸಿಸಿ ಟೂರ್ನಮೆಂಟ್​ಗಳನ್ನು ಆಯೋಜಿಸಿದರೆ, ಮುಂಬರುವ 2026 ರ ಟಿ20 ವಿಶ್ವಕಪ್ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತದೆ ಎಂದು ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(Ravichandran Ashwin) ಐಸಿಸಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ಆಶ್ ಕಿ ಬಾತ್​ನಲ್ಲಿ ಮಾತನಾಡಿದ ಅಶ್ವಿನ್, ಐಸಿಸಿ ಪ್ರತಿವರ್ಷ ಜಾಗತಿಕ ಟೂರ್ನಮೆಂಟ್​ನಲ್ಲಿ ವೇಳಾಪಟ್ಟಿ ಮತ್ತು ಹಲವಾರು ಏಕಪಕ್ಷೀಯ ಪಂದ್ಯಗಳನ್ನು ಇರುವುದರಿಂದ ವಿಶ್ವಕಪ್‌ನ ಘನತೆ ದುರ್ಬಲಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ 2026ರ ವಿಶ್ವಕಪ್​ ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಅದರೆ, ಆರಂಭಿಕ ಗುಂಪು ಹಂತಗಳು ಪ್ರೇಕ್ಷಕರ ಗಮನ ಸೆರೆಹಿಡಿಯುವಲ್ಲಿ ವಿಫಲವಾಗುತ್ತವೆ ಎಂದು ಅಶ್ವಿನ್ ಹೇಳಿದ್ದಾರೆ. ಅಲ್ಲದೆ, ಈ ಬಾರಿ ಐಸಿಸಿ ಟಿ20 ವಿಶ್ವಕಪ್ ವೀಕ್ಷಿಸಲು ಯಾರೂ ಹೋಗುತ್ತಿಲ್ಲ. ಭಾರತ vs ಅಮೆರಿಕ, ಭಾರತ vs ನಮೀಬಿಯಾ ಇಂತಗ ಪಂದ್ಯಗಳು ನಿಮ್ಮನ್ನು ವಿಶ್ವಕಪ್‌ನಿಂದ ಅಕ್ಷರಶಃ ದೂರ ಸೆಳೆಯುವ ಪಂದ್ಯಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. 
ಜಾಗತಿಕವಾಗಿ ಕ್ರಿಕೆಟ್​ನಲ್ಲಿ ಶಕ್ತಿಶಾಲಿಯಾಗಿರುವ ಉದಯೋನ್ಮುಖ ತಂಡಗಳ ನಡುವಿನ ಅಂತರವು ಸ್ಪರ್ಧಾತ್ಮಕವಲ್ಲದ ಕ್ರಿಕೆಟ್‌ಗೆ ಕಾರಣವಾಗುತ್ತದೆ. ಇದು ಪಂದ್ಯಾವಳಿಯ ಮಾರ್ಕ್ಯೂ ಭಾವನೆಯನ್ನು ಕಸಿದುಕೊಳ್ಳುತ್ತದೆ ಎಂದು ಅಶ್ವಿನ್​ ಹೇಳಿದ್ದಾರೆ. 
 2021 ರಿಂದ, ಕ್ರಿಕೆಟ್ ಕ್ಯಾಲೆಂಡರ್ ಬಹುತೇಕ ಪ್ರತಿವರ್ಷ ಪ್ರಮುಖ ಐಸಿಸಿ ಈವೆಂಟ್‌ಗಳಿಂದ ತುಂಬಿರುತ್ತದೆ. ಇದರಲ್ಲಿ ಮೂರು ಟಿ20 ವಿಶ್ವಕಪ್‌ಗಳು, ಎರಡು ಏಕದಿನ ವಿಶ್ವಕಪ್‌ಗಳು ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿವೆ.
ನಾವು ಶಾಲೆಗೆ ಹೋಗುವ ಸಂದರ್ಭದಲ್ಲಿ ವಿಶ್ವಕಪ್‌ಗಳು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದವು. ಇದರಿಂದಾಗಿ, ಆಸಕ್ತಿ ಸ್ವಾಭಾವಿಕವಾಗಿಯೇ ಬೆಳೆಯುತ್ತಿತ್ತು. ಅಲ್ಲದೆ, 1996, 1999, ಅಥವಾ 2003 ರಲ್ಲಿ ವಿಶ್ವಕಪ್​ಗಳು ವಿಶೇಷವೆಂದು ಭಾವಿಸಿದ್ದರಿಂದ ನಾವು ಕಾರ್ಡ್‌ಗಳನ್ನು ಸಂಗ್ರಹಿಸಿ ವೇಳಾಪಟ್ಟಿಗಳನ್ನು ಮುದ್ರಿಸುತ್ತಿದ್ದೆವು. ಅದರೆ ಆ ನಿರೀಕ್ಷೆ ಈಗ ಕಾಣೆಯಾಗಿದೆ ಎಂದು ಅಶ್ವಿನ್ ಕಳವಳ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).