ಅಂತರಧರ್ಮೀಯ ವಿವಾಹ ಬೇಡ ಎಂದಿದ್ದ ತಂದೆ ದಾರಾ ಸಿಂಗ್
- ತಬು ಸಹೋದರಿ ಫರಾ ನಾಜ್ಳನ್ನು ಮದುವೆಯಾಗಿದ್ದ ವಿಂದು ದಾರಾ ಸಿಂಗ್
- ಅಂತರಧರ್ಮೀಯ ವಿವಾಹ ಬೇಡ ಎಂದಿದ್ದ ತಂದೆ ದಾರಾ ಸಿಂಗ್
- ಮೊದಲ ಮದುವೆ ಮತ್ತು ವಿಚ್ಛೇದನದ ಕುರಿತು ವಿಂದು ಮುಕ್ತ ಮಾತು
ಮುಂಬೈ: ಬಾಲಿವುಡ್ ನಟ ಹಾಗೂ ಭಾರತ ಕಂಡ ಅತ್ಯಂತ ಶ್ರೇಷ್ಠ ಕುಸ್ತಿಪಟು ದಾರಾ ಸಿಂಗ್ರ ಮಗ ವಿಂದು ದಾರಾ ಸಿಂಗ್ ತಮ್ಮ ಮೊದಲ ಮದುವೆ ಹಾಗೂ ವಿಚ್ಛೇದನದ (Vindu Dara Singh on Interfaith Marriage) ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನೆಲ್ವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಾವು ಮದುವೆಯಾಗ ಬಯಸಿದಾಗ ತಂದೆ ದಾರಾ ಸಿಂಗ್ ನೀಡಿದ್ದ ಎಚ್ಚರಿಕೆ ಬಗ್ಗೆ ವಿವರವಾಗಿ ಹೇಳಿದ್ದಾರೆ.
ಹಿಂದೂ-ಮುಸ್ಲಿಂ ಮದುವೆ ಕಷ್ಟ!
ವಿಂದು ದಾರಾ ಸಿಂಗ್ 1996 ರಲ್ಲಿ ಬಾಲಿವುಡ್ ನಟಿ ತಬು ಸಹೋದರಿ ಫರಾ ನಾಜ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.
ನಾನು ಫರಾನನ್ನು ಮದುವೆಯಾಗುತ್ತೆನೆಂದು ತಂದೆ ಬಳಿ ಹೇಳಿದಾಗ, ನೋಡು ವಿಂದು ನಾನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಲ್ಲರನ್ನು ಸಹೋದರರಂತೆ ನೋಡುವವನು. ಆದರೆ ಹಿಂದೂ ಮತ್ತು ಮುಸ್ಲಿಮರ ನಡುವೆ ವೈವಾಹಿಕ ಜೀವನ ಸರಿಯಾಗಿ ನಡೆಯುವುದಿಲ್ಲ ಎನ್ನುವುದು ನನ್ನ ನಂಬಿಕೆ. ನೀವು ಫರಾನನ್ನು ಮದುವೆ ಆಗುವುದು ಬೇಡ ಎಂದು ಹೇಳಿದ್ದರು.
ಆದರೆ ನಾನು ಹಠಕ್ಕೆ ಬಿದ್ದು ಫರಾನನ್ನು ಮದುವೆಯಾದೆ. ಮೊದಲು ಎಲ್ಲಾ ಚೆನ್ನಾಗಿಯೇ ಇತ್ತು ನಮಗೆ ಒಂದು ಮಗು ಕೂಡ ಆಯಿತು. ಆದರೆ ಫರಾ ತೀರಾ ಧಾರ್ಮಿಕ ವ್ಯಕ್ತಿ ಆಗಿದ್ದಳು. ಇದು ನಮ್ಮ ಸಂಬಂಧಕ್ಕೆ ಅಡ್ಡಿಯಾಯಿತು ನಂತರ ನಾವಿಬ್ಬರು ವಿಚ್ಛೇಚದನ ಪಡೆಯಬೇಕಾಯಿತು ಎಂದು ವಿಂದು ಸಿಂಗ್ ಹೇಳಿದ್ದಾರೆ.
ನನಗೆ ಯಾವುದೇ ಬೇಸರವಿಲ್ಲ!
ನಾನು ನನ್ನ ತಂದೆಯ ಮಾತನ್ನು ಮೀರಿ ಮದುವೆಯಾಗಿದ್ದೆ. ಕೊನೆಗೆ ಅವರು ಹೇಳಿದಂತೆ ನಮ್ಮಲ್ಲಿ ಹೊಂದಾಣಿಕೆ ಆಗಲೇ ಇಲ್ಲ. ಆದರೆ ನನಗೆ ಫರಾನಿಂದ ಪತೇಹ್ ಎಂಬ ಮಗನಿದ್ದಾನೆ. ನಂತರ ನಾನು 2006 ರಲ್ಲಿ ದಿನಾ ಉಮರೋವಾಳನ್ನು ಮದುವೆಯಾದೆ ಎಂದಿದ್ದಾರೆ.
ನಾನಿದನ್ನು ಏಕೆ ನೆನಪಿಸಿಕೊಂಡೆ ಎಂದರೆ, ನಾವು ಯೌವನದಲ್ಲಿದ್ದಾಗ ನಾವು ಮಾಡಿದ್ದೇ ಸರಿ ಎನಿಸುತ್ತದೆ. ಆದರೆ ನಿಮ್ಮ ತಂದೆ-ತಾಯಿ ಹೇಳಿದ ಮಾತುಗಳು ಅವರ ಅನುಭವದ ಸಾರವಾಗಿರುತ್ತದೆ, ಆದ್ದರಿಂದ ಹೆತ್ತವರ ಮಾತನ್ನು ನಿರ್ಲಕ್ಷಿಸಬೇಡಿ ಎಂದು ಈಗೀನ ಯುವ ಪೀಳಿಗೆಯಲ್ಲಿ ಕೇಳಿಕೊಳ್ಳುಗತ್ತೆನೆ ಎಂದಿದ್ದಾರೆ, (ಏಜನ್ಸೀಸ್).