ಮೆರವಣಿಗೆ ನೆಪದಲ್ಲಿ ನಡುರಸ್ತೆಯಲ್ಲೇ ಕಾರು ಬ್ಲಾಸ್ಟ್! 
ದೇಶ

ಮೊಹರಂ ಮೆರವಣಿಗೆ ಅವಾಂತರ: 40 ಅಡಿ ಎತ್ತರಕ್ಕೆ ಕಾರು ಕಟ್ಟಿ ಬ್ಲಾಸ್ಟ್; ಕ್ರೇನ್ ಮಾಲೀಕ ಸೇರಿ ನಾಲ್ವರ ಮೇಲೆ FIR! Muharram Car Blast

ಪ್ರಮುಖ ಮುಖ್ಯಾಂಶಗಳು

  • ಮೆರವಣಿಗೆ ನೆಪದಲ್ಲಿ ನಡುರಸ್ತೆಯಲ್ಲೇ ಕಾರು ಬ್ಲಾಸ್ಟ್!
  • ಉಜ್ಜೈನ್‌ನಲ್ಲಿ ನಡೆದ ಈ ಭೀಕರ ಘಟನೆಯ ವಿಡಿಯೋ ವೈರಲ್
  • ಪೊಲೀಸರು ಆಯೋಜಕರು ಹಾಗೂ ಕ್ರೇನ್ ಮಾಲೀಕ ಸೇರಿ ನಾಲ್ವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ
ಉಜ್ಜೈನ್​​: ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಸುಮಾರು 40 ಅಡಿ ಎತ್ತರದಲ್ಲಿ ವಾಹನವೊಂದನ್ನು ಕಟ್ಟಿ ಅದರಲ್ಲಿ ಪಟಾಕಿಗಳನ್ನು ತುಂಬಿ ಗಾಡಿಯನ್ನು ಸ್ಪೋಟಿಸಿರುವ (Muharram Car Blast) ಘಟನೆ ವರದಿಯಾಗಿದೆ.
ಈ ಘಟನೆಯ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ಆಗಿದ್ದು, ಎಚ್ಚೆತ್ತ ಪೊಲೀಸ್​ ಇಲಾಖೆ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾಗಿ ತಿಳಸಿದೆ.

ಮತ್ತೆ ಮರಳಿ ಬಂದಿದ್ದಾರೆ!

ಈ ಘಟನೆಯು ಜೂನ್​ 24 ರಂದು ಬದ್​ನಗರ್​ ಎಂಬಲ್ಲಿ ನಡೆದಿದ್ದು, ಮೊಹರಂ ಮೆರವಣಿಗೆ ಸಮಯದಲ್ಲಿ ಕ್ರೇನ್​ ಮೂಲಕ ವಾಹನವೊಂದನ್ನು ಸುಮಾರು 40 ಅಡಿಗೆ ಎತ್ತಿ ಕಟ್ಟಿದ್ದಾರೆ. ಆ ವಾಹನದ ಮೇಲೆ ಮತ್ತೆ ಮರಳಿ ಬಂದಿದ್ದಾರೆ ಎಂದು ಬರೆದಿದ್ದು, ವಾಹನದಲ್ಲಿ ಪಟಾಕಿ ಮುಂತಾದ ಸ್ಪೋಟಕಗಳನ್ನು ಒಮ್ಮೆಲೆ ಸ್ಪೋಟಿಸಿದ ಕಾರಣ ಕಾರು ಸಿಡಿದು ಸುಟ್ಟು ಬುದಿಯಾಗಿದೆ.
ಈ ಘಟನೆ ತೀವ್ರ ವಿರೋಧವನ್ನು ಪಡೆದಂತೆ ಮೆರವಣಿಗೆಯ ಆಯೋಜಕರಾದ ಶೋಯೆಬ್ ಖಾನ್, ತಾಲೀಮ್ ಖಾನ್ ಮತ್ತು ಜಾಹಿದ್ ಖಾನ್ ಹಾಗೂ ಕ್ರೇನ್ ಮಾಲೀಕ ಗೋಪಾಲ್ ಮಾಲಿ ಎನ್ನುವವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ASP) ಕರಣ್ ದೀಪ್ ಸಿಂಗ್, ಆಯೋಜಕರು ಕೇವಲ ಮೆರವಣಿಗೆಗೆ ಮಾತ್ರ ಪೊಲೀಸರ ಅನುಮತಿ ಪಡೆದಿದ್ದರು. ಹೀಗೆ ನಡು ರಸ್ತೆಯಲ್ಲಿ ವಾಹನವನ್ನು ಸ್ಪೋಟಿಸಿರುವುದು ಅಪರಾಧವಾಗಿದ್ದು ಆಯೋಜಕರ ಮೇಲೆ ಪ್ರಕರಣ ದಾಖಲಿಸಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ, (ಏಜನ್ಸೀಸ್​).