ಪ್ರಧಾನಿ ಮೋದಿ ಪ್ರಕರಣದ ಮಧ್ಯಸ್ಥಿಕೆವಹಿಸಲಿ : ಖಾನ್ ಸರ್
- ನೀಟ್ ಪರೀಕ್ಷೆ ರದ್ದತಿ
- ಪೇಪರ್ ಸೋರಿಕೆ ಹಿನ್ನಲೆ ಪರೀಕ್ಷೆ ರದ್ದು
- ಪ್ರಧಾನಿ ಮೋದಿ ಪ್ರಕರಣದ ಮಧ್ಯಸ್ಥಿಕೆವಹಿಸಲಿ : ಖಾನ್ ಸರ್
ನವದೆಹಲಿ: ಮೇ. 3 ರಂದು ದೇಶಾದ್ಯಂತ ನಡೆದಿದ್ದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಈ ಪರೀಕ್ಷೆಯನ್ನು ರದ್ದು ಪಡಿಸಿಲಾಗಿದೆ. ಹಾಗೆಯೇ ಈ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಪ್ರಕರಣದ ಜವಾಬ್ದಾರಿಯನ್ನು ನೀಡಲಾಗಿದೆ.
ಎನ್ಟಿಎ ನಂಬಲಾರ್ಹ ಸಂಸ್ಥೆಯಲ್ಲ!
ನೀಟ್ ಯುಜಿ ಪರೀಕ್ಷೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಎನ್ಟಿಎ) ವಿಫಲವಾದ ಹಿನ್ನಲೆ ದೇಶದಾದ್ಯಂತ ಆಕ್ರೋಶ ಕೇಳಿಬರುತ್ತಿದೆ.
ಯೂಟ್ಯೂಬ್ ಕ್ಲಾಸ್ಗಳ ಮೂಲಕ ಖ್ಯಾತರಾಗಿರುವ ಖಾನ್ ಸರ್ (Khan Sir on Prime Minister Modi) ಈ ಘಟನೆಗೆ ಪ್ರತಿಕ್ರಿಯಿಸಿದ್ದು, ಈ ಎನ್ಟಿಎ ನೆವೆರ್ ಟ್ರಸ್ಟೆಬಲ್ ಏಜನ್ಸಿ (ನಂಬಿಕೆಗೆ ಯೋಗ್ಯವಲ್ಲದ ಸಂಸ್ಥೆ) ಎಂದು ಹೇಳಿದ್ದಾರೆ.
ಎನ್ಟಿಎ ಗೆ ಇದೊಂದು ಕೇವಲ ಒಂದು ಪೇಪರ್ ಆಗಿರಬಹುದು, ಆದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದು ಜೀವನ ರೂಪಿಸಿಕೊಳ್ಳವ ದಾರಿಯಾಗಿತ್ತು ಎಂದು ಹೇಳಿದ್ದಾರೆ.
ಪ್ರಧಾನಿಗಳು ಮಧ್ಯಸ್ಥಿಕೆವಹಿಸಲಿ!
ಈ ಪ್ರಕರಣವನ್ನು ಈಗ ಸಿಬಿಐ ಗೆ ನೀಡಿದ್ದಾರೆ, ಈ ಪ್ರಕರಣವನ್ನು ತನಿಖಾ ಸಂಸ್ಥೆ ವೇಗವಾಗಿ ಬೇಧಿಸಬೇಕು ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಈ ಪ್ರಕರಣವನ್ನು ಪ್ರಧಾನಿ ಮೋದಿಯವರು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಮಧ್ಯಸ್ಥಿಕೆವಹಿಸಬೇಕು ಹಾಗೆಯೇ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚನೆಯಾಗಲಿ ಎಂದು ಸಲಹೆ ನೀಡಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಮೇ3 ರಂದು ನಡೆಸಲಾದ ಯುಜಿ ನೀಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇದೀಗ ರದ್ದುಗೊಳಿಸಿದೆ.
ರಾಜಸ್ಥಾನದ ಸೀಕರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದರಿಂದ ಆಘಾತ ಎದುರಾದರೂಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್ಟಿಎ ಈ ನಿರ್ಧಾರವನ್ನು ಕೈಗೊಂಡಿದ್ದು, ಸೋರಿಕೆಯ ಪ್ರಕರಣವನ್ನು ಗಮನಿಸಿದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ, (ಏಜನ್ಸೀಸ್).