Artemis II 
ದೇಶ

Artemis-2: ಬಾಹ್ಯಾಕಾಶದಲ್ಲೂ ಕಾಡುತ್ತಾ ಮಲಬದ್ಧತೆ ಸಮಸ್ಯೆ?; ನಾಸಾದ ಗಗನಯಾತ್ರಿಗಳ ಮೆಡಿಕಲ್​ ಕಿಟ್​ನಲ್ಲಿ ಭಾರತದ ಈ ಔಷಧಿ ಸೇರ್ಪಡೆ!

ಪ್ರಮುಖ ಮುಖ್ಯಾಂಶಗಳು

  • ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ 'ಡಲ್ಕೋಫ್ಲೆಕ್ಸ್‌'
  • ಗಗನಯಾತ್ರಿಗಳ ಮಲಬದ್ಧತೆ ನೀಗಿಸುವ ನಿಟ್ಟಿನಲ್ಲಿ ನಾಸಾದಿಂದ ಕ್ರಮ
  • ಕರುಳು ತನ್ನ ಚಲನೆ ನಿಧಾನಗೊಳಿಸುವ ಕಾರಣ ಗಗನಯಾನಿಗಳಲ್ಲಿ ಮಲಬದ್ಧತೆ ಕಾಡುತ್ತದೆ
ನವದೆಹಲಿ; ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರೋದಿಲ್ಲ. ಹೀಗಾಗಿ ಕರುಳು ತನ್ನ ಚಲನೆಯನ್ನು ನಿಧಾನ ಗೊಳಿಸುತ್ತದೆ. ಈ ಕಾರಣದಿಂದ ಗಗನಯಾನಿಗಳಿಗೆ ಮಲಬದ್ಧತೆ ಸಮಸ್ಯೆ ಕಾಡೋದು ಸಹಜ. ಇಂತಹ ಸಮಸ್ಯೆಗೆ ಬ್ರೇಕ್​ ಹಾಕುವ ನಿಟ್ಟಿನಲ್ಲಿ  ನಾಸಾ ಭಾರತದ  'ಡಲ್ಕೋಲಾಕ್ಸ್' ಔಷಧಿಯನ್ನು (Dulcoflex NASA)
 ಗಗನಯಾತ್ರಿಗಳ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ  ಸೇರಿಸಿದೆ.
ಹೌದು, ನಾಸಾದ ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶ ಯಾನ ಇದೀಗ ಅಂತಿಮ ಹಂತದಲ್ಲಿದೆ. ಈ 10 ದಿನಗಳ ರೋಚಕ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ ಈ ಔಷಧಿಯನ್ನು 'ಡಲ್ಕೋಫ್ಲೆಕ್ಸ್' ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಬಾಹ್ಯಾಕಾಶದಲ್ಲಿ ಮಲಬದ್ಧತೆ ಸಮಸ್ಯೆ ಕಾಡುವುದೇಕೆ?

ಬಾಹ್ಯಾಕಾಶ ಪ್ರಯಾಣದಲ್ಲಿದ್ದರೂ ಸಹ ಮನುಷ್ಯನ ಹೊಟ್ಟೆ ಮತ್ತು ಜೀರ್ಣಕ್ರಿಯೆ ಭೂಮಿಯ ನಿಯಮಗಳನ್ನೇ ಪಾಲಿಸುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರಿಂದಾಗಿ ಕರುಳಿನ ಚಲನೆ ತುಂಬಾ ನಿಧಾನವಾಗುತ್ತದೆ. ಜೊತೆಗೆ ಗಗನಯಾತ್ರಿಗಳಿಗೆ ಅಲ್ಲಿ ಓಡಾಡಲು ಜಾಗ ಕಡಿಮೆ. ಹೀಗಾಗಿ ಅವರು ವಿಶೇಷ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿಯೇ ನಾಸಾ ಈ ನಂಬಿಕಾರ್ಹ ಔಷಧಿಯನ್ನು ಜೊತೆಗೆ ಕಳುಹಿಸಿದೆ.
ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ನಾಸಾದ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿರುವುದು ಭಾರತದ ಏಕೈಕ ಬ್ರ್ಯಾಂಡ್ 'ಡಲ್ಕೋಲಾಕ್ಸ್' (ಭಾರತದಲ್ಲಿ ಡಲ್ಕೋಫ್ಲೆಕ್ಸ್). ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಹಲವು ದಶಕಗಳಿಂದ ಗಗನಯಾತ್ರಿಗಳು ಇದನ್ನು ಬಳಸುತ್ತಿದ್ದಾರೆ.
ಇದರಲ್ಲಿರುವ 'ಬಿಸಾಕೋಡಿಲ್' ಎಂಬ ಅಂಶವು ಕರುಳಿನ ಸಹಜ ಚಲನೆಯನ್ನು ಉತ್ತೇಜಿಸಿ, ಕೇವಲ 6 ಗಂಟೆಗಳಲ್ಲಿ ನಿರಾಳತೆ ನೀಡುತ್ತದೆ. ಇದು ಚಟವಾಗುವ ಔಷಧಿ ಅಲ್ಲದೇ ಇರುವುದರಿಂದ ಇದು ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.

ಭಾರತದಲ್ಲಿಯೂ ಲಭ್ಯ 'ಡಲ್ಕೋಫ್ಲೆಕ್ಸ್'

ಭಾರತದಲ್ಲಿ 2017ರಲ್ಲಿ 'ಡಲ್ಕೋಲಾಕ್ಸ್' ಹೆಸರನ್ನು 'ಡಲ್ಕೋಫ್ಲೆಕ್ಸ್' ಎಂದು ಬದಲಾಯಿಸಲಾಯಿತು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಇದು ವಿವಿಧ ರೂಪಗಳಲ್ಲಿ ಲಭ್ಯವಿದೆ: 5 mg ಮಾತ್ರೆ: ರಾತ್ರಿ ಸೇವಿಸಿದರೆ 6-8 ಗಂಟೆಗಳಲ್ಲಿ ಅಂದರೆ ಬೆಳಗಾಗುವಷ್ಟರಲ್ಲಿ ಸುಗಮ ಪರಿಹಾರ ನೀಡುತ್ತದೆ.  5 mg ಸಪೊಸಿಟರಿ: 0 ದಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ಶೀಘ್ರ ಪರಿಹಾರ ನೀಡುತ್ತದೆ. 10 mg ಸಪೊಸಿಟರಿ : 10 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯಸ್ಕರಿಗೆ ತಕ್ಷಣದ ಪರಿಹಾರ ನೀಡಲು ಇದು ಉಪಯುಕ್ತವಾಗಿದೆ, (ಏಜೆನ್ಸೀಸ್).