ಈ ಮಸೂದೆ ಜಾರಿಯಾದರೆ ಪ್ರಜಾಪ್ರಭುತ್ವದ ಅಂತ್ಯ ಎಂದ ಪ್ರಿಯಾಂಕಾ ಗಾಂಧಿ
- ಕೇಂದ್ರ ಸರ್ಕಾರದಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ
- ಈ ಮಸೂದೆ ಜಾರಿಯಾದರೆ ಪ್ರಜಾಪ್ರಭುತ್ವದ ಅಂತ್ಯ ಎಂದ ಪ್ರಿಯಾಂಕಾ ಗಾಂಧಿ
- ಇದರಿಂದ ಓಬಿಸಿ ಮಹಿಳೆಯರ ಹಕ್ಕು ಚ್ಯುತಿಯಾಗುತ್ತದೆ ಎಂದ ಕಾಂಗ್ರೆಸ್ ಸಂಸದೆ
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮತ್ತು ಡಲೀಮಿಟೇಶನ್ ಮಸೂದೆಯ ಕುರಿತು ಚರ್ಚೆ ಆರಂಭಿಸಿದ್ದು, ಈ ಮಸೂದೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi on Women Reservation Bill) ವಿರೋಧಿಸಿದ್ದಾರೆ.
ಈ ಮಸೂದೆ ಜಾರಿಯಾದರೆ ಪ್ರಜಾಪ್ರಭಯತ್ವದ ಕೊಲೆ
ಇಂದು (ಗುರುವಾರ,ಏ.16) ಸಂಸತ್ತಿನಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷ, ಮಹಿಳಾ ಮೀಸಲಾತಿಯ ಪರವಾಗಿ ನಿಲ್ಲುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಈಗ ಮಂಡಿಸಲಾಗಿರುವಂತೆ ಪ್ರಸ್ತುತ ಮಸೂದೆ ಅಂಗೀಕಾರವಾದರೆ ಪ್ರಜಾಪ್ರಭುತ್ವಕ್ಕೆ ಅಂತ್ಯ ಹಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ಗಾಂಧಿ, ವಾಸ್ತವದಲ್ಲಿ ಈ ಶಾಸನವು ಮಹಿಳೆಯರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಹೇಳಿದರು.
ಓಬಿಸಿಗಳ ಹಕ್ಕನ್ನು ಕಸಿದುಕೊಳ್ಳುತ್ತಿದ್ದಿರಿ!
ಕಾಂಗ್ರೆಸ್ ಮಹಿಳಾ ಮೀಸಲಾತಿಯ ಪರವಾಗಿ ನಿಲ್ಲುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ವಾಸ್ತವವೆಂದರೆ ಇದು ಮಹಿಳಾ ಮಸೂದೆಯ ಬಗ್ಗೆ ಅಲ್ಲ, ಎಂದು ಗಾಂಧಿ ಸಂಸತ್ತಿನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಹೇಳಿದರು.
ಈ ಮಸೂದೆಗಳನ್ನು ಪರಿಚಯಿಸುವ ಮೂಲಕ ಕೇಂದ್ರವು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆ ಎಂದು ಅವರು ಆರೋಪಿಸಿದರು.
ಜಾತಿ ಜನಗಣತಿಯನ್ನು ನಡೆಸದೆ ಮತ್ತು 2011 ರ ಜನಗಣತಿಯ ಅಂಕಿಅಂಶಗಳಿಗೆ ಅನುಸಾರ ಸರ್ಕಾರವು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತದೆ. ಈ ಮಸೂದೆ ಅಂಗೀಕಾರವಾದರೆ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿದರು,(ಏಜನ್ಸೀಸ್).