ದೇಶ

ತಿರಂಗಾ ಯಾತ್ರೆಯ ಹೆಸರಿನಲ್ಲಿ ನ್ಯಾಯಾಂಗಕ್ಕೆ ಬೆದರಿಕೆ: ದೇಶದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂದೆ ಆ ವಿದೇಶಿ ವ್ಯಕ್ತಿಯ ಕೈವಾಡವಿದೆ ಎಂದ ಬ್ರಿಜ್ ಭೂಷಣ್! | Lehra Do Tiranga Campaign

ನವದೆಹಲಿ: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಲೆಹರಾ ದೋ ತಿರಂಗಾ ಪ್ರತಿಭಟನೆಯು ಉದ್ಯಮಿ ಎಲಾನ್ ಮಸ್ಕ್ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಲೆಹರಾ ದೋ ತಿರಂಗಾ ಪ್ರತಿಭಟನೆಯು ಉದ್ಯಮಿ ಎಲಾನ್ ಮಸ್ಕ್ ಅವರ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಉನ್ನಾವೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್ ಸಿಂಗ್, ಇದು ನಮ್ಮ ರಾಷ್ಟ್ರದ ವಿರುದ್ಧ ನಡೆಯುತ್ತಿರುವ ಒಂದು ದೊಡ್ಡ ಪಿತೂರಿಯಾಗಿದೆ ಎಂದು ಗುಡುಗಿದ್ದು, ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರುವ ಮತ್ತು ದೇಶವನ್ನು ಬೆದರಿಸುವ ದುರುದ್ದೇಶದಿಂದ ಈ ಸಂಘಟಿತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಮೊದಲು ನ್ಯಾಯಾಂಗವನ್ನು ಟೀಕಿಸೋದು, ಆಮೇಲೆ ನಮ್ಮ ಬಳಿಗೆ ಬರೋದು!...ನಿಖಿಲ್ ವಾಗ್ಲೆ ಮತ್ತು ರಾವುತ್‌ಗೆ ಸುಪ್ರೀಂ ನೋಟಿಸ್! | Contempt Of Court

ದೇಶದ ವಿರುದ್ಧದ ದೊಡ್ಡ ಪಿತೂರಿ!

ಭಾರತದಲ್ಲಿ ತಮ್ಮದೇ ಆದ ನಿಯಮಗಳಡಿಯಲ್ಲಿ ವ್ಯವಹಾರ ನಡೆಸಲು ಬಯಸುವ ವಿದೇಶಿ ಶಕ್ತಿಗಳು ಮತ್ತು ಹಿತಾಸಕ್ತಿಗಳೇ ಈ ಚಳುವಳಿಗೆ ಹಣಕಾಸು ಹಾಗೂ ಇತರೆ ಬೆಂಬಲ ನೀಡುತ್ತಿವೆ ಎಂದು ಸಿಂಗ್​ ದೂರಿದ್ದಾರೆ. ನೇರವಾಗಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ವ್ಯವಹಾರವನ್ನು ಉಲ್ಲೇಖಿಸಿರುವ ಅವರು, ಈ ಇಡೀ ಚಳುವಳಿಯು ಎಲಾನ್ ಮಸ್ಕ್ ಅವರ ಸೂಚನೆಯ ಮೇರೆಗೆ ನಡೆಯುತ್ತಿದೆ. ಇದು ನಮ್ಮ ರಾಷ್ಟ್ರದ ವಿರುದ್ಧದ ಬೃಹತ್ ಪಿತೂರಿಯಾಗಿದೆ ಎಂದರು.

ಮುಂದುವರೆದು ಮಾತನಾಡಿದ ಅವರು, ನಮ್ಮ ದೇಶವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಹೋಲಿಸಲಾಗುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಅನ್ನು ಬೆದರಿಸುವ ದುರುದ್ದೇಶದಿಂದಲೇ ಈ ರೀತಿಯ ಮೆರವಣಿಗೆಯನ್ನು ಆಯೋಜಿಸಲಾಗಿದೆ, ನಮ್ಮ ದೇಶದಲ್ಲಿ ವ್ಯವಹಾರ ಮಾಡಲು ಬಯಸುವ ಈ ವಿದೇಶಿಗರೇ ಈ ಚಳುವಳಿಗೆ ಇಂಬು ನೀಡುತ್ತಿದ್ದಾರೆ ಎಂದು ಬ್ರಿಜ್ ಭೂಷಣ್ ಸಿಂಗ್ ಆರೋಪಿಸಿದ್ದಾರೆ.

ದೆಹಲಿ ಮತ್ತು ಮುಂಬೈ ಪ್ರತಿಭಟನೆಗಳು!

ಕಾಕ್ರೋಚ್ ಜನತಾ ಪಾರ್ಟಿ ದೇಶದ ವಿವಿಧ ನಗರಗಳಲ್ಲಿ ಲೆಹರಾ ದೋ ತಿರಂಗಾ ಅಭಿಯಾನದಡಿ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಿರುವ ಬೆನ್ನಲ್ಲೇ ಬ್ರಿಜ್ ಭೂಷಣ್ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಶುಕ್ರವಾರ ಸಂಜೆ 5 ಗಂಟೆಗೆ ದೆಹಲಿಯ ಕಾನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ತಿರಂಗಾ ಮೆರವಣಿಗೆ ನಡೆಸುವುದಾಗಿ ಸಿಜೆಪಿ ಘೋಷಿಸಿತ್ತು. ಇದರೊಂದಿಗೆ ಮುಂಬೈನ ಆಜಾದ್ ಮೈದಾನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಧರಣಿ ನಡೆಸಲು ಆ ಪಕ್ಷದ ಘಟಕಕ್ಕೆ ಪೊಲೀಸರ ಅನುಮತಿ ಕೂಡ ಲಭಿಸಿತ್ತು.

ದೆಹಲಿ ಅಷ್ಟೆ ಅಲ್ಲದೆ, ದೇಶದ ಇತರೆ ಪ್ರಮುಖ ನಗರಗಳಲ್ಲೂ ಇದೇ ರೀತಿಯ ಧ್ವಜದ ಮೆರವಣಿಗೆಗಳನ್ನು ನಡೆಸಲು ಆ ಪಕ್ಷ ಕರೆ ನೀಡಿತ್ತು. ರಾಷ್ಟ್ರಧ್ವಜವನ್ನು ಹಾರಿಸುವುದು ಪ್ರತಿಯೊಬ್ಬ ಭಾರತೀಯನ ಪ್ರಜಾಸತ್ತಾತ್ಮಕ ಹಕ್ಕು ಎಂದಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ದೆಹಲಿ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದರು.

ನಿನ್ನೆ ದೆಹಲಿಯ ಜಂತರ್ ಮಂತರ್ ತಲುಪಿದ್ದ ಸಿಜೆಪಿ ಸಹ-ಸಂಚಾಲಕರಾದ ಅಶುತೋಶ್ ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಈ ಆಂದೋಲನವು ತೀವ್ರಗೊಂಡಿದೆ. ಬಂಧಿತ ಇಬ್ಬರು ನಾಯಕರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ನಾಯಕರ ಬಂಧನದ ಬೆನ್ನಲ್ಲೇ ಸಿಜೆಪಿ ದೇಶಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸಲು ಮುಂದಾಗಿದ್ದು, ಈ ವಿವಾದವು ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ(ಏಜೆನ್ಸೀಸ್​).