ಇಲ್ಲಿ ದುಃಖ ಮಾರಾಟಕ್ಕಿದೆ; 1000 ರೂ. ಕೊಡಿ ಮನಸ್ಸಿನ ನೋವು ಹಂಚಿಕೊಳ್ಳಿ; ಮುಂಬೈ ಬೀಚ್​ನಲ್ಲಿ ವೈರಲ್​ ಆದ ವ್ಯಕ್ತಿ... Mumbai Man 
ದೇಶ

ಇಲ್ಲಿ ದುಃಖ ಮಾರಾಟಕ್ಕಿದೆ; 1000 ರೂ. ಕೊಡಿ ಮನಸ್ಸಿನ ನೋವು ಹಂಚಿಕೊಳ್ಳಿ; ಮುಂಬೈ ಬೀಚ್​ನಲ್ಲಿ ವೈರಲ್​ ಆದ ವ್ಯಕ್ತಿ... Mumbai Man

ಪ್ರಮುಖ ಮುಖ್ಯಾಂಶಗಳು

  • ಬಿಜಿ ನಗರಿ ಮುಂಬೈನಲ್ಲಿ ಹೊಸ ಸ್ಟಾರ್ಟ್​​ಅಪ್ ಸದ್ದು
  • ದುಃಖ ಕೇಳಿಸಿಕೊಂಡು ಅಳೋದಕ್ಕೆ ಹಣ ಪಡೆದುಕೊಳ್ಳುವ ವ್ಯಕ್ತಿ
  • ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಪೋಸ್ಟ್​ ವೈರಲ್
  • ಮುಂಬೈ ಬೀಚ್​ನಲ್ಲೇ ಕೌನ್ಸಲಿಂಗ್​ ತೆರೆದ ಪೃಥ್ವಿ
Mumbai Man : ಮನುಷ್ಯ ಸಂಘಜೀವಿ. ಆತ ಎಂದಿಗೂ ಒಂಟಿಯಾಗಿ ಬದುಕೇ ಇಲ್ಲ. ಅಕಸ್ಮಾತ್  ಯಾರೊಂದಿಗೂ ಮಾತೆ ಹಂಚಿಕೊಂಡಿಲ್ಲ ಎಂದರೆ, ಮನವು ಸ್ಥಿಮಿತದಲ್ಲಿ ಇರೋದಿಲ್ಲ. ದುಃಖ, ಸುಖ ಏನೇ ಇರಲಿ ಒಂದು ಜೀವ ಜೊತೆಗಿರಬೇಕು ಎಂದು ಹಲವರು ಸದಾ ಬಯಸುತ್ತಾರೆ. ಆ ಬಯಕೆಗಳ ಹೆಸರೇ ಸ್ನೇಹ, ಪ್ರೀತಿ, ಲಿವಿನ್​ ಸಂಬಂಧಗಳು. ಮುಂಬೈನಲ್ಲೊಬ್ಬ ವ್ಯಕ್ತಿ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾನೆ.  

ಪೇಟಿಎಂ ಸಂಸ್ಥಪಾಕ ಶಾಕ್

ಹೌದು, ಮುಂಬೈ ಬೀಚ್​ನಲ್ಲಿ ಪೃಥ್ವಿ ರಾಜ್​ ಬೊಹ್ರಾ ದುಃಖದಲ್ಲಿರುವ ಜನರ ಮಾತು ಕೇಳಿಸಿಕೊಳ್ಳುವ ಮೂಲಕ ತಾನು ಕೊಟ್ಟ ಸೇವೆಗೆ ತಕ್ಕದಾಗಿ 200 ರೂಪಾಯಿಂದ 1000 ರೂ.ಗಳ ವರೆಗೆ ಶುಲ್ಕ ಪಡೆದುಕೊಳ್ಳುತ್ತಾನೆ. ಸದ್ಯ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಎಕ್ಸ್​ನಲ್ಲಿ ಇವರ ವಿಡಿಯೋ ಹಂಚಿಕೊಂಡಿದ್ದಾರೆ. ಹಲವರು ಈತನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮೊದಲಿಗೆ ಸಾಗರದ ಅಲೆಗಳು ದಡಕ್ಕೆ ಬಂದು ಬಡಿಯುವ ಚಿತ್ರಣದಿಂದ ದೃಶ್ಯ ಶುರುವಾಗುತ್ತದೆ. ಅಲ್ಲೊಬ್ಬ ವ್ಯಕ್ತಿ ಟೋಪಿ ಧರಿಸಿ ಬೋರ್ಡ್​ ಹಿಡಿದು ಕುಳಿತಿರುತ್ತಾನೆ. ಅವನಲ್ಲಿಗೆ ತೆರಳಿ, ಅವನ ಬೋರ್ಡ್​ನ್ನು ತೋರಿಸುತ್ತಾರೆ. ನಂತರ ಬೋರ್ಡ್​ನಲ್ಲಿ ಉಲ್ಲೇಖಿಸಿರುವುದುನ್ನು ಓದುತ್ತಾರೆ ಮತ್ತು ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ. ನಂತರ ಹಂಚಿಕೊಂಡಿರುವ ಈ ವಿಡಿಯೋಗೆ ತಲೆಬರಹ ಹೀಗೆ ಕೊಟ್ಟುಕೊಂಡಿದ್ದಾರೆ. `ಎಂದು ಊಹಿಸದ ಅಚ್ಚರಿ ವಿಚಾರ ಇದು' ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರೆದು, ನೋಡಿ ಇಲ್ಲಿ ಕುಳಿತುಕೊಂಡಿರುವ ಈ ವ್ಯಕ್ತಿ ಹೆಸರು ಪೃಥ್ವಿ ರಾಜ್​ ಬೊಹ್ರಾ. ಈತ ಬೇರೆಯವರ ಕಷ್ಟ ಕೇಳಿಸಿಕೊಳ್ಳಲು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಾನೆ. ಇದು ನಗರದ ಒಂಟಿ ಜೀವನಕ್ಕೆ ನಯಾ ಪರಿಹಾರವೇ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವುದಕ್ಕೆ ಎಷ್ಟು?

