ತನ್ನ ಜೊತೆಗೆ ಇತರೆ 7 ಜನ ಸಂಸದರನ್ನು ಬಿಜೆಪಿಗೆ ಕರೆತಂದ ರಾಘವ್
- ಆಮ್ ಆದ್ಮಿ ಪಕ್ಷದಿಂದ ಹೊರಬಂದ ರಾಘವ್ ಚಡ್ಡಾ
- ಎಎಪಿಯಿಂದ ಬಿಜೆಪಿಗೆ ಜಿಗಿದ ಚಡ್ಡಾ
- ತನ್ನ ಜೊತೆಗೆ ಇತರೆ 7 ಜನ ಸಂಸದರನ್ನು ಬಿಜೆಪಿಗೆ ಕರೆತಂದ ರಾಘವ್
ನವದೆಹಲಿ: ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷ (AAP) ದ ರಾಜ್ಯ ಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿದಿದ್ದ ಸಂಸದ ರಾಘವ್ ಚಡ್ಡಾ ಇದೀಗ ಭಾರತೀಯ ಜನತಾ ಪಕ್ಷ (BJP) ವನ್ನು ಸೇರಿದ್ದಾರೆ. ಇವರ ಜೊತೆಗೆ ಆಮ್ ಆದ್ಮಿ ಪಕ್ಷದ 2/3 ಸಂಸದರು ಬಿಜೆಪಿಯನ್ನು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಘವ್ ಜೊತೆ ಬಂದ ಸಂಸದರಾರು?
ರಾಘವ್ ಚಡ್ಡಾ, ಇದಾಗಲೇ ಎಎಪಿಯನ್ನು ತೊರೆದು ಬಿಜೆಪಿ ಸೇರಿದ್ದರೆ, ಇವರಿಗೆ ಬೆಂಬಲ ಎಂಬಂತೆ ಸ್ವಾತಿ ಮಹಿವಾಲ್ (ದೆಹಲಿ), ಹರ್ಭಜನ್ ಸಿಂಗ್ (ಪಂಜಾಬ್), ಸಂದೀಪ್ ಪಾಠಕ್ (ಪಂಜಾಬ್), ಅಶೋಕ್ ಮಿತ್ತಲ್ (ಪಂಜಾಬ್), ರಜೀಂದರ್ ಗುಪ್ತಾ (ಪಂಜಾಬ್) ಮತ್ತು ವಿಕ್ರಮ್ ಸಹಾನಿ (ಪಂಜಾಬ್) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಆಮ್ ಆದ್ಮಿ ಪಕ್ಷದಲ್ಲಿ 10 ಜನ ಸಂಸದರಿದ್ದು, ಅದರಲ್ಲಿ ರಾಘವ್ ಚಡ್ಡಾರನ್ನು ಸೇರಿಸಿ 7 ಜನ ಸಂಸದರು ಬಿಜೆಪಿ ಸೇರಲಿದ್ದಾರೆ. ಈ ಮೂಲಕ ರಾಜ್ಯಸಭೆಯಲ್ಲಿದ್ದ ಎಎಪಿ ಸಂಸದರಲ್ಲಿ 2/3 ಸಂಸದರು ಬಿಜೆಪಿ ಪಾಲಾಗರಿದ್ದಾರೆ.
ಪಕ್ಷ ಸರಿಯಾದ ಸ್ಥಾನಮಾನ ನೀಡಿಲ್ಲ!
ಈ ಕುರಿತು ಮಾತನಾಡಿರುವ ರಾಘವ್ ಚಡ್ಡಾ ನನ್ನ ಜೊತೆ ಈಗ ಪಕ್ಷ ಬಿಡಲು ಮುಂದಾಗುತ್ತಿರುವವರು, ಪಕ್ಷದಲ್ಲಿ ಸುಮಾರು 10-15 ವರ್ಷಗಳಿಂದ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನ ನೀಡದ ಕಾರಣ ಎಎಪಿಯನ್ನು ತೊರೆದು ಬಿಜೆಪಿಯನ್ನು ಸೇರಲಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.
ಇದು ಆಪರೇಷನ್ ಕಮಲದ ಕರಾಳ ಮುಖ
ರಾಘವ್ ಚಡ್ಡಾ ಮತ್ತು ಇತರ ಎಂಪಿಗಳು ಬಿಜೆಪಿ ಸೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್ದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಇದು ಆಪರೇಷನ್ ಕಮಲದ ಕರಾಳ ಮುಖ, ಇದು ವಿರೋಧ ಪಕ್ಷವನ್ನು ಮುಗಿಸುವ ಸಂಚೆಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್).