ದೆಹಲಿ ಮೆಟ್ರೋ ರೈಲಿನೊಳಗೆ ನುಗ್ಗಿದ ಮಂಗ
- ದೆಹಲಿ ಮೆಟ್ರೋ ರೈಲಿನೊಳಗೆ ನುಗ್ಗಿದ ಮಂಗ
- ಪ್ರಯಾಣಿಕರ ಸೀಟ್‌ಗಳ ಮೇಲೆ ಕೋತಿಯ ಓಡಾಟ
- ದೆಹಲಿ ಮೆಟ್ರೋದ ಪಿಂಕ್ ಲೈನ್‌ನ ಹಳೆಯ ಘಟನೆ ವೈರಲ್
Monkey in the metro train
ಅಸಲಿಗೆ ಈ ವಿಡಿಯೋ ಇಗೀನದಲ್ಲ. ಇದು ‘ದೇಶದ ಏಕೈಕ ರಾಪಿಡ್ ಟ್ರೈನ್’ ನಮೋ ಭಾರತ್ ರೈಲಿನ ವಿಡಿಯೋ ಎಂದು ಕೆಲವರು ಶೇರ್ ಮಾಡಿದ್ದಾರೆ. ವಾಸ್ತವದಲ್ಲಿ ಇದು ದೆಹಲಿ ಮೆಟ್ರೋದ ಪಿಂಕ್ ಲೈನ್‌ನಲ್ಲಿ ನಡೆದ ಹಳೆಯ ಘಟನೆಯಾಗಿದೆ. ಆದರೆ, ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ.
ವೈರಲ್ ಪೋಸ್ಟ್‌ಗಳ ಪ್ರಕಾರ, ಸರಾಯ್ ಕಾಲೆ ಖಾನ್ ನಿಲ್ದಾಣದ ಸಮೀಪ ದೆಹಲಿ ಮೆಟ್ರೋ ರೈಲಿನ ಕೋಚ್‌ಗೆ ಕೋತಿಯೊಂದು ನುಗ್ಗಿತ್ತು. ಭದ್ರತಾ ವ್ಯವಸ್ಥೆಯನ್ನು ದಾಟಿ ಒಳಬಂದ ಕೋತಿ, ಪ್ರಯಾಣಿಕರ ಆಸನಗಳ ಮೇಲೆ ಓಡಾಡಿದ್ದಲ್ಲದೆ ಮಹಿಳಾ ಕೋಚ್‌ನಲ್ಲೂ ಕಾಣಿಸಿಕೊಂಡಿತ್ತು.
ಮೆಟ್ರೋ ಒಳಗೆ ಮಂಗ ಹೇಗೆ ಬಂತು?
ಕೋತಿ ಏಕಾಏಕಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದರು. ಮತ್ತೊಂದೆಡೆ, ಕೆಲವರು ತಮ್ಮ ಮೊಬೈಲ್‌ನಲ್ಲಿ ಅದರ ವಿಡಿಯೋ ಚಿತ್ರೀಕರಿಸಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಇದೀಗ ಹಳೆಯ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋತಿ ಮೆಟ್ರೋ ರೈಲಿನೊಳಗೆ ಹೇಗೆ ಬಂತು ಎಂಬ ಬಗ್ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್).