ಅಮಿತ್ ಶಾ 
ದೇಶ

ಅಸ್ಸಾಂ ಬಗ್ಗೆ ನೆಹರು-ಗಾಂಧಿ ಕುಟುಂಬ ಎಂದಿಗೂ ಕಾಳಜಿ ವಹಿಸಲಿಲ್ಲ; ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ | Amit Shah

ಗುವಾಹಟಿ: ಅಸ್ಸಾಂ ಚುನಾವಣೆಗೆ ದಿನಗಣೆಗೆ ಶುರುವಾಗಿರುವ ಸಮಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah), ಅಸ್ಸಾಂ ಬಗ್ಗೆ ನೆಹರು-ಗಾಂಧಿ ಕುಟುಂಬ ಎಂದಿಗೂ ಕಾಳಜಿ ವಹಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಚುನಾವಣೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅವರು, ಚೀನಾ ಆಕ್ರಮಣದ ಸಮಯದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೇಳಿಕೆಯನ್ನು ಉಲ್ಲೇಖಿಸಿ, ಗಾಂಧಿ ಕುಟುಂಬ, ನೆಹರು ಕುಟುಂಬ, ಅವರಿಗೆ ಅಸ್ಸಾಂ ಬಗ್ಗೆ ಎಂದಿಗೂ ಒಳ್ಳೆಯ ಭಾವನೆ ಇರಲಿಲ್ಲ. 1962ರಲ್ಲಿ ಚೀನಾ ದಾಳಿ ಮಾಡಿದಾಗ ಜವಾಹರಲಾಲ್ ನೆಹರು ಅಸ್ಸಾಂಗೆ ಟಾಟಾ-ಬೈ-ಬೈ ಎಂದು ಕಿಡಿಕಾರಿದ್ದಾರೆ.
ಅಸ್ಸಾಂ ಅವರ ತಂದೆ ಆಸ್ತಿಯೇ ಎಂದು ಪ್ರಶ್ನಿಸಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವವರೆಗೂ ಅಸ್ಸಾಂನ ಒಂದು ಇಂಚು ಭೂಮಿಯನ್ನು ಸಹ ಯಾರೂ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ಭಾರತದ ಅಸ್ಸಾಂ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಶಾಂತಿಯನ್ನು ಸ್ಥಾಪಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಅಸ್ಸಾಂನ ಸಹೋದರ, ಸಹೋದರಿಯೇ ಇಲ್ಲಿನ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಭಾರತದ ಶತ್ರು ದೇಶದೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಅದರ ಬಗ್ಗೆ ಅವರು ಏನನ್ನೂ ಹೇಳಲ್ಲ. 60 ವರ್ಷಗಳಲ್ಲಿ ಕಾಂಗ್ರೆಸ್ ಮೂರು ಸೇತುವೆ ನಿರ್ಮಿಸಿತು. ಆದರೆ ಬಿಜೆಪಿ 10 ವರ್ಷಗಳಲ್ಲಿ ಅಸ್ಸಾಂನಲ್ಲಿ ನಾಲ್ಕು ಅತಿದೊಡ್ಡ ಸೇತುವೆಗಳನ್ನು ನಿರ್ಮಿಸಲಾಗಿದೆ. ನಮ್ಮ ನೀತಿ ಅಪ್ರೋಚ್ ಅಸ್ಸಾಂ, ಆಸ್ಪೈರ್ ಅಸ್ಸಾಂ ಹಾಗೂ ಇನ್ಸ್‌ಪೈರ್ ಅಸ್ಸಾಂ ಆಗಿದೆ ಎಂದಿದ್ದಾರೆ.
13 ಒಪ್ಪಂದಗಳ ಮೂಲಕ ನಮ್ಮ ಸರ್ಕಾರ ಅಸ್ಸಾಂನಲ್ಲಿ ಶಾಂತಿ ನೆಲೆಸಲು ಕೆಲಸ ಮಾಡಿದೆ. ನಾವು ಬಟದ್ರಾವ ಥಾನ್ ಅನ್ನು ಸ್ವತಂತ್ರಗೊಳಿಸಿದ್ದೇವೆ. ಕಾಜಿರಂಗದ ಕಾಡುಗಳನ್ನು ಸ್ವತಂತ್ರಗೊಳಿಸಲು ನಾವು ಕೆಲಸ ಮಾಡಿದ್ದೇವೆ. ನಾವು ಚಾರೈಡಿಯೋ ಮೈದಮ್ ಅನ್ನು ವಿಶ್ವ ಪರಂಪರೆಯ ಕೇಂದ್ರವನ್ನಾಗಿ ಮಾಡಿದ್ದೇವೆ. ನಾವು ಅಸ್ಸಾಂನ ಸಂಸ್ಕೃತಿಯನ್ನು ಮುಂದಕ್ಕೆ ಕೊಂಡೊಯ್ಯಲು ಕೆಲಸ ಮಾಡಿದ್ರೆ, ಕಾಂಗ್ರೆಸ್ ನುಸುಳುಕೋರರಿಗೆ ಸಹಾಯ ಮಾಡ್ತಿದೆ ಎಂದು ತಿಳಿಸಿದ್ದಾರೆ.
ಅಸ್ಸಾಂ ವಿಧಾನಸಭೆಯ 126 ಸ್ಥಾನಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಅಸ್ಸಾಂ ಗಣ ಪರಿಷತ್ ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ರೆ, ಕಾಂಗ್ರೆಸ್ ಅಸ್ಸಾಂ ಜಾತಿ ಪರಿಷತ್ (ಎಜೆಪಿ), ರೈಜೋರ್ ದಳ, ಸಿಪಿಐ(ಎಂ), ಸಿಪಿಐ(ಎಂಎಲ್) ಮತ್ತು ಆಲ್ ಪಾರ್ಟಿ ಹಿಲ್ ಲೀಡರ್ಸ್ ಕಾನ್ಫರೆನ್ಸ್ ಸೇರಿದಂತೆ ಆರು ಪಕ್ಷಗಳೊಂದಿಗೆ ಪರಸ್ಪರ ಚುನಾವಣೆಯಲ್ಲಿ ಹೋರಾಟ ಮಾಡ್ತಿವೆ (ಏಜೆನ್ಸೀಸ್).