ಸೊಸೆಗೆ ಮನಸೋ ಇಚ್ಛೆ ಹೊಡೆಯುತ್ತಿರುವ ಅತ್ತೆ
- ಮೊದಲ ರಾತ್ರಿ ಬೇಡ ಎಂದಿದ್ದಕ್ಕೆ ಸೊಸೆಗೆ ಅತ್ತೆಯ ಧರ್ಮದೇಟು
- ನಾನು ನನ್ನ ಪ್ರೀಯಕರನೊಂದಿಗೆ ಓಡಿ ಹೋಗುತ್ತೇನೆ ಎಂದ ಸೊಸೆ
- ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಕಾರಾತ್ಮಕ, ಮಾಹಿತಿಯುಳ್ಳ ಅಥವಾ ತೆರೆಮರೆಯಲ್ಲಿರುವ ಪ್ರತಿಭೆಗಳಿಗೆ ವೇದಿಕೆಯಾಗುವ ಬದಲಿಗೆ, ಕೇವಲ ವೀಕ್ಷಣೆಯನ್ನು ಪಡೆಯಲು ಚಿತ್ರವಿಚಿತ್ರ ರೀತಿಯ ವಿಡಿಯೋಗಳು ವೈರಲ್ (Viral Video) ಆಗುತ್ತಿದೆ.
ಕೆಲದಿನಗಳ ಹಿಂದೆ ತನ್ನ ಹೆಂಡತಿಯನ್ನೇ ಬಾಡಿಗೆಗೆ ನೀಡುವ ಮತ್ತು ತಾನು ಪ್ರೀತಿಸಿದ ಹುಡುಗಿ ಬೇರೋಬ್ಬನನ್ನು ಮದುವೆಯಾದಳೆಂದು ಆಕೆಗೆ ಬಂದೂಕಿನಿಂದ ಗುಂಡು ಹಾರಿಸಿದ ಘಟನೆಗಳು ಫುಲ್ ವೈರಲ್ ಆಗಿದ್ದವು. ಈಗ ಇದೇ ರೀತಿಯ ಇನ್ನೊಂದು ವಿಚಿತ್ರ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ವೈರಲ್ ವಿಡಿಯೋನಲ್ಲಿ ಒಬ್ಬ ಮಹಿಳೆ,ನವ ವಿವಾಹಿತ ಮಹಿಳೆಗೆ ಹೊಡೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.
ಮೊದಲ ರಾತ್ರಿ ಬೇಡ ಅಂದಿದ್ದಕ್ಕೆ ಬೆಂಡೆತ್ತಿದ ಅತ್ತೆ!
ವೈರಲ್ ಆದ ವಿಡಿಯೋ ಉತ್ತರಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ನಡೆದ ಘಟನೆಯದ್ದಾಗಿದೆ ಎಂದು ವರದಿಯಾಗಿದೆ. ವಿಡಿಯೋನಲ್ಲಿ ನವವಧುವಿನ ಸುತ್ತ ಸುಮಾರು ಜನ ಕುಳಿತಿದ್ದು, ಆ ಹುಡುಗಿಯು ನಾನು ನಿನ್ನ ಮಗನೊಂದಿಗೆ ಮೊದಲ ರಾತ್ರಿ ಆಚರಿಸಿ ಕೊಳ್ಳುವುದಿಲ್ಲ.
ಇನ್ನೇನು ಸ್ವಲ್ಪ ಹೊತ್ತಿನಲ್ಲಿ ನನ್ನ ಪ್ರೀಯಕರ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾನೆ ಎಂದು ಹೇಳುವುದನ್ನು ಕೇಳಬಹುದಾಗಿದೆ. ಈ ಮಾತನ್ನು ಕೇಳಿಸಿಕೊಂಡ ಅತ್ತೆಯು, ಸೊಸೆಯ ಮೇಲೆ ಏಕಾಏಕಿ ಎರಗಿ ಮನಸೋ ಇಚ್ಛೇ ಥಳಿಸಿರುವುದು ವಿಡಿಯೋನಲ್ಲಿ ಚಿತ್ರೀಕರಣವಾಗಿದೆ. ಆದರೆ ಈ ಕುರಿತು ಇಲ್ಲಿವರೆಗೆ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿರದ ಕಾರಣ ಅಂತೆ-ಕಂತೆಗಳನ್ನು ಸೇರಿಸಿ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಿವಿಗಳು ನೆಟ್ಟಗಾಗಿವೆ. ಆ ಹುಡುಗಿಗೆ ಮದವೆ ಇಷ್ಟವಿಲ್ಲದಿದ್ದರೆ ಮೊದಲೇ ತಿಳಿಸಿಬೇಕಿತ್ತು, ಈಗ ಈ ಡ್ರಾಮಾ ಮಾಡುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಒಬ್ಬರು ಹೇಳಿದೆ, ಆ ಹುಡುಗಿ ಏನೇ ತಪ್ಪನ್ನು ಮಾಡಿರಲಿ ಆಕೆಯ ಮೇಲೆ ಕೈ ಎತ್ತಿದ್ದು ತಪ್ಪು ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಕಾಲದ ಹುಡುಗಿಯರು ಮೊದಲು ಮದುವೆಯಾಗುತ್ತಾರೆ, ನಂತರ ತಮ್ಮ ಪ್ರೀಯಕರನೊಂದಿಗೆ ಓಡಿ ಹೋಗುತ್ತಾರೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ,(ಏಜನ್ಸೀಸ್).