Naseemuddin Siddiqui | ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಸಚಿವ ನಸೀಮುದ್ದೀನ್ ಸಿದ್ದಿಕಿ
ಲಖನೌ: ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ನಸೀಮುದ್ದೀನ್ ಸಿದ್ದಿಕಿ(Naseemuddin Siddiqui), ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಬೆಳವಣಿಗೆ ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಕಾದು ನೋಡಬೇಕಿದೆ.
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ನಸೀಮುದ್ದೀನ್ ಸಿದ್ದಿಕಿ
ನಸೀಮುದ್ದೀನ್ ಸಿದ್ದಿಕಿ ಜನವರಿ 24 ರಂದು ಹಠಾತ್ ರಾಜೀನಾಮೆ ನೀಡಿದರು. ಪಕ್ಷದಲ್ಲಿ ತಮಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ, ಅಲ್ಲಿ ಕೇವಲ ನಾಯಕನಾಗಿ ಇರಬೇಕಿದೆಯೇ ಹೊರತು, ಕೆಲಸ ಮಾಡಲು ಅವಕಾಶವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ನಾಲ್ಕು ಬಾರಿ ಸಚಿವ
ಕಾನ್ಶಿರಾಮ್ ಕಾಲದಿಂದಲೂ ಸಿದ್ದಿಕಿ ಬಿಎಸ್ಪಿ ಜೊತೆ ದೀರ್ಘ ಒಡನಾಟ ಹೊಂದಿದ್ದು, ಮತ್ತೆ ಅದೇ ಪಕ್ಷ ಸೇರಬಹುದು ಎಂಬ ಊಹಾಪೋಹವಿತ್ತು. ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ನಾಲ್ಕು ಅವಧಿಗಳಲ್ಲಿಯೂ ಸಿದ್ದಿಕಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017 ರಲ್ಲಿ ಬಿಎಸ್ಪಿಯಿಂದ ಉಚ್ಛಾಟಿತರಾದ ಅವರು ಅದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಿದರು(ಏಜೆನ್ಸೀಸ್).