ಆರ್ಥಿಕ ನಗರಿ ಮುಂಬೈನಲ್ಲಿ ಮನುಷ್ಯ ಮನುಷ್ಯನಿಗೆ ಸಮಯ ಕೊಟ್ಟುಕೊಳ್ಳೋಕೆ ಬಿಡುವೇ ಇರೋದಿಲ್ಲ. ಈ ಬಿಜಿ ನಗರವನ್ನು ಕಂಡು ಹುಟ್ಟಿಕೊಂಡಿದ್ದೆ ಡಬ್ಬವಾಲ ಕಾನ್ಸೆಪ್ಟ್​. ಇವರು ಮುಂಬೈ ರೈಲಿನಲ್ಲಿ ಪ್ರಯಾಣಿಸುವವರಿಗೆ ಸರಿಯಾದ ಸಮಯಕ್ಕೆ ಊಟ-ತಿಂಡಿ ತಲುಪಿಸುತ್ತಾರೆ. ಇಂತಹ ಇಕ್ಕಟ್ಟಿನಲ್ಲಿ ಸಾಗುವ ಬಾಂಬೆಯ ಜನರು ಇನ್ನು ತಮ್ಮ ತಮ್ಮ ಫೀಲಿಂಗ್ಸ್​ಗಳಿಗೆ ಸಮಯನಾದ್ರು ಕೊಟ್ಟಿಕೊಳ್ಳೋದು ಎಲ್ಲಿಂದ.
ಹೀಗಾಗಿ, ಇದನ್ನೇ ಆದಾಯದ ಟ್ರಿಕ್​ ಆಗಿ ಪರಿವರ್ತನೆ ಮಾಡಿಕೊಂಡ  ಪೃಥ್ವಿ ರಾಜ್​ ಬೊಹ್ರಾ,  ತನ್ನ ಸೇವೆಗಳನ್ನು ಜನರಿಗೆ ಹೀಗೆ ನೀಡುತ್ತಾನೆ.  ನಿತ್ಯವೂ ಆಫೀಸು, ಮನೆಯಲ್ಲಿ ಆಗುವ ನೋವುಗಳನ್ನು ಹಂಚಿಕೊಳ್ಳಲು 250 ರೂ. ಪಾವತಿ ಮಾಡಬೇಕಾದರೆ. 500 ರೂ. ಗಂಭೀರವಾದ ವಿಚಾರ ಹೇಳಿಕೊಳ್ಳಲು. ಇನ್ನೂ 1000 ರೂಪಾಯಿ ಕೊಟ್ಟರೆ, ಆತನೂ ನಿಮ್ಮೊಂದಿಗೆ ಜೋರಾಗಿ, ಅತ್ತು ಕರೆದು ನಿಮಗೆ ಸಮಾಧಾನ ಮಾಡುತ್ತಾನೆ.
ವಿಜಯ್ ಶೇಖರ್ ಶರ್ಮಾ  ಹೀಗೆ ಹೇಳುತ್ತಾರೆ, ಈ ವ್ಯಕ್ತಿ ನನಗೆ ವಿವರಿಸಿದ್ದು ಹೀಗೆ, ಈತ ಎಲ್ಲರ ದುಃಖ ಕೇಳಿಸಿಕೊಳ್ಳುತ್ತಾನಂತೆ. ಯಾರಿಗೂ ತಮ್ಮ ಜಡ್ಜ್​ಮೆಂಟ್ ಹೇಳೋದಿಲ್ಲ. ಕೆಲವರು ತಮ್ಮ ದುಃಖ ಹೇಳಿಕೊಂಡು ಸಮಾಧಾನವಾಗಿ ಹೊರಟ ನಿರ್ದರ್ಶನಗಳೂ ಇವೆ ಎಂದು ಹೇಳಿದ್ದಾರೆ. ಪೃಥ್ವಿ ರಾಜ್ ತತ್ವ ಮತ್ತು ಮನಸ್ಸಿನ ಶಾಸ್ತ್ರದ ಬಗ್ಗೆ ಆಳವಾದ ಜ್ಞಾನ ಉಳ್ಳವರು. ಹೀಗಾಗಿ, ಅಕಸ್ಮಾತ್​ ತನ್ನ ಗ್ರಾಹಕರಿಗೆ ಸಲಹೆಯ ಅವಶ್ಯಕತೆ ಇದ್ದರೆ ಅದನ್ನು ನೀಡುವುದಾಗಿ ಆತನು ಹೇಳಿದ್ದಾನೆ ಎಂದು ಅವರು ಸ್ಪಷ್ಟಪಡಿಸಿದರು. 

ನೆಟ್ಟಿಗರು ಏನಂತಾರೆ?

ಪೃಥ್ವಿ ಅವರ ಈ ಕಾರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದು ವಿಚಿತ್ರವಾಗಿದ್ದರೂ ಸಹ ಅರ್ಥಪೂರ್ಣವಾದದ್ದು ಎಂದು ಹಾಡಿ ಹೊಗಳಿದ್ದಾರೆ, (ಏಜೆನ್ಸೀಸ್​).