Automatic Door-Closing Train 
ದೇಶ

ಮುಂಬೈಗೆ ಬರ್ತಿದೆ ಭಾರತದ ಮೊದಲ ಹೊಸ Automatic Door-Closing ನಾನ್​ ಎಸಿ ಟ್ರೈನ್​; ಏನಿದರ ವಿಶೇಷತೆ?

ಪ್ರಮುಖ ಮುಖ್ಯಾಂಶಗಳು

  • ಮುಂಬೈನಲ್ಲಿ ಆಟೋ ಮೆಟಿಕ್​ ಡೋರ್​ ಕ್ಲೋಸಿಂಗ್​​ ಸೌಲಭ್ಯ ಹೊಂದಿರುವ ಟ್ರೈನ್​ ಸೌಲಭ್ಯ
  • ಪ್ರಯಾಣಿಕರ ಸುರಕ್ಷತೆಗಾಗಿ ನೂತನ ಪ್ರಯೋಗಕ್ಕೆ ಭಾರತ ರೈಲ್ವೆ ಇಲಾಖೆ ಮುಂದು
  • ಎಸಿ ಟ್ರೈನ್​ ಅಲ್ಲದ ಕಾರಣ ಟಿಕೆಟ್​ ದರದಲ್ಲಿ ಭಾರೀ ಏರಿಕೆ ಇರೋದಿಲ್ಲ ಎಂದು ಸ್ಪಷ್ಟನೆ
Automatic Door-Closing Train: ಆರ್ಥಿಕ ನಗರಿ ಮುಂಬೈ. ದೇಶದ ಜಿಡಿಪಿ ಶೇ.6ರಷ್ಟು ಕೊಡುಗೆ ನೀಡುತ್ತದೆ. ಇಲ್ಲಿರುವ ಜನರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನವೂ ರೋಬೋಗಳಂತೆ ಶ್ರಮಿಸಬೇಕು. ನಿತ್ಯ ಊಟ, ತುಂಬಿ ತುಳುಕುವ ಟ್ರೈನ್​ನಲ್ಲಿ ಪ್ರಯಾಣ, ಕ್ಕಿಕ್ಕಿರಿದ ಟ್ರಾಫಿಕ್​​​​ ಜನರ ಆಯಸ್ಸನ್ನೇ ಕಡಿಮೆ ಮಾಡುತ್ತದೆ. 2025ರಲ್ಲಿ ಮುಂಬೈನ ಬಾಂದ್ರಾ ರೈಲಿನಲ್ಲಿ ಅಫಘಾತವೊಂದು ನಡೆದಿತ್ತು. ಜನದಟ್ಟಣೆಯಿಂದಾಗಿ ರೈಲಿನ ಡೋರ್​​ನಿಂದ ಸಾಕಷ್ಟು ಜನ ಹಳಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು.
ಈ ಘಟನೆಯ ನಂತರ ಹಲವರು ಸೇಫ್​ ಡೋರ್​ ಹಾಗೂ ಹೆಚ್ಚುವರಿ ರೈಲಿಗಾಗಿ ಬೇಡಿಕೆಯಿಟ್ಟಿದ್ದರು. ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಸರ್ಕಾರ, ಭಾರತದಲ್ಲೇ ಮೊದಲ ಬಾರಿಗೆ ಹವಾನಿಯಂತ್ರಣ ವ್ಯವಸ್ಥೆಯಿಲ್ಲದ (AC) ಆಟೋಮೆಟಿಕ್​ ಡೋರ್​ ಲಾಕ್​ ಪರಿಚಯಿಸಲು ಮುಂದಾಗಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಲ್ಲಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಮುಂಬೈ ಉಪನಗರ ಹಳಿಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಗಾಗುವ ನಿರೀಕ್ಷೆಯಿದೆ.
ರೈಲಿನ ವಿಶೇಷತೆ ಏನು?
ಈ ರೈಲು ಆಟೋಮೆಟಿಕ್​​ ಕ್ಲೋಸಿಂಗ್​ ಡೋರ್ ವ್ಯವಸ್ಥೆಯನ್ನು ಹೊಂದಿರುವಂತೆ ವಿನ್ಯಾಸ ಮಾಡಲಾಗಿದೆ. ಇದು ಈ ಹಿಂದೆ ದುಬಾರಿ ಹವಾನಿಯಂತ್ರಿತ ಸ್ಥಳೀಯ ರೈಲುಗಳಿಗೆ ಮಾತ್ರ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗುತ್ತಿತ್ತು. ಆದರೆ, ಪ್ರಯಾಣಿಕರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾಮಾನ್ಯ ಜನರು ಸಂಚರಿಸುವ ರೈಲಿನಲ್ಲಿಯೂ ಈ ವ್ಯವಸ್ಥೆ ಇರುತ್ತದೆ ಎನ್ನಲಾಗಿದೆ.
ಇದು ಎಸಿ ಇರುವ ರೈಲು ಅಲ್ಲದ ಕಾರಣ. ಎಲ್ಲ ಬಾಗಿಲುಗಳು ಆಟೋಮೆಟಿಕ್​ ಕ್ಲೋಸ್ ಆದ ಬಳಿಕ ಒಳಗಿರುವ ಜನರಿಗೆ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗದಂತೆ ತಡಯಲು (Forced Ventilation System) ಗಾಳಿ ಸಂಚಲನ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಹೊರಗಿರುವ ತಾಜಾ ಗಾಳಿಯನ್ನು ಬೋಗಿಯೊಳಗೆ ತಳ್ಳುತ್ತದೆ ಎನ್ನಲಾಗಿದೆ.
ಸುಸ್ಸಜ್ಜಿತ ಆಸನಗಳು, ಎಲ್​ಇಡಿ ದೀಪ, ಜಿಪಿಎಸ್​ ಮುಂಬರುವ ನಿಲ್ದಾಣಗಳನ್ನು ಪ್ರದರ್ಶಿಸುವ ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳು ಸೇರಿವೆ. ಈ ರೈಲಿನಲ್ಲಿ ಟಾಕ್​ ಬ್ಯಾಕ್​ ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಗಾರ್ಡ್ ಅಥವಾ ಮೋಟಾರ್‌ಮ್ಯಾನ್‌ನೊಂದಿಗೆ ಮಾತನಾಡಬಹುದಾಗಿದೆ.

ಟಿಕೆಟ್​ ದರವೆಷ್ಟು?

ಪ್ರಯಾಣಿಕರ ಸುರಕ್ಷತೆಗೆ ಆಟೋಮೆಟೆಡ್​ ರೈಲು ನಿರ್ಮಾಣ ಮಾಡಲಾಗುತ್ತಿದೆ ಅಷ್ಟೆ. ಇದು ಎಸಿ ರೈಲು ಆಗಿರೋದಿಲ್ಲಲ. ಹೀಗಾಗಿ ಸಾಮಾನ್ಯ ಲೋಕಲ್ ರೈಲಿನ ದರದಲ್ಲೇ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ, (ಏಜೆನ್ಸೀಸ್​